Document

ತುರುವೇಕೆರೆಗೆ ದಿಢೀರ್ ಭೇಟಿ ಕೊಟ್ಟ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್

ತುರುವೇಕೆರೆ:ಮಂಜುನಾಥ್

VideoCapture 20230120 012335

ಕಾರ್ಯಕ್ರಮದ ನಿಮಿತ್ತ ಹರಿಹರಕ್ಕೆ ತೆರಳಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಇಂದು ಕಾರ್ಯಕ್ರಮ ಮುಗಿಸಿ ವಾಪಸ್ ಆಗುವಾಗ ತುರುವೇಕೆರೆ ಮಾರ್ಗವಾಗಿ ತಡರಾತ್ರಿ ಸುಮಾರು 8:30 ಕ್ಕೆ ಪಟ್ಟಣಕ್ಕೆ ದಿಢೀರ್ ಭೇಟಿ ಕೊಟ್ಟಿದ್ದಾರೆ.


ಇನ್ನು ಈ ಭೇಟಿಯ ವೇಳೆ ಪಟ್ಟಣದ ಬಾಣಸಂದ್ರ ಸರ್ಕಲ್ ನಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾವಣಿಗೊಂಡು ಜಮೀರ್ ಅವರಿಗೆ ಹೂಮಾಲೆ ಹಾಕಿ ಪಟಾಕಿ ಸಿಡಿಸಿ ಬರಮಾಡಿಕೊಂಡಿದ್ದಾರೆ,

VideoCapture 20230120 012342


ಅವರು ಪಟ್ಟಣದಲ್ಲಿ ಇರುವ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರ ಕಚೇರಿಗೆ ಭೇಟಿಕೊಟ್ಟು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷ ಮತ ಕೇಳುವಾಗ ಎಂದಾದರೂ ನಾವು ಇಂತಹ ಕಾರ್ಯಕ್ರಮ ಕೊಟ್ಟಿದ್ದೇವೆ ಎಂದು ಮತ ಕೇಳಿದ್ದಾರಾ? ಖಂಡಿತ ಇಲ್ಲ ,
ಆದರೆ ನಾವು ಮತಗಳನ್ನು ಕೇಳಲು ಹೋದರೆ ನಮ್ಮ ಕಾಂಗ್ರೆಸ್ ಪಕ್ಷದಿಂದ ಏನು ಕಾರ್ಯಕ್ರಮ ಕೊಟ್ಟಿದ್ದೇವೆ ಅದನ್ನ ತೋರಿಸಿ ಮತ ಕೇಳುತ್ತೇವೆ ಎಂದರು, ಬಿಜೆಪಿ ಪಕ್ಷ ಬರೀ ಹಿಂದೂ, ಮುಸಲ್ಮಾನ್, ಹಿಂದೂ, ಮುಸಲ್ಮಾನ್, ಎನ್ನುತ್ತಾರೆ ಅವರಿಗೆ ಹಿಂದೂ ಬೇಕಾಗಿಲ್ಲ, ಮುಸಲ್ಮಾನರು ಬೇಕಾಗಿಲ್ಲ, ಅವರಿಗೆ ಬೇಕಾಗಿರುವುದು ಕೇವಲ ಅಧಿಕಾರ ಅಷ್ಟೇ, ಉದಾಹರಣೆಗೆ ಹುಬ್ಬಳ್ಳಿಯಲ್ಲಿ ಟಿಪ್ಪು ಜಯಂತಿ ಮಾಡಲಿಕ್ಕೆ ಯಾರು ವಿರೋಧ ಮಾಡಿದ್ದು, ಇದೆ ಬಿಜೆಪಿ, ಆದರೆ ಇಂದು ಅದೇ ಹುಬ್ಬಳ್ಳಿಯಲ್ಲಿ ಟಿಪ್ಪು ಜಯಂತಿ ಮಾಡಲು ಹೇಳುತ್ತಿದ್ದಾರೆ, ಜೊತೆಗೆ ಪಕ್ಷದಲ್ಲಿ ನಳಿನ್ ಕುಮಾರ್ ಕಟೀಲು ಬಿಜೆಪಿ ಅಧ್ಯಕ್ಷ, ಅವರು ಹೇಳುತ್ತಾರೆ ಮೋರಿ, ನೀರು, ಚರಂಡಿ, ಬಿಡಿ, ಲವ್ ಜಿಹಾದ್ ಬಗ್ಗೆ ಚಿಂತನೆ ಮಾಡಿ ಎನ್ನುತ್ತಾರೆ, ಬಿಜೆಪಿ ಪಕ್ಷ ಯಾವತ್ತು ಅಭಿವೃದ್ಧಿ ಮಾಡಿ ಮತ ಕೇಳಿಲ್ಲ ಬಿಡಿ,
ಇನ್ನು ದಳ ,ದಳ ಎಲ್ಲಿದೆ ಜಾತ್ಯತೀತ ಜನತಾದಳದ ಬಗ್ಗೆ ಜನಗಳಿಗೆ ಜೆಡಿಎಸ್ ಪಕ್ಷ ಬಿ ಟೀಮ್ ಆಗಿಹೋಗಿದೆ, ತುರುವೇಕೆರೆಯಲ್ಲಿ ಏನಾದರೂ ಜೆಡಿಎಸ್ ಪಕ್ಷ ಗೆದ್ದರೆ ಅದು ಬಿಜೆಪಿ ಪಕ್ಷ ಗೆದ್ದ ಹಾಗೆ ಜನ ಈ ಬಾರಿ ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಿದ್ದಾರೆ ಎಂದು ಹೇಳಿದರು.

VideoCapture 20230120 012428


ಇನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಅವರು ತೆರಳಿದ ನಂತರ ಅಲ್ಲಿಗೆ ವಿಪರ್ಯಾಸವೆಂದರೆ ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಕಾಂಗ್ರೆಸ್ , ಮಹಿಳಾ ಕಾರ್ಯಕರ್ತೆಯಾದ ಮಂಜುಳಾ ಎಂಬುವರನ್ನು ಇಲ್ಲಿ ಯಾಕೆ ಬರುತ್ತೀಯ, ಏನು ಕೆಲಸ, ಎಂದು ಕಾರ್ಯಕರ್ತ ಒಬ್ಬ ನನಗೆ ಹೇಳಿದ್ದಾನೆ ಎಂದು ನಮ್ಮ ಬಳಿ ಆಕೆಯ ಅಳಲನ್ನು ತೋಡಿಕೊಂಡಿದ್ದಾಳೆ,
ನಾವುಗಳು ಬರಬಾರದ, ಹಾಗಾದರೆ ಕಾಂಗ್ರೆಸ್ ಗೆಲ್ಲಬಾರದ, ಎಂಬ ಪ್ರಶ್ನೆ ಆ ಕಾಂಗ್ರೆಸ್ ಕಾರ್ಯಕರ್ತೆಯ ಬಾಯಿಯಿಂದಲೇ ಕೇಳಿ,
ಹಾಗಾದರೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮಹಿಳಾ ಕಾರ್ಯಕರ್ತೆಯರನ್ನು ಗಣನೆಗೆ ತೆಗೆದುಕೊಂಡಿಲ್ಲವೇ, ಇವರಿಗೆ ಯಾವುದೇ ರೀತಿಯ ಬೆಲೆ ಇಲ್ಲವೇ, ಎಂಬುದೇ ತಾಲೂಕಿನಲ್ಲಿ ಪ್ರಶ್ನಾರ್ಥಕವಾಗಿದೆ,

ಇನ್ನು ಈ ಸಂದರ್ಭದಲ್ಲಿ ಸೈಯದ್ ನೂರುಲ್ಲಾ, ಜಫರ್, ನದೀಮ್, ಗುರುದತ್, ಮೇಲನಹಳ್ಳಿ ಮಂಜುನಾಥ್, ಇಂತಿಯಾಜ್ ಸಾಬ್, ಶಾಹಿದ್, ಹರ್ಷ, ಅರುಣ, ನಂಜುಂಡಪ್ಪ, ಫೈರೋಜ್, ನಿಸಾರ್ ಅಹಮದ್, ಸಮೀರ್ ಅಕಾಲಸಂದ್ರ, ಶಶಿ, ದಸ್ತು, ಅಹಮದ್ ಸಾಬ್, ನಟೇಶ್, ಜಾಫರ್, ಜಫ್ರೂಲಾ, ಅನೇಕ ಮುಸ್ಲಿಂ ಕಾರ್ಯಕರ್ತರು ಈ ವೇಳೆ ಜಮಾವಣೆಗೊಂಡಿದ್ದರು.

Document

Leave a Reply

Your email address will not be published. Required fields are marked *