Document

ತಳವಾರ ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷಕ್ಕೆ ಸೆಡ್ಡು ಹೊಡೆದ ಪ್ರಬಲ ಸ್ಪರ್ದಿ, ಕೆರೂರಿನಲ್ಲಿ ಬಿರುಸಿನ ಪ್ರಚಾರ

Janataa24 NEWS DESK

ಬಾದಾಮಿ

ಬಾದಾಮಿ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಿವೃತ್ತ ತಹಶೀಲ್ದಾರ್ ಭೀಮಪ್ಪ. ತಳವಾರ ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷಕ್ಕೆ ಸೆಡ್ಡು ಹೊಡೆದ ಪ್ರಬಲ ಸ್ಪರ್ದಿ, ಕೆರೂರಿನಲ್ಲಿ ಬಿರುಸಿನ ಪ್ರಚಾರ

IMG 20230428 WA0000



ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇತ್ತ ಮಾಜಿ ಮುಖ್ಯ ಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನವರ ಮತಕ್ಷೇತ್ರ ಜಿದ್ದಾ ಜಿದ್ದಿ ಕಣವಾಗಿ ಮಾರ್ಪಟ್ಟಿದ್ದು, ಬಾದಾಮಿ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಾಂತಗೌಡ, ಟಿ. ಪಾಟೀಲ ಪಕ್ಷದ ದಿಗ್ಗಜರನ್ನು ಕರೆತಂದಿದ್ದು ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬೇಕು ಎಂದು ಬಿ ಜೆ. ಪಿ. ನರೇಂದ್ರ ಮೋದಿಯನ್ನು ಕರೆತರುತ್ತಿದ್ದರೆ, ಇತ್ತ ಕಾಂಗ್ರೆಸ್ ಪಾಳ್ಯದಲ್ಲಿ ಟಗರು ಸಿದ್ದರಾಮಯ್ಯ ಬಾದಾಮಿಗೆ ಭೀಮಸೇನ ಚಿಮ್ಮನಕಟ್ಟಿ ಪರ ಅಬ್ಬರದ ಭರ್ಜರಿ ಪ್ರಚಾರಕ್ಕೆ ಪ್ರತಿತಂತ್ರ ರೂಪಿಸಿದ್ದಾರೆ. ಪ್ರಾದೇಶಿಕ ಪಕ್ಷವಾದ ಜೆ. ಡಿ. ಎಸ್. ನ ಅಭ್ಯರ್ಥಿ ಹನುಮಂತ ಮಾವಿನರದ ಘಟಾನುಘಟಿ ದಿಗ್ಗಜ ನಾಯಕರ ಮಧ್ಯ, ತಮ್ಮ ಆಸ್ತಿತ್ವ ಸ್ಥಾಪಿಸಲು ಹೆಣಗಾಡುತ್ತಿರುವ ಪ್ರತಿಸ್ಪರ್ಧಿಯಾಗಿ ಮತಕ್ಷೇತ್ರದಲ್ಲಿ ತಮ್ಮದೇ ಪಕ್ಷ ಸಂಘಟನೆ ಮಾಡಿ ಅಖಾಡಕ್ಕೆ ಇಳಿದಿದ್ದಾರೆ. ಇನ್ನು ಅರವಿಂದ್ ಕೇಜ್ರಿವಾಲ್ ಸಂಸ್ಥಾಪಕ ಅಧ್ಯಕ್ಷರಾಗಿರುವ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಹಾಗೆ ಕಂಡು ಬರುತ್ತಿದೆ ಎಂದು ಮತದಾರರಲ್ಲಿ ಕೇಳಿಬರುತ್ತಿರುವ ಧ್ವನಿಯಾಗಿದೆ.

IMG 20230428 WA0001



ಇವರೆಲ್ಲರ ನಡುವೆ ಬಾದಾಮಿ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಿವೃತ್ತ ತಹಶೀಲ್ದಾರ್ ಭೀಮಪ್ಪ. ಫಾ. ತಳವಾರ ಅವರು ಪ್ರಬಲ ಅಭ್ಯರ್ಥಿ ಯಾಗಿ ಮತಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರ ಜೊತೆಗೆ ತಮ್ಮದೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು ರಾಷ್ಟೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳಿಗೆ
ನೇರ ಪೈಪೋಟಿ ಕೊಡುವ ಪ್ರಬಲ ಅಭ್ಯರ್ತಿಯಾಗಿ ಸ್ಪರ್ಧೆಯಲ್ಲಿ ಉಳಿದಿದ್ದ ಎಲ್ಲಾ ಪಕ್ಷಗಳಿಗೆ ಭೀಮಪ್ಪ ತಳವಾರ ಅವರು ನುಂಗಲಾರದ ತುತ್ತಾಗಿದ್ದಾರೆ. ಬಾದಾಮಿ ಮತದಾರರು ಭೀಮಪ್ಪ ತಳವಾರ ಅವರು ಹೋದಲ್ಲೆಲ್ಲ ಈ ಸಲ ಬದಲಾವಣೆ ಮಾಡುತ್ತೇವೆ ಎಂಬ ಧ್ವನಿ ಕೇಳಿ ಬರುತ್ತಿದೆ. ಹೊಸಬರ ಆಡಳಿತ ಮೆಚ್ಚಿ ಪಕ್ಷೇತರ ಅಭ್ಯರ್ಥಿ ಕೈ ಹಿಡಿಯುವರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

ವರದಿ

ಬಾಗಲಕೋಟೆ:ರಾಜೇಶ್ ಎಸ್ ದೇಸಾಯಿ

Document

Leave a Reply

Your email address will not be published. Required fields are marked *