Janataa24 NEWS DESK

ರಾಜ್ಯದಲ್ಲಿ ಬಹುತೇಕ ಕಡೆ ಸರ್ಕಾರದ ಆರ್ ಟಿ ಇ ಯೋಜನೆಗೆ ಕಳೆದ ನಾಲ್ಕು ವರ್ಷದಿಂದ 1 ವಿದ್ಯಾರ್ಥಿ ಆಯ್ಕೆ ಆಗಲಿಲ್ಲ. ಗೊಂದಲದಲ್ಲಿ ಪೋಷಕರು.
ಪಾವಗಡ ಕಳೆದ ನಾಲ್ಕು ವರ್ಷಗಳಿಂದ ಆರ್.ಟಿ.ಇ.ಯೋಜನೆ ಈ ಭಾಗದಲ್ಲಿ ಮಕ್ಕಳಿಗೆ ಉಪಯುಕ್ತವಾಗದ ಯೋಜನೆ ಪುರುಷಾರ್ಥಕ್ಕೆ ಮಾಡಲಾಗಿದೆ ಎಂಬುದು ನೂತನ ಸರ್ಕಾರಕ್ಕೆ ಪ್ರಶ್ನೆಯಾಗಿ ಮಾರ್ಪಟ್ಟಿದೆ.

ಸರ್ಕಾರ ಅವೈಜ್ಞಾನಿಕ ರೀತಿಯಲ್ಲಿ ಜಾರಿ ಮಾಡಿದ ಆರ್‌ಟಿಎ ಯೋಜನೆ.
ಇದರಿಂದ ಖಾಸಗಿ ಶಾಲೆಗಳ ಉದ್ದಾರವಾಗುತ್ತದೆ ಹೊರತು ಸರ್ಕಾರಿ ಶಾಲೆಗೆ ಯಾವುದೇ ತರಹದ ಅನುಕೂಲ ಇಲ್ಲ.
ಅದೇ ಆರ್ ಟಿ ಎ ಯೋಜನೆಯಲ್ಲಿ ನೀಡುತ್ತಿರುವ ಅನುದಾನ ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡಿದರೆ ಇತರೆ ಸವಲತ್ತುಗಳನ್ನು ಅದೇ ಖಾಸಗಿ ಶಾಲೆಗಳಿಗೆ ನೀಡುವ ಹಣ ಬಳಸುವುದರಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲ ಕಲ್ಪಿಸುವುದು ಉತ್ತಮ ಅಲ್ಲವೇ.
ಈಗಾಗಲೇ ಕಳೆದ ವರ್ಷದಿಂದ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮ ಎಂಬುದಾಗಿ ಪ್ರಾರಂಭ ಮಾಡಿರೋದು ಉತ್ತಮ ಯೋಜನೆ.ಇದರಿಂದಾಗಿ ಪ್ರತಿವರ್ಷವೂ ವಿದ್ಯಾರ್ಥಿ ಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಾಹಿತಿ ಪ್ರಕಾರ ನಾಲ್ಕು ವರ್ಷದಿಂದ ಯಾವೊಬ್ಬ ವಿದ್ಯಾರ್ಥಿಯು ಆರ್.ಟಿ.ಇ. ಅಡಿಯಲ್ಲಿ ಮಕ್ಕಳು ಆಯ್ಕೆಯಾಗಿಲ್ಲ. ಈ ಭಾಗದಲ್ಲಿ ಬಾಪೂಜಿ ಕನ್ನಡ ಮಾಧ್ಯಮ ಹಾಗೂ ಬಾಪೂಜಿ ಕನ್ನಡ ಮಾಧ್ಯಮ ಮತ್ತು ಶೃಂಗೇರಿ ಶಾಲೆಗಳು ಮಾತ್ರ ಆರ್ ಟಿ.ಇ ಆಡಿಯಲ್ಲಿ ಶಾಲೆಗಳು ಗುರ್ತಿಸಿದ್ದಾರೆ.ಈ ಶಾಲೆಗಳಿಗೆ ಯಾರು ಸಹ ಅಪ್ಲಿಕೇಶನ್ ಹಕುತ್ತಿಲ್ಲ.ಅದೇ ಪೋಷಕರು ಒಂದು ಅಪ್ಲಿಕೇಶನ್ ಹಾಕಲು ಕಂಪ್ಯೂಟರ್ ಸೆಂಟರ್ ಗಳಿಗೆ 50 ರಿಂದ 200 ರೂಪಾಯಿ ಆಗುತ್ತದೆ. ಅದರಲ್ಲಿ ಪೋಷಕರಿಗೆ ಬೇಕಾಗುವಂತಹ ಶಾಲೆಗಳು ಇಲ್ಲದ ಕಾರಣ ಯಾರು ಸಹ ಈ ಆರ್.ಟಿ.ಇ ಯೋಜನೆಯನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ.
ಅದೇ ಹೊಸದಾಗಿ ಸರ್ಕಾರದಿಂದ ಮಾಡಿರುವಂತಹ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಲು ಸಂಪೂರ್ಣ ಉಚಿತ.

ಹೊಸದಾಗಿ ಮಾಡಿರೋ ಇಂಗ್ಲಿಷ್ ಮಾಧ್ಯಮ ಯೋಜನೆಯಲ್ಲಿ ಒಂದು ಶಾಲೆಗೆ 30ರಂತೆ ಅಭ್ಯರ್ಥಿಗಳ ಸಂಖ್ಯೆ ಮಾಡಲಾಗಿದೆ ಆದರೆ ಪ್ರತಿ ವರ್ಷವೂ ಈ ಒಂದು ಆಯ್ಕೆ ಪ್ರಕ್ರಿಯೆಯಲ್ಲಿ 80 ರಿಂದ 90 ಮಕ್ಕಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ ಅದರೆ ಅಯ್ಕೆ ಮಾತ್ರ 30 ಮಕ್ಕಳಿಗೆ ಎಂಬುದಾಗಿ ಯೋಜನೆ ಯಲ್ಲಿ ಅದೇಶ ಇರುವುದರಿಂದ ಪ್ರತಿಬಾರಿ ಗೊಂದಲಕ್ಕೆ ಈಡಾಗುತ್ತಿರುವ ಪೋಷಕರು.
ಹೊಸ ಸರ್ಕಾರ 30 ರಿಂದ 50 ರ ಸಂಖ್ಯೆ ಹೆಚ್ಚು ಮಾಡಿ ಈ ಯೋಜನೆಯನ್ನು ಮಾದರಿಯಾಗಿ ಮಾಡಬೇಕು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ವರದಿ
ಪಾವಗಡ: ಇಮ್ರಾನ್ ಉಲ್ಲಾ.