Janataa24 NEWS DESK
ಬಾದಾಮಿ
ಬಾದಾಮಿ ತಾಲೂಕಿನ ಕೆರೂರಿನಲ್ಲಿ”ನನ್ನ ಲೈಫ್ ನನ್ನ ಸ್ವಚ್ಚ ನಗರ” ಯೋಜನೆಯಡಿ ಕ್ಷಯರೋಗ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದಿ 20/05/2023 ರಂದು ಬಾದಾಮಿ ತಾಲೂಕಿನ ಕೆರೂರ ಪಟ್ಟಣ ಪಂಚಾಯತ ವ್ಯಾಪ್ತಿಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬಾಗಲಕೋಟ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಾಗರಾಭಿವೃದ್ಧಿ ಇಲಾಖೆ ಬಾಗಲಕೋಟ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಬಾಗಲಕೋಟ, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಟಾನ ಬಿಟಿಬಿ ಯೋಜನೆ ಬಾಗಲಕೋಟ,ಸಮುದಾಯ ಆರೋಗ್ಯ ಕೇಂದ್ರ ಕೆರೂರ, ಪಟ್ಟಣ ಪಂಚಾಯತ ಕೆರೂರ ಇವರ ಸಂಯುಕ್ತ ಆಶ್ರಯದಲ್ಲಿ, ಸ್ವಚ್ಛ ಭಾರತ್ ಮಿಷನ್ 2.0 ಯೋಜನೆ ಅಡಿಯಲ್ಲಿ ” ನನ್ನ ಲೈಫ್ ನನ್ನ ಸ್ವಚ್ಛ ನಗರ ” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಟ್ಟಣ ಪಂಚಾಯತ್ ಮುಖ್ಯಧಿಕಾರಿಗಳಾದ ವಸಂತ ಪವಾರ ಅವರು ಮಾತನಾಡಿ, “
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯ ಅಡಿಯಲ್ಲಿ, ನವೀಕರಿಸಿ, ಮರುಬಳಕೆ ಮಾಡಬಹುದಾದಂತಹ ವಸ್ತುಗಳ ಉತ್ಪಾಧನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅನುಸರಿಸುವ ಮೂಲಕ ಪರಿಸರವನ್ನು ರಕ್ಷಿಸುವ ಪ್ರಮುಖ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ಟಿಬಿಯಂತಹ ಸಾಂಕ್ರಮಿಕ ಖಾಯಿಲೆಗಳನ್ನು ತಡೆಗಟ್ಟಬಹುದು “ಎಂದು ತಿಳಿಸಿದರು.

ಕೆ.ಹೆಚ್.ಪಿ.ಟಿ ಬಿಟಿಬಿ ಯೋಜನೆ ಸಮುದಾಯ ಸಂಯೋಜಕರಾದ ಭುವನೇಶ್ವರಿ ಕುಲಕರ್ಣಿ ಅವರು ಮಾತನಾಡಿ, ಪರಿಸರ ಸ್ವಚ್ಛ ವಾಗಿಡುವ ಮೂಲಕ ಸ್ವಚ್ಛ ನಗರ ಮತ್ತು ಆರೋಗ್ಯವಂತ ಪಟ್ಟಣ ಮಾಡಬಹುದು, ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡಬಹುದಾದ ಸಂಕ್ರಾಮಿಕ ಖಾಯಿಲೆ ಟಿಬಿ ರೋಗದ ಕುರಿತು ಮಾತನಾಡಿ, ” ಎರಡು ವಾರಕ್ಕಿಂತ ಹೆಚ್ಚಿರುವ ಕೆಮ್ಮು, ಪದೇ ಪದೇ ಜ್ವರ ಬರುವದು, ತೂಕ ಕಡಿಮೆ ಆಗುವದು, ರಾತ್ರಿ ಸಮಯದಲ್ಲಿ ಬೆವರು ಕಾಣಿಸಿಕೊಳ್ಳುವದು ಮುಂತಾದ ಲಕ್ಷಣಗಳು ಕಂಡು ಬಂದರೆ, ಸರಕಾರಿ ಆಸ್ಪತ್ರೆಗೆ ಬಂದು ಕಫ ಪರೀಕ್ಷೆ ಮಾಡಿಸಬೇಕು, ಟಿಬಿ ಬಗ್ಗೆ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ ಕನಿಷ್ಠ ಆರು ತಿಂಗಳು ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಂಡರೆ, ಟಿಬಿ ರೋಗವನ್ನು ಸಂಪೂರ್ಣ ಗುಣಪಡಿಸಬಹುದು. ಚಿಕಿತ್ಸಾ ಅವಧಿಯಲ್ಲಿ ಟಿಬಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪೌಷ್ಟಿಕ ಆಹಾರದ ಸಲುವಾಗಿ 500 ರೂ ಗಳನ್ನು ಚಿಕಿತ್ಸೆ ಮುಗಿಯುವರೆಗೂ ಹಾಕುತ್ತಾರೆ, ಈ ಎಲ್ಲ ಮಾಹಿತಿಗಳನ್ನು ಅತಿ ಹೆಚ್ಚು ಜನರಿಗೆ ತಿಳಿಸುವ ಮೂಲಕ 2025 ನೇ ಇಸ್ವಿಯೊಳಗೆ “ಕ್ಷಯ ಮುಕ್ತ ಭಾರತ” ಮಾಡೋಣ ಎಂದು ತಿಳಿಸಿದರು. ವೇದಿಕೆಯ ಮೇಲೆ ವಿ. ಸಿ. ಪಾಟೀಲ ಪ್ರೌಢಶಾಲೆ ಶಿಕ್ಷಕರು, ಎಂ. ವಾಯ್.ಹೊಸಮನಿ ಪಟ್ಟಣ ಪಂಚಾಯತ್ ಅಭಿಯಂತರರು ಉಪಸ್ಥಿತರಿದ್ದರು. ವ್ಹಿ. ಎ.ನದಾಫ್ ಲೆಕ್ಕ ಪರಿಶೋಧಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಿದರು. ಸಿ. ಎಸ್.ಮಲಕನ್ನವರ ಪಟ್ಟಣ ಪಂಚಾಯತ ಆರೋಗ್ಯ ನೀರಿಕ್ಷಕರು ಕಾರ್ಯಕ್ರಮ ನಿರೂಪಿಸಿದರು.ಮಹಾದೇವಿ ಎನ್. ಬೀಳಗಿ ಸಿ. ಆರ್. ಪಿ.ಕೆರೂರು ಪಟ್ಟಣ ಪಂಚಾಯತ.
ಟಿಬಿ ಸ್ವಯಂ ಸೇವಕರಾದ ಶೀಲಾ ಗುತ್ತಣ್ಣವರ, ಮನೋಹರ ಕುದರಿ
ಸಮುದಾಯ ಸಂಘಟನೆಗಳ ತಾಲೂಕ ಒಕ್ಕೂಟದ ಉಪಾಧ್ಯಕ್ಷರು ಸುಮಂಗಲ ಗುತ್ತಣ್ಣವರ, ಸದಸ್ಯರು ಇಂದಿರಾ ಕಲಾದಗಿ, ರೇಣುಕಾ ಹಿರೇಮಠ
ಮತ್ತು ವಿವಿಧ ಸಮುದಾಯ ಸಂಘಟನೆಗಳಿಂದ ಮಹಿಳಾ ಸಂಘದ ಸದಸ್ಯರು,
ಪೌರ ಕಾರ್ಮಿಕರು ಭಾಗವಹಿಸಿದ್ದರು.
ಆರಂಭದಲ್ಲಿ ಸಮುದಾಯ ಸಂಘಟನೆ ಸದಸ್ಯರು, ಪೌರ ಕಾರ್ಮಿಕರು, ಅಧಿಕಾರಿಗಳು ಜಾತಾ ಕಾರ್ಯಕ್ರಮ ನಡೆಸಿದರು.
ವರದಿ
ಬಾಗಲಕೋಟೆ: ರಾಜೇಶ್. ಎಸ್. ದೇಸಾಯಿ