Janataa24 NEWS DESK
ಪಾವಗಡ ಬ್ರೇಕಿಂಗ್
ಪಕ್ಷ ವಿರೋಧಿ ಚಟುವಟಿಕೆ ಮೈಲಾರೆಡ್ಡಿ ಉಚ್ಚಾಟನೆ.
ಪಾವಗಡ ಮೈಲಾರೆಡ್ಡಿ, ಪ್ರಧಾನ ಕಾರ್ಯದರ್ಶಿ, ರಾಜ್ಯ ಹಿಂದುಳಿದ ವರ್ಗಗಳ ಸಮಿತಿ.
ತುಮಕೂರು ಜಿಲ್ಲೆ, ಪಾವಗಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದರು ಎಂಬುದಾಗಿ ರಾಮಾಂಜಿನಪ್ಪ, ಅಧ್ಯಕ್ಷರು, ಗ್ರಾಮಾಂತರ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಜಿ. ಸುದೇಶ್ ಕುಮಾರ್, ಅಧ್ಯಕ್ಷರು, ತಾಲ್ಲೂಕು ಕಾಂಗ್ರೆಸ್ ಸಮಿತಿ.

ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೀಡಿದ ದೂರಿನ ಅನ್ವಯ ನಿಮ್ಮನ್ನು ಕಾಂಗ್ರೆಸ್ ಪಕ್ಷದ ಘನತೆ ಗೌರವಗಳಿಗೆ ಹಾನಿಯುಂಟು ಮಾಡುವಂತಹ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಾನ್ಯ ಕೆ.ಪಿ.ಸಿ.ಸಿ. ವರಿಷ್ಠರುಗಳ ಅನುಮೋದನೆ ಹಾಗೂ ಆದೇಶದ ಮೇರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟನೆ ಮಾಡಲಾಗಿದೆ ಎಂಬುದಾಗಿ ಅದೇಶ ಹೊರಡಿಸಿದ್ದಾರೆ.

ವರದಿ
ಪಾವಗಡ:ಇಮ್ರಾನ್ ಉಲ್ಲಾ