Document

ಜಿಲ್ಲೆಯಲ್ಲಿಯೇ ಪ್ರಥಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎಟಿಎಂ ಉದ್ಘಾಟನೆ

ಜಿಲ್ಲೆಯಲ್ಲಿಯೇ ಪ್ರಥಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎಟಿಎಂ ಉದ್ಘಾಟನೆ

IMG 20230302 WA0003

ತುರುವೇಕೆರೆ: ಮಂಜುನಾಥ್

ಇಂದು ಅರೆಮಲ್ಲೇನಹಳ್ಳಿ ಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಲಾದ ಜಿಲ್ಲೆಯಲ್ಲಿಯೇ ಪ್ರಥಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎಟಿಎಂ (ATM)ಅನ್ನು ಉದ್ಘಾಟಿಸಿ ಹಳ್ಳಿಗಳು ಕೂಡ ಡಿಜಿಟಲೀಕರಣದತ್ತ ಸಾಗುತ್ತಿರುವುದನ್ನ ಕಂಡು ಶ್ಲಾಗಿಸಿದ ಶಾಸಕರು.

IMG 20230302 WA0001

ಹಾಗೂ ಇದೇ ಸಂದರ್ಭದಲ್ಲಿ ಮಾತನಾಡಿ ಕುಸಿಯುತ್ತಿರುವ ಕೊಬ್ಬರಿ ಬೆಲೆಯ ಬಗ್ಗೆ ಸಚಿವರಾದ ಶ್ರೀ ಬಿಸಿ ನಾಗೇಶ್ ರವರು ಹಾಗೂ ಮಾಧುಸ್ವಾಮಿಯವರು ಇವರೊಂದಿಗೆ ತೆರಳಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬೆಂಬಲ ಬೆಲೆಯನ್ನು ನೀಡುವ ಬಗ್ಗೆ ಮಾತನಾಡಲಾಗುವುದು ಹಾಗೂ ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ಶೀಘ್ರವೇ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕರಾದ ಮಸಾಲ ಜೈರಾಮ್ ರವರು ನುಡಿದರು. ಈ ಸಂದರ್ಭದಲ್ಲಿ ತುರುವೇಕೆರೆಯ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಸಿದ್ದಲಿಂಗಪ್ಪನವರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ಅರೆ ಮಲ್ಲೇನಹಳ್ಳಿಯ ಪಂಚಾಯತಿ ವ್ಯಾಪ್ತಿಯ ಕಾರ್ಯಕರ್ತ ಬಂಧುಗಳು ಹಾಗೂ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

IMG 20230302 WA0002
Document

Leave a Reply

Your email address will not be published. Required fields are marked *