Document

ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದ ವ್ಯಕ್ತಿ ಮೇಲೆ ಚುನಾವಣೆ ಅಧಿಕಾರಿ ಗೆ ದೂರು ಸಲ್ಲಿಸಿದ ಜೆಡಿಎಸ್ ಮುಖಂಡರು

Janataa24 NEWS DESK

ಪಾವಗಡ

ಸರ್ಕಾರಿ ನೌಕರ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದ ವ್ಯಕ್ತಿ ಮೇಲೆ ಚುನಾವಣೆ ಅಧಿಕಾರಿಗೆ ದೂರು ಸಲ್ಲಿಸಿದ ಜೆಡಿಎಸ್ ಮುಖಂಡರು.

IMG 20230428 WA0003



ಪಾವಗಡ ಇದೇ ವೇಳೆ ದಲಿತ ಮುಖಂಡ ಬಿ.ಹೊಸಹಳ್ಳಿ ಗ್ರಾಮದ ಮಲ್ಲಿಕಾರ್ಜನ್ ಮಾತನಾಡಿ ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಪ್ರಿಯದರ್ಶಿನಿ ಅನುದಾನ ರಹಿತ ಶಾಲೆಯಲ್ಲಿ ದ್ವೀತಿಯ ದರ್ಜೆ ಗುಮಾಸ್ತನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎಸ್.ಯೋಗೀಶ್ ಎಂಬುವರು 27-4-2023 ರಂದು ಪಾವಗಡ ಪಟ್ಟಣದ ಕಣಿವೆ ನರಸಿಂಹ ಸ್ವಾಮಿ ದೇವಾಲಯ ಬಳಿ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಪರ ಮತಯಾಜನೆ ಮಾಡಿದ್ದು. ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿ-ಸ್ಪರ್ಧಿಯಾಗಿರುವ ಜೆಡಿಎಸ್ ನ ಅಭ್ಯರ್ಥಿ ಕೆ.ಎಂ.ತಿಮ್ಮಾರಾಯಪ್ಪ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಅಸಭ್ಯವಾಗಿ ಮಾತನಾಡಿರುತ್ತಾನೆ.

IMG 20230428 WA0005



ಎ.ಎಸ್.ಯೋಗೀಶ್ ಸರ್ಕಾರಿ ನೌಕರನಾಗಿ ಚುನಾವಣಾ ನಿಯಮಗಳನ್ನು ಗಾಳಿಗೆತೂರಿ ರಾಜಕೀಯ ಪ್ರಚಾರದಲ್ಲಿ ತೊಡಗಿದ್ದು.ಈಗಾಗಲೇ ಈತನು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಮೊದಲು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.

IMG 20230428 WA0002



ಹಾಗಾಗಿ ಚುನಾವಣೆ ಅಧಿಕಾರಿಗಳು ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಕಾನೂನು ಕಾಪಾಡಲು ಮುಂದಾಗಬೇಕು ಎಂದು ಜೆಡಿಎಸ್ ಮುಖಂಡರು ಚುನಾವಣಾ ಅಧಿಕಾರಿ ಅತೀಕ್ ಪಾಷ ರ ಬಳಿ ಮನವಿ ಮಾಡಿಕೊಂಡಿದ್ದಾರೆ.

IMG 20230428 WA0003 1



ಈ ವೇಳೆ ದಲಿತ ಮುಖಂಡರಾದ ಮಲ್ಲಿಕಾರ್ಜುನ ಬಿ.ಹೊಸಹಳ್ಳಿ, ರಾಮಾಂಜಪ್ಪ ಬೀಮನಕುಂಟೆ, ಚನ್ನಕೇಶ ಜಾಲೋಡು,
ಅಚ್ಚಮ್ಮನಹಳ್ಳಿ,ಪೃಥ್ವಿ ತಿಪ್ಪಯ್ಯನದುರ್ಗ, ರಾಮಾಂಜಿ ವೈ.ಎನ್.ಹೊಸಕೋಟೆ, ಗೋಪಾಲ ಇಂದ್ರಬೆಟ್ಟ, ನಾರಾಯಣಪ್ಪ ತಿಪ್ಪಗಾನಹಳ್ಳಿ,ನಾರಾಯಣಪ್ಪ,
ಲೋಕೇಶ್ ಮೇಗಳಪಾಳ್ಯ, ವೈ.ಎನ್.ಹೊಸಕೋಟೆ,ಮೇಗಳಪಾಳ್ಯ ಮಾಧವ,ಬಲ್ಲೇನಹಳ್ಳಿ,
ಮಲ್ಲೇಶ,ಮಾರುತಿ ಮೇಗಳಪಾಳ್ಯ,
ನಾಗರಾಜು ಬಲ್ಲೇನಹಳ್ಳಿ, ಮಾರಪ್ಪ ಬಲ್ಲೇನಹಳ್ಳಿ,ಜೋಡಿ ಹೊನ್ನೂರಸ್ವಾಮಿ,
ರವಿ ದೊಡ್ಡಹಳ್ಳಿ, ನಾರಾಯಣ ಕತಿಕ್ಯಾತನಹಳ್ಳಿ ಇತರರು ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದರು.

ವರದಿ

ಪಾವಗಡ:ಇಮ್ರಾನ್ ಉಲ್ಲಾ

Document

Leave a Reply

Your email address will not be published. Required fields are marked *