Document

ಕ್ಷೇತ್ರದ ಅಭಿವೃದ್ಧಿಯ ಕಡೆ ನನ್ನ ನಡೆ ಎಂದ: ಶಾಸಕ ಮಸಾಲ ಜಯರಾಮ್

ತುರುವೇಕೆರೆ: ವಿಧಾನ ಸಭಾ ಕ್ಷೇತ್ರದ ಕೊಂಡಜ್ಜಿ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿಯ ಈ ಕೆಳಕಂಡ ಗ್ರಾಮಗಳಲ್ಲಿ ಲೋಕೋಪಯೋಗಿ ಹಾಗೂ ಕಾವೇರಿ ನೀರಾವರಿ ನಿಗಮದ ವತಿಯ ಕಾಮಗಾರಿಗಳಿಗೆ ಮಳೆಯನ್ನು ಲೆಕ್ಕಿಸದೆ ತಾಲೂಕಿನ ಶಾಸಕ ಅಭಿವೃದ್ಧಿಯ ಹರಿಕಾರ ಮಸಾಲ ಜಯರಾಮ್ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗಳಿಗೆ ಗ್ರಾಮಸ್ಥರುಗಳೊಂದಿಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

IMG 20221210 WA0026 1



ಇನ್ನು ತುರುವೇಕೆರೆ ಹಾಗೂ ವರಾಹಸಂದ್ರ ರಸ್ತೆಯ ಆಯುಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆರು ಇನ್ನೂರು ಲಕ್ಷ (ಲೋಕಪಯೋಗಿ ಇಲಾಖೆ) ಹಾಗೂ ಕೊಂಡಜ್ಜಿ ಗ್ರಾಮದಿಂದ ಕಲ್ಲ ಬೋರನಹಳ್ಳಿ ರಸ್ತೆ ಅಭಿವೃದ್ಧಿಗೆ 60 ಲಕ್ಷ .ಜೊತೆಗೆ ಕಲ್ಲಬೋರನಹಳ್ಳಿ ಎಸ್ ಸಿ ಕಾಲೋನಿ ಯಿಂದ ಪುರ ಗೇಟ್ ವರೆಗೂ ಸಿಸಿ ರಸ್ತೆ ಅಭಿವೃದ್ಧಿಗೆ 55 ಲಕ್ಷ, ಇನ್ನೂ ಸಂಪಿಗೆ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಒಟ್ಟಾರೆ 38 ಲಕ್ಷ ಒಟ್ಟಾರೆ ರೂ 353 ಲಕ್ಷ ರೂಗಳ ಕಾಮಗಾರಿಗಳಿಗೆ ಮಳೆಯನ್ನು ಲೆಕ್ಕಿಸದೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷರು ಪದಾಧಿಕಾರಿಗಳು ಈ ಭಾಗದ ಕೊಂಡಜ್ಜಿ ಹಾಗೂ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಮುಖಂಡರುಗಳು ಜನಪ್ರತಿನಿಧಿಗಳು ಹಾಗೂ ಎಲ್ಲಾ ಸುತ್ತಮುತ್ತ ಗ್ರಾಮಸ್ಥರುಗಳು ತಾಲೂಕಿನ ಶಾಸಕರಾದ ಮಸಾಲ ಜೈರಾಮ ಇವರುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

IMG 20221210 WA0026
Document

Leave a Reply

Your email address will not be published. Required fields are marked *