Document

ಸಂಘಟನೆ ಎಂದಿಗೂ ಉದ್ಘಾಟನೆ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು:ಮಾಜಿ ಸಚಿವ ವೆಂಕಟರಮಣಪ್ಪ.

Janataa24 NEWS DESK

IMG 20230818 WA0015

ಸಂಘಟನೆ ಎಂದಿಗೂ ಉದ್ಘಾಟನೆ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು:ಮಾಜಿ ಸಚಿವ ವೆಂಕಟರಮಣಪ್ಪ.



ಪಾವಗಡ: ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಪಾವಗಡ ತಾಲೂಕು ಘಟಕದ ವತಿಯಿಂದ ಬುಧವಾರ ಪಟ್ಟಣದ ಹೊರವಲಯದ ಶ್ರೀ ಕಣಿವೇ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಸಮೀಪದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಂಘಟನಾ ಸಭೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.




ಈ ವೇಳೆ ಮಾಜಿ ಸಚಿವರಾದ ವೆಂಕಟರಮಣಪ್ಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ
ಅಂಬೇಡ್ಕರ್ ಅವರ ವಿಚಾರಧಾರೆ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು.

IMG 20230818 WA0010


ಸಂವಿಧಾನ ಶಿಲ್ಪಿ ಹಾಗೂ ವಿಶ್ವಕಂಡ ಮಹಾನ್ ನಾಯಕ ಡಾ. ಅಂಬೇಡ್ಕರ್ ಅವರಿಗೆ ಪ್ರತಿಯೊಬ್ಬರು ಗೌರವ ಸಲ್ಲಿಸಬೇಕು.
ಪ್ರತಿ ತಾಲೂಕಿನಲ್ಲಿ ಇದೇ ರೀತಿಯಲ್ಲಿ ಸಂಘಟನೆ ಮಾಡುವ ಮುಲಕ ಒಗ್ಗೂಡಿದರೆ ಮಾತ್ರವೇ ಇಂತಹ ಸಂಘಟನೆಯ ಬೆಳೆಯಲು ಸಾದ್ಯ ಎಂದರು.


ನಾವುಮಾಡುವ ಪ್ರತಿ ಕೆಲಸ ಸಮಾಜಮುಖಿಯಾಗಿರಬೇಕು. ಮತ್ತೊಬ್ಬರಿಗೆ ಸ್ಫೂರ್ತಿ ಯಾಗಿರಬೇಕು. ಬೆಸ್ಕಾಂ ನೌಕರರರು ಸೇವೆ ಶ್ಲಾಘನೀಯವಾಗಿದೆ. ನಿಮ್ಮ ಅತ್ಯುತ್ತಮ ಸೇವೆಗೆ ಸದಾಪ್ರೋತ್ಸಾಹ ನೀಡಲಿರುವುದಾಗಿ ತಿಳಿಸಿ, ಸಂಘದ ಎಲ್ಲಾ ಸದಸ್ಯರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.



ಪಧವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸವಲಿಂಗಪ್ಪ ಮಾತನಾಡಿ ವಿದ್ಯಾರ್ಥಿಗಳನ್ನು ಗೌರವವಾಗಿ ನಡೆಸಿಕೊಂಡು ಹೋಗಿ ಉತ್ತಮ ಸಂಸ್ಕಾರ ಸ್ಥಾನಮಾನಗಳನ್ನು ನೀಡಿದರೆ ಎಲ್ಲಾ ಕಡೆ ದೌರ್ಜನ್ಯವನ್ನು ನಿಲ್ಲಿಸಲು ಸಾದ್ಯ ಎಂದರು.

IMG 20230818 WA0012



ಡಾ. ಅಂಬೇಡ್ಕರ್ ಅವರು ದೇಶಕ್ಕಾಗಿ ತ್ಯಾಗ ಮಾಡಿದರು ಈ ದೇಶ ಅವರನ್ನು ಯಾವ ರೀತಿ ಬಳಸಿಕೊಂಡರು ಎಂಬುದಾಗಿ ತಿಳಿಯಲು ಇತಿಹಾಸ ನೋಡಿದ್ದೇವೆ.

ನಮಗಾಗಿ ಅಷ್ಟೊಂದು ತ್ಯಾಗ ಮಾಡಿದ್ದಾರೆ ನಾವು ಚೆನ್ನಾಗಿರಬೇಕು ಎಂಬುದಾಗಿ ಆದರೆ ನಾವು ನಮ್ಮ ಜನಾಂಗಕ್ಕೆ ಎಷ್ಟು ತ್ಯಾಗ ಮಾಡಿದ್ದೇವೆ ಎಂಬುದು ಎಲ್ಲರೂ ಅರಿತುಕೊಳ್ಳಬೇಕು ಎಲ್ಲಾ ಕಡೆ ದೌರ್ಜನ್ಯಗಳು ನಡೆಯುತ್ತವೆ ಆದರೆ ದೌರ್ಜನ ನಡೆಯುವ ಕಡೆ ಹೋಗುವುದು ಬೇಡ ಎಂದರು.



ಈ ವೇಳೆ ಇಲ್ಲಿನ ವಿದ್ಯುತ್‌ ಶಕ್ತಿ ಮಂಡಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಗಳ ಕಲ್ಯಾಣ ಸಂಸ್ಥೆಯ ಎಲ್ಲಾ ನೌಕರರು ಮತ್ತು ಗಣ್ಯರು ಉಪಸ್ಥಿತರಿದ್ದರು.



ವರದಿ

ಪಾವಗಡ: ಇಮ್ರಾನ್ ಉಲ್ಲಾ.

Document

Leave a Reply

Your email address will not be published. Required fields are marked *