Document

ಅಕ್ರಮವಾಗಿ ಮಧ್ಯ ದಸ್ತಾನು ಮಾಡಿದ್ದ ಮನೆಯ ಮೇಲೆ ದಾಳಿ

Janataa24

NEWS DESK

IMG 20230330 WA0009

ಅಕ್ರಮ ಮಧ್ಯ ದಸ್ತಾನು ಮಾಡಿದ್ದ ಮನೆಯ ಮೇಲೆ ದಾಳಿ ಮಾಡಿದ ಅಬಕಾರಿ ಪೊಲೀಸರು ಸುಮಾರು ಒಂದು ಲಕ್ಷದ ಮೌಲ್ಯದ ಅಕ್ರಮ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ.



ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಮಲ್ಲನಾಯಕನಹಳ್ಳಿ ಗ್ರಾಮದ ರವಿಕುಮಾರ್ ಎಂಬುವವರು ಚುನಾವಣೆ ನಿಮಿತ್ತ ಮನೆಯಲ್ಲಿಯೇ ಮಧ್ಯವನ್ನು ಶೇಖರಿಸಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಅಬಕಾರಿ ನಿರೀಕ್ಷಕ ರಾಮಮೂರ್ತಿ ನೇತೃತ್ವದ ತಂಡ ರವಿಕುಮಾರ್ ಎಂಬುವವರ ಮನೆಯ ಮೇಲೆ ದಾಳಿ ಮಾಡಿ 58 ಬಾಕ್ಸ್ ಗಳ ಅಕ್ರಮ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ.

VideoCapture 20230331 021047



ಅಬಕಾರಿ ನಿರೀಕ್ಷಕ ರಾಮಮೂರ್ತಿ ಮಾತನಾಡಿ, ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾರು ಸಹ ಅಕ್ರಮವಾಗಿ ಮಧ್ಯ ದಾಸ್ತಾನು ಮಾಡುವುದಾಗಲಿ ಅಥವಾ ಮಧ್ಯ ಹಂಚುವುದಾಗಲಿ ಮಾಡಬಾರದು. ಒಂದು ವೇಳೆ ಇಂತಹ ಚಟುವಟಿಕೆಗಳು ಕಂಡುಬಂದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

VideoCapture 20230331 021232



ಈ ಸಂದರ್ಭದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಮನು, ಪೇದೆಗಳಾದ ಶರಣಪ್ಪ ರಮೇಶ್ ಹಾಗೂ ಮುಂತಾದವರು ಇದ್ದರು.

ವರದಿ

ಮಧುಗಿರಿ: ಅಬಿದ್

Document

Leave a Reply

Your email address will not be published. Required fields are marked *