Document

ತುರುವೇಕೆರೆ : ಜೆಡಿಎಸ್ ಮತ್ತು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿಕೊಂಡ ಜೆಡಿಎಸ್ ತಾಲೂಕು ಎಸ್ಸಿ ಘಟಕದ ಅಧ್ಯಕ್ಷ ತಿಮ್ಮೆಶ್ ಹಾಗೂ ಕಾರ್ಯಕರ್ತರು

ತುರುವೇಕೆರೆ: ಮಂಜುನಾಥ್

ಪಟ್ಟಣದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರ ಕಚೇರಿಯಲ್ಲಿ. ಬೆಮೆಲ್ ಕಾಂತರಾಜು, ಹಾಗೂ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷರಾದ ಪ್ರಸನ್ನ ಅವರ ಸಮ್ಮುಖದಲ್ಲಿ ಸುಮಾರು 15ರಿಂದ 20 ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು. ಇನ್ನು ಪಕ್ಷ ಸೇರ್ಪಡೆ ನಂತರ ತಿಮ್ಮೇಶ್ ಮಾತನಾಡಿ ಎ ಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ನಾಯಕತ್ವದ ಈ ಪಕ್ಷದಲ್ಲಿ ನಾವುಗಳು ಜೊತೆಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿ ಈ ಪಕ್ಷಕ್ಕೆ ಸೇರಿಕೊಂಡಿದ್ದೇವೆ ಎಂದರು.

WhatsApp Image 2022 11 07 at 7.41.59 PM


ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ದಂಡಿನ ಶಿವರ ಕುಮಾರ್ ಮಾತನಾಡಿ.ಮಲ್ಲಿಕಾರ್ಜುನ್ ಖರ್ಗೆಯವರ ನಾಯಕತ್ವವನ್ನು ಮತ್ತು ಕಾಂಗ್ರೆಸ್ಸಿನ ಸಿದ್ಧಾಂತವನ್ನು ಒಪ್ಪಿ ಪಕ್ಷ ಸೇರ್ಪಡೆಗೊಂಡಿದ್ದೇವೆ .ಜೊತೆಗೆ ಮುಂದಿನ ದಿನಗಳಲ್ಲಿ ಈ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷ ನಿಷ್ಠೆಯಿಂದ ಕೆಲಸ ಮಾಡಿ ನಮ್ಮ ತಾಲೂಕಿನಲ್ಲಿ ಬೆಮೆಲ್ ಕಾಂತರಾಜು ಅವರನ್ನು ಈ ತಾಲೂಕಿನ ಶಾಸಕರಾಗಿ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ ಎಂದರು. ಇನ್ನು ಇದೇ ಸಮಯದಲ್ಲಿ ಮಾಧ್ಯಮದವರು ಕೇಳಿದ ಜೆಡಿಎಸ್ ಪಕ್ಷವನ್ನು ಯಾಕೆ ತೊರೆದಿದ್ದೀರಿ ಎಂಬ ಪ್ರಶ್ನೆಗೆ ದಂಡಿನ ಶಿವರ ಕುಮಾರ್ ಮಾತನಾಡಿ ನಾವುಗಳು ಜೆಡಿಎಸ್ ಪಕ್ಷದಲ್ಲಿ ಕೊನೆಯವರೆಗೂ ಇರುತ್ತೇವೆ ಎಂದು ಸದಸ್ಯತ್ವ ಪಡೆದುಕೊಂಡಿಲ್ಲ, ನಾನು ಒಬ್ಬ ಹೋರಾಟಗಾರ ಹಾಗಾಗಿ ಕಾಂಗ್ರೆಸ್ ಪಕ್ಷ ನಮ್ಮ ನಾಯಕರದ ಮಲ್ಲಿಕಾರ್ಜುನ್ ಖರ್ಗೆಯವರನ್ನು ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ನಮ್ಮಗಳಿಗೆ ಹೆಮ್ಮೆಯ ವಿಚಾರ ಹಾಗಾಗಿ ಅವರ ನಾಯಕತ್ವದಲ್ಲಿ ಹಾಗೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್. ಅವರ ನಾಯಕತ್ವವನ್ನು ಒಪ್ಪಿಕೊಂಡು ಪಕ್ಷದ ಸಿದ್ಧಾಂತವನ್ನು ಒಪ್ಪಿ ಈ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ ಎಂದರು.

WhatsApp Image 2022 11 07 at 7.41.59 PM 1

ಮುಂದುವರೆದು ಕಾಂಗ್ರೆಸ್ ಪಕ್ಷವನ್ನು ಹಾಲಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆ ಟಿ ಗೋವಿಂದರಾಜು,ಶಿವಣ್ಣ(ನಿವೃತ್ತ ಉಪನ್ಯಾಸಕರು) ಲಕ್ಷ್ಮೀಶ, ರಾಮು, ಮಧು, ಅಪ್ಪಿ, ನರಸಪ್ಪ,ಕೆಂಪಣ್ಣ.ಮಲ್ಲೇಶ.ಮೂರ್ತಿ.ಪುಟ್ಟಸ್ವಾಮಿ.ರಂಗಸ್ವಾಮಿ.ತಮ್ಮಯ್ಯಪು( ಬಿ.ಪುರ) ಕಂಚಿರಾಯ.ಕೇಶವ್ (ಸಾಸಲು) ಜಗದೀಶ್.ರುಕ್ಮಿಣಮ್ಮ (ಸೊಪ್ಪನಹಳ್ಳಿ) ಶ್ರೀನಿವಾಸ್ (ಚಿಮ್ಮನಹಳ್ಳಿ ಹಾಲಿ ಗ್ರಾಮ ಪಂಚಾಯತಿ ಸದಸ್ಯರು) ಇನ್ನು ಅನೇಕ ತಾಲೂಕಿನ ಮಾಜಿ ಪಂಚಾಯಿತಿ ಸದಸ್ಯರುಗಳು ಅನೇಕ ಕಾರ್ಯಕರ್ತರು ಜೆಡಿಎಸ್ ಮತ್ತು ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಇನ್ನು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ.ಕಾಂಗ್ರೆಸ್ ಮುಖಂಡರಾದ ಲಕ್ಷ್ಮಿಕಾಂತ್ (ಕಾಂತಣ್ಣ)ಹನುಮಂತಯ್ಯ (ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ) .ಗುರುದತ್.ಮಂಜುನಾಥ್ (ಮೇಲನಹಳ್ಳಿ) ಚಂದ್ರಶೇಖರ್.ಲಕ್ಷ್ಮಿದೇವಮ್ಮ.ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

Document

Leave a Reply

Your email address will not be published. Required fields are marked *