Janataa24 NEWS DESK

ವಾಹನ ಸವಾರರು ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ, ಅಪಘಾತಕ್ಕೆ ರಸ್ತೆ ವ್ಯವಸ್ಥೆ ಕಾರಣವಾದರೆ ಪಿಡಬ್ಲುಡಿ ಹೊಣೆ :ಡಿವೈಎಸ್ಪಿ “ಕೆ ಎಸ್ ವೆಂಕಟೇಶ್ ನಾಯ್ಡು” ಸ್ಪಷ್ಟಣೆ
ಮಧುಗಿರಿ: ಸಾರ್ವಜನಿಕರು ಅಪಘಾತದಲ್ಲಿ ಗಾಯಗೊಂಡರೆ ಅಥವಾ ಸಾವನ್ನಪ್ಪಿದರೆ ಅದಕ್ಕೆ ರಸ್ತೆಯಲ್ಲಿನ ಗುಂಡಿ ಹಾಗೂ ಜಂಗಲ್ ಸಮಸ್ಯೆ ಕಾರಣವಾದರೆ ಲೋಕೋಪಯೋಗಿ ಇಲಾಖೆಯ
ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಡಿವೈಎಸ್ಪಿ ಕೆಎಸ್ ವೆಂಕಟೇಶ್ ನಾಯ್ಡು ಸ್ಪಷ್ಟಪಡಿಸಿದ್ದಾರೆ.
ಪಟ್ಟಣದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ವಾಹನ ಸವಾರರು ವಾಹನ ಇನ್ಶೂರೆನ್ಸ್ ಇಲ್ಲದೆ ಅಪಘಾತಕ್ಕೆ ಒಳಪಟ್ಟರೆ ಅದಕ್ಕೆ ವಿಮೆ ಬರುವುದಿಲ್ಲ ಎಂದು ತಿಳಿಸುತ್ತಾ. ರಸ್ತೆಯಲ್ಲಿ ಉಬ್ಬುಗಳು ಹಾಗೂ ಕ್ಯಾಟ್ ಐಸ್ ಅಳವಡಿಸಲು ಹಲವು ಬಾರಿ ಪಿಡಬ್ಲೂಡಿ ಇಲಾಖೆಗೆ ತಿಳಿಸಿದ್ದರೂ ಕ್ರಮವಹಿಸಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಪಿಡಬ್ಲ್ಯೂಡಿ ಇಲಾಖೆ ನಿರ್ಲಕ್ಷದಿಂದ ರಸ್ತೆಯಲ್ಲಿ ಅಪಘಾತ ಹೆಚ್ಚಾಗಲು ಅವು ಕಾರಣವಾಗಿದ್ದು ಸುರಕ್ಷತಾ ಸೌಲಭ್ಯಇಲ್ಲವಾದರೆ ಅಂತಹ ಅಪಘಾತ ಪ್ರಕರಣದಲ್ಲಿ ಇಲಾಖೆಯನ್ನೆ ಗುರಿಯಾಗಿಸಿ ಕೇಸು ದಾಖಲಿಸುತ್ತೇವೆ ಎಂದರು. ಸವಾರರು ಸಹ ನಿಮ್ಮ ಜೀವವನ್ನು ಬಲಿಕೊಟ್ಟು ಸಂಸಾರವನ್ನು ಅನಾಥ ಮಾಡಬೇಡಿ. ನಿಮ್ಮ ಜೀವಕ್ಕೆ ಬೆಲೆಯಿದ್ದು ಇದರಿಂದ ದೇಶದ ಮಾನವ ಸಂಪತ್ತು ಹಾಗೂ ಆರ್ಥಿಕ ಸಂಪತ್ತು ಕೂಡ ನಷ್ಟವಾಗುತ್ತದೆ ಎಂದು ತಿಳಿಸಿದರು.
ಇಂದಿನಿಂದ ಖಡಕ್ ಪೊಲೀಸ್ ಕಾರ್ಯ ಶುರು :
ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಸಾರ್ವಜನಿಕರಿಗೆ ಅಗತ್ಯ
ರಕ್ಷಣೆ ನೀಡಲಾಗಿದೆ. ಆದರೂ ಈ ಬಾರಿ ಕಟ್ಟುನಿಟ್ಟಾಗಿ ಯಾರ
ಮುಲಾಜಿಲ್ಲದೆ ಕೆಲಸ ಮಾಡುತ್ತೇವೆ. ಸಾರ್ವಜನಿಕರು ಕಾನೂನು
ಉಲ್ಲಂಘಿಸಿದರೆ ಕ್ರಮ ನಿಶ್ಚಿತ.
ಎಲ್ಲ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಗೂ ಅಗತ್ಯ ದಾಖಲೆ ಇಲ್ಲದೆ ಸಂಚರಿಸುವಂತಿಲ್ಲ. ಅಂತವರಿಗೆ ದಂಡ ಬೀಳಲಿದೆ ಎಂದರು.
ಒಂದು ವೇಳೆ ದಂಡ ಕಟ್ಟದಿದ್ದರೆ ಸಂಬಂಧಿಸಿದ ದಾಖಲೆ ತರಬೇಕು.
ಹಾಗೆಯೇ ಹೆಲ್ಮೆಟ್ ಕೊಂಡುಕೊಳ್ಳಬೇಕು. ಪಟ್ಟಣದಲ್ಲಿನ ಕ್ರೀಡಾಂಗಣದಲ್ಲಿ ಬೀಟ್ ವ್ಯವಸ್ಥೆ ಹೆಚ್ಚಿಸಿ ರಸ್ತೆಗಳಲ್ಲಿನ ಪಾದಚಾರಿ ಮಾರ್ಗ ತೆರವುಗೊಳಿಸುತ್ತೇವೆ ಎಂದರು.
ಕ್ರಿಕೆಟ್ ಬೆಟ್ಟಿಂಗ್ಗೆ ಕಡಿವಾಣ :
ತಾಲೂಕಿನಲ್ಲಿ ಅಕ್ರಮವಾಗಿ ಮರಳು ಬೇರೆಡೆ ಸಾಗಿಸುತ್ತಿಲ್ಲ ಆದರೆ ಕ್ರಿಕೆಟ್ ಬೆಟ್ಟಿಂಗ್ ನಿಂದಾಗಿ ಯುವ ಜನರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಕೆಲವು ಬುಕ್ಕಿಗಳನ್ನು ಈಗಾಗಲೇ ಗುರುತಿಸಿದ್ದು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ರಸ್ತೆ ಅಪಘಾತಕ್ಕೆ ಪ್ರಮುಖ ಕಾರಣಗಳು ಹಾಗೂ ಅಪಘಾತಗಳ ತಡೆಗೆ ಮುನ್ನೆಚ್ಚರಿಕೆ ಕ್ರಮ:
ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಮಿತಿ ಮೀರಿದ ವೇಗದಿಂದ ವಾಹನ ಚಲಾಯಿಸುವಿಕೆ, ವಾಹನಗಳನ್ನು ಹಿಂದಿಕ್ಕುವ ತವಕ, ರಸ್ತೆ ನಿಯಮಗಳ ಉಲ್ಲಂಘನೆ, ಪಾದಚಾರಿಗಳ ಬಗ್ಗೆ ನಿರ್ಲಕ್ಷ್ಯ, ಪುರಾತನ ಶಿಥಿಲಗೊಂಡಿರುವ ವಾಹನದ ಉಪಯೋಗ, ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವುದು, ಹೆಲ್ಮೆಟ್ ಧರಿಸುವಲ್ಲಿ ತೋರುವ ಉದಾಸೀನತೆ ಹೀಗೆ ಹಲವಾರು ಕಾರಣಗಳಿಂದ ರಸ್ತೆ ಅಪಘಾತಗಳು ನಡೆಯುತ್ತಿವೆ. ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಾಳ್ಮೆ ಹಾಗೂ ಜಾಣತನ ಜವಾಬ್ದಾರಿಯ ಮೂಲಕ ತಪ್ಪಿಸಬಹುದು ಎಂದು ಮದುಗಿರಿ ಡಿವೈಎಸ್ಪಿ ಕೆಎಸ್ ವೆಂಕಟೇಶ್ ನಾಯ್ಡು ರವರು ಸಾರ್ವಜನಿಕರಿಗೆ ಮಾಧ್ಯಮ ಮೂಲಕ ತಿಳಿಪಡಿಸಿದರು.
೨೦೨೧ ರಲ್ಲಿ ೧೩೯ ಪ್ರಕರಣ ನಡೆದು ೧೩೬ ಮಂದಿ ಮೃತಪಟ್ಟು ೩೧೮ ಜನ ಗಾಯಗೊಂಡಿದ್ದಾರೆ. ಹಾಗೆಯೇ ೨೦೨೨ ರಲ್ಲಿ ೩೪೮ ಪ್ರಕರಣ ದಾಖಲಾಗಿ ೧೭೩ ಜನ ಮೃತಪಟ್ಟು ೪೧೨ ಮಂದಿ ಗಾಯಗೊಂಡಿದ್ದಾರೆ.
೨೦೨೩ ಆ.೧೬ ರೊಳಗೆ ೨೪೦ ಪ್ರಕರಣ ದಾಖಲಾಗಿ ೯೩ ಮಂದಿ ಮೃತಪಟ್ಟು ೨೯೧ ಜನ ಗಾಯೊಂಡಿದ್ದಾರೆ. ಇದರಲ್ಲೆ ಭಾಗಶಃ ಎಲ್ಲರೂ ಅಪಘಾತದಲ್ಲಿ ಸೇರಿದವರು. ಇದಕ್ಕಾಗಿ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದರು.
ಮದುಗಿರಿ ಡಿವೈಎಸ್ಪಿ ಕಚೇರಿಯಲ್ಲಿ ಡಿವೈಎಸ್ಪಿ ಅಧಿಕಾರಿಗಳಾದ ಕೆ ಎಸ್ ವೆಂಕಟೇಶ್ ನಾಯ್ಡು ರವರು ಪತ್ರಕರ್ತರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದರು.
ವರದಿ: ಆಬಿದ್ ಮಧುಗಿರಿ