Document

ನೀತಿ ಸಂಹಿತೆ ಜಾರಿ ಹಿನ್ನೆಲೆ ಚುನಾವಣಾ ಅಧಿಕಾರಿ ಎಮ್ ಎನ್ ಮಂಜುನಾಥ್ (ಕೆ ಎ ಎಸ್) ಹಾಗೂ ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್ ಸುದ್ದಿಗೋಷ್ಠಿ

Janataa24

NEWS DESK

IMG 20230330 WA0025

ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಇಂದು ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಎಮ್ ಎನ್ ಮಂಜುನಾಥ್ (ಕೆ ಎ ಎಸ್) ಹಾಗೂ ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್ ಅವರಿಂದ ಮಾಧ್ಯಮಗೋಷ್ಠಿ.

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮಾಹಿತಿಯನ್ನು ನೀಡಿದ ವೇಳೆ ಮಾತನಾಡಿದ ಚುನಾವಣಾ ಅಧಿಕಾರಿ ,

ದಿನಾಂಕ 29ರಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಚುನಾವಣೆ ಘೋಷಣ ಆದ ದಿನದಿಂದ ಹಿಡಿದು ಮತ ಎಣಿಕೆ ಮುಗಿಯುವವರೆಗೆ ಈ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ,

ದಿನದ 24 ಗಂಟೆಗಳ ಕಾಲ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ವಿಡಿಯೋಗ್ರಾಫಿ ಒಳಗೊಂಡಂತೆ ಬಹಳ ಕಟ್ಟೆಚ್ಚರದಿಂದ ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ,
ಜೊತೆಗೆ ಚುನಾವಣಾ ಪ್ರಚಾರಕ್ಕೆ ಹಲವು ನಿರ್ಬಂಧಗಳು ಕೂಡ ಇವೆ ಅವುಗಳೆಂದರೆ,
ಸಭೆ ಸಮಾರಂಭ ನಡೆಸಲು ಪೊಲೀಸರ ಅನುಮತಿ ಕಡ್ಡಾಯವಾಗಿದೆ, ಮಂದಿರ, ಮಸೀದಿ, ಚರ್ಚ್ ಗಳಲ್ಲಿ ,ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ,
ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿ ವರ್ಧಕ ಬಳಕೆ ಮಾಡುವಂತಿಲ್ಲ,
ವೈಯಕ್ತಿಕ ನಿಂದನೆ ಮತ್ತು ಜಾತಿ ನಿಂದನೆ ಮಾಡುವಂತಿಲ್ಲ,

ಅಭ್ಯರ್ಥಿಗಳು ಮತದಾರರಿಗೆ ಆಮಿಷವನ್ನು ಒಡ್ಡಿ ವೈಯಕ್ತಿಕವಾಗಿ ಅವಹೇಳನ ಮಾಡುವಂತಿಲ್ಲ,

ಜೊತೆಗೆ ಈ ಬಾರಿ 80 ವರ್ಷದ ಮೇಲ್ಪಟ್ಟ ಮತದಾರರಿಗೆ ಬ್ಯಾಲೆಟ್ ಪೇಪರ್ ಮೂಲಕ ಮನೆಯಲ್ಲೇ ಕುಳಿತು ಮತ ಚಲಾಯಿಸುವ ಅವಕಾಶವನ್ನು ಕಲ್ಪಿಸಿದೆ, ಅದಕ್ಕೆ ಸಂಬಂಧಪಟ್ಟಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ,

ಇನ್ನು ತುರುವೇಕೆರೆ ತಾಲೂಕಿನಲ್ಲಿ ಒಟ್ಟಾರೆ, ಜನವರಿ 5 ರಂದು ಪ್ರಚುರಪಡಿಸಿರುವ ಅಂತಿಮ ಮತದಾರರ ಪ್ರಕಾರ ಒಟ್ಟು ಮತದಾರರು 1,79, 958 ಇದ್ದು,
ಮತಚಲಾಯಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಅವೆಲ್ಲವನ್ನು ಕೈಗೊಳ್ಳಲಾಗುವುದು, ಈ ತಾಲೂಕಿನಲ್ಲಿ ಬಾಣಸಂದ್ರ, ಟಿ ಬಿ ಕ್ರಾಸ್, ಭೀಮನನಾರೆ, ಈ ಸ್ಥಳಗಳಲ್ಲಿ ಚೆಕ್ ಪೋಸ್ಟಗಳನ್ನು ನಿರ್ಮಿಸಲಾಗಿದ್ದು,
ಈ ಎಲ್ಲಾ ಚೆಕ್ಪೋಸ್ಟ್ ಗಳಲ್ಲಿ ನಮ್ಮ ಅಧಿಕಾರಿಗಳು ಕಟ್ಟೇಚ್ಚರದಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದರು,

ಇನ್ನು ಹೋಬಳಿ ಮತಗಟ್ಟೆಗಳ ಸಂಖ್ಯೆ.

ಕಸಬಾ -49
ತುರುವೇಕೆರೆ ಟೌನ್- 13 ದಂಡಿನ ಶಿವರ- 44 ದಬ್ಬೇಘಟ್ಟ -39 ಮಾಯಸಂದ್ರ -37
ಕಡಬ -17
ಸಿ ಎಸ್ ಪುರ -30

ಒಟ್ಟಾರೆ ತುರುವೇಕೆರೆ ತಾಲೂಕಿನ ಮತಗಟ್ಟೆಗಳು 182 ಇದ್ದು, ಗುಬ್ಬಿ ತಾಲೂಕಿನ ಮತಗಟ್ಟೆಗಳು 47 ಆಗಿವೆ ಎಂದು ಮಾಹಿತಿಯನ್ನು ನೀಡಿದರು.

IMG 20230330 WA0024

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *