Document

ಚೆನ್ನೈ ಮಹಾನಗರದಲ್ಲಿ ಪ್ರವಾಹ ಪರಿಹಾರ ಕಾರ್ಯವನ್ನು ಕೈಗೊಂಡ ಪೂಜ್ಯ ಸ್ವಾಮಿ ಜಪಾನಂದ ಜಿ

Janataa24 NEWS DESK

ಚೆನ್ನೈ ಮಹಾನಗರದಲ್ಲಿ ಪ್ರವಾಹ ಪರಿಹಾರ ಕಾರ್ಯವನ್ನು ಕೈಗೊಂಡಿದ್ದ ಪೂಜ್ಯ ಸ್ವಾಮೀ ಜಪಾನಂದ ಜಿ.

IMG 20231226 WA0008




ಪಾವಗಡ: ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ ಹಾಗೂ ಇನ್ಫೋಸಿಸ್ ಫೌಂಡೇಶನ್ ಮತ್ತು ಇನ್ಫೋಸಿಸ್ ಚೆನ್ನೈ ಮಹಾನಗರದ ಸಹಕಾರದಿಂದ ಕಳೆದ 150 ವರ್ಷ ದಲ್ಲಿ ಕಂಡರಿಯದ ಮಳೆ ಕಳೆದ 15 ದಿವಸಗಳಲ್ಲಿ ತಮಿಳುನಾಡಿನ ದಕ್ಷಿಣ ಭಾಗವಾದ ತೂತುಕುಡಿ ತಿರುವನ್ನವೆಲ್ಲಿ ಮುಂತಾದ ಭಾಗಗಳಲ್ಲಿ ಅಪಾರವಾದ ನಷ್ಟ ಉಂಟು ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರವೇ ಸರಿ. ಈ ನಿಟ್ಟಿನಲ್ಲಿ ಇತ್ತೀಚೆಗೆ ಚೆನ್ನೈ ಮಹಾನಗರದಲ್ಲಿ ಪ್ರವಾಹ ಪರಿಹಾರ ಕಾರ್ಯವನ್ನು ಕೈಗೊಂಡಿದ್ದ ಪೂಜ್ಯ ಸ್ವಾಮೀ ಜಪಾನಂದ ಜಿ ಮಹಾರಾಜರವರು ಇದೀಗ ತೂತುಕುಡಿ ಹಾಗೂ ತಿರುವಣ್ಣ ವೆಲ್ಲಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಮುಂದಾಗಿದ್ದಾರೆ.

IMG 20231226 WA0011

ಈ ಬಾರಿ ಅತ್ಯಂತ ದುಸ್ತರವಾದ ರಸ್ತೆಗಳು ಹಾಗೂ ಕೊಚ್ಛೆಯಿಂದ ಕೂಡಿರುವ ಕುಗ್ರಾಮಗಳಿಗೆ ಸ್ವತಹ ಪೂಜ್ಯ ಸ್ವಾಮೀಜಿಯವರೇ ಭೇಟಿ ನೀಡಿ ಸ್ಥಳೀಯ ಸ್ವಯಂಸೇವಕರು ಹಾಗೂ ಆಶ್ರಮದ ಸಂಯೋಜಕರು ಮತ್ತು ಲಯನ್ಸ್ ಕ್ಲಬ್ಬಿನ ಸದಸ್ಯರುಗಳನ್ನು ಸೇರಿಸಿಕೊಂಡು ಈ ಮಾನವೀಯ ಸೇವೆಯನ್ನು ಕೈಗೆತ್ತಿಕೊಂಡಿದ್ದಾರೆ ನಿಜವಾಗಿ ತಿಳಿಸಬೇಕಾದರೆ ಪರಿಸ್ಥಿತಿ ಬಹಳ ಭಯಂಕರವಾಗಿದ್ದು ಪ್ರತಿನಿತ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಹಾಗೂ ಸಚಿವರುಗಳು ಭೇಟಿ ನೀಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ ವಿನಹ ಇನ್ಫೋಸಿಸ್ ಫೌಂಡೇಶನ್ ನ ರೀತಿಯಲ್ಲಿ ನೇರವಾಗಿ ಸಂತ್ರಸ್ತರಿಗೆ ಸಹಾಯ ಸಿಗುವುದು ಮರೀಚಿಕೆಯಾಗಿದೆ ಎನ್ನಬಹುದು.

IMG 20231226 WA0014

ಪೂಜ್ಯ ಸ್ವಾಮಿ ಜಪಾನಂದಜಿ ಅವರು ಯಾವಾಗಲೂ ತಾವೇ ಸ್ವತಹ ಇಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಭೇಟಿ ನೀಡಿ ನಿಜವಾದ ವಿಚಾರಗಳನ್ನು ಹಾಗೂ ಪರಿಸ್ಥಿತಿಯನ್ನು ಸ್ಥಳೀಯರೊಂದಿಗೆ ವಿಮರ್ಶಿಸಿ ತತ್ ಕ್ಷಣದಲ್ಲಿ ಸಹಾಯವನ್ನು ನೀಡುವಂತಹ ಒಂದು ಮಾದರಿಯನ್ನು ಅಳವಡಿಸಿಕೊಂಡಿದ್ದಾರೆ ಇದು ಗುಜರಾತಿನ ಭೂಕಂಪವಾಗಿರಬಹುದು ಅಥವಾ ಸುನಾಮಿ ಆಗಿರಬಹುದು ಅಥವಾ ಪ್ರವಾಹಗಳಾಗಿರಬಹುದು ಈ ಎಲ್ಲದರ ಹಿಂದೆ ಪೂಜ್ಯ ಸ್ವಾಮೀಜಿಯವರು ತಮ್ಮ ತಂಡದೊಂದಿಗೆ ಭೇಟಿ ನೀಡಿ ಸ್ಥಳೀಯ ಜನರೊಂದಿಗೆ ಮಾತನಾಡಿ ಅವರಿಗೆ ಬೇಕಾದ ಪರಿಕರಗಳನ್ನು ಒದಗಿಸುವುದು ಕಳೆದ 35 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ವೈಶಿಷ್ಟತೆ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ದೇಶದಲ್ಲಿ ಅದರಲ್ಲಿಯೂ ದಕ್ಷಿಣ ಭಾಗದಲ್ಲಿ ಅಂದರೆ ಆರು ರಾಜ್ಯಗಳಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ ಮತ್ತು ಇನ್ಫೋಸಿಸ್ ಫೌಂಡೇಶನ್ ಹಾಗೂ ಇತರ ಸಂಘ ಸಂಸ್ಥೆಗಳ ನೆರವೇನಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದು ಜಗತ್ ಜಾಹಿರವಾಗಿದೆ .ಆ ನಿಟ್ಟಿನಲ್ಲಿ ಪೂಜ್ಯ ಸ್ವಾಮೀಜಿಯವರು ಇಂದು ಅಂದರೆ ಕ್ರಿಸ್ಮಸ್ ಸಂದರ್ಭದಲ್ಲಿ ಈ ಕೊಳಚೆ ಪ್ರದೇಶಗಳು ಹಾಗೂ ಗುಗ್ರಾಮಗಳಿಗೆ ಭೇಟಿ ನೀಡಿ ಅವರಿಗೆ ಸಹಾಯ ಹಸ್ತವನ್ನು ನೀಡುತ್ತಿರುವುದು ಬಹುಶಹ ಸೇವಾ ಯೋಜನೆಗಳಿಗೆ ಒಂದು ಮಾದರಿಯಾಗಿದೆ. ಎನ್ನಬಹುದು ಪೂಜ್ಯ ಸ್ವಾಮೀ ಜಪಾನಂದರಿಗೆ ಇಂಗ್ಲೀಷ್, ಹಿಂದಿ ,ಬಂಗಾಲಿ, ತಮಿಳು, ತೆಲುಗು, ಕನ್ನಡ, ಮಲಯಾಳ,ಭಾಷೆಗಳ ಪರಿಣತಿಯಿದೆ ಹಾಗಾಗಿ ಅವರು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸಹಕಾರವಾಗಿದೆ. ಈ ಸಂದರ್ಭದಲ್ಲಿ ಚೆನ್ನೈ ಮಹಾನಗರದಲ್ಲಿ ತಮ್ಮ ತಂಡದೊಂದಿಗೆ ಹಾಗೂ ಲಯನ್ಸ್ ಕ್ಲಬ್ ರವರೊಂದಿಗೆ ಸಭೆ ನಡೆಸಿ ಮುಂದಿನ ಕಾರ್ಯಗಳನ್ನು ಯಾವ ರೀತಿ ಕೈಗೊಳ್ಳಬೇಕೆಂದು ಪರಾಮರ್ಶೆ ಮಾಡಿದರು.

IMG 20231226 WA0013

ಜೊತೆಯಲ್ಲಿಯೇ ಮೂರನೇ ಹಂತದ ಪ್ರಯುಕ್ತ ಮತ್ತೊಂದು ದೊಡ್ಡ ಲೋಡ್ ಲಾರಿಯಲ್ಲಿ ಪರಿಹಾರ ಸಾಮಗ್ರಿಗಳನ್ನು ಹೊತ್ತು ತಂದಿರುವುದು ನಿಜಕ್ಕೂ ಇಲ್ಲಿಯ ಜನರಿಗೆ ಆಶ್ಚರ್ಯ ಉಂಟು ಮಾಡಿದೆ. ಹಾಗೆಂದ ಕ್ಷಣಕ್ಕೆ ತಮಿಳುನಾಡಿಗೆ ಅದರಲ್ಲಿಯೂ ಮದರಾಸ್ ಪ್ರಾಂತ್ಯಕ್ಕೆ ಸ್ವಾಮೀಜಿಯವರು ಹೊಸಬರೇನಲ್ಲ ಸುನಾಮಿ, ಗಾಜಾ ಪ್ರವಾಹ ಇಂಥ ಪರಿಸ್ಥಿತಿಯಲ್ಲಿ ಸ್ವಾಮೀಜಿಯವರು ತಮ್ಮ ತಂಡದವರೊಂದಿಗೆ ಪರಿಹಾರ ಕಾರ್ಯಕ್ಕೆ ಧುಮುಕುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ ಸರಿ ಇಲ್ಲಿಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅತ್ಯಂತ ಪ್ರೀತಿಯಿಂದ ಗೌರವದಿಂದ ಪೂಜ್ಯ ಸ್ವಾಮೀಜಿಯವರನ್ನು ಬರಮಾಡಿಕೊಳ್ಳುತ್ತಾರೆ.

IMG 20231226 WA0006

ನಿಜಕ್ಕೂ ಹೇಳಬೇಕಿದ್ದರೆ ಪೂಜ್ಯ ಸ್ವಾಮಿ ಜಪಾನಂದ ಜೇವರು ಸ್ವಾಮಿ ವಿವೇಕಾನಂದರು ಬಯಸಿದಂತಹ ತ್ಯಾಗ ಮತ್ತು ವೈರಾಗ್ಯಗಳ ಹಿನ್ನೆಲೆಯಲ್ಲಿ ಸೇವೆಯ ಯಜ್ಞವನ್ನು ನಿರಂತರವಾಗಿ ನಡೆಸುತ್ತಿರುವುದು ಬಹುಶಹ ಸ್ವಾಮಿ ವಿವೇಕಾನಂದರೇ ಸ್ವಾಮೀಜಿಯವರಲ್ಲಿ ಶಕ್ತಿ ತುಂಬಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎನ್ನಬಹುದು ಪೂಜ್ಯ ಸ್ವಾಮಿ ಜಪಾನಂ ದ ಜಿಯವರ ಪ್ರಕಾರ ಈ ನೂತನ ಪ್ರವಾಹ ಪರಿಹಾರ ಕಾರ್ಯ ಅಂದರೆ 150 ವರ್ಷದ ನಂತರ ಬಿದ್ದಿರುವ ಮಹಾಪೂರದ ಪರಿಸ್ಥಿತಿಯನ್ನು ಅದರಲ್ಲಿಯೂ ಅತ್ಯಂತ ದುಸ್ತರ ಹಾಗೂ ಪರಿಣಾಮಕಾರಿಯಾದ ಈ ಭಯಾನಕ ಮಹಾಪೂರದಿಂದ ಛಿದ್ರ ಛಿದ್ರವಾಗಿರುವ ಜನಸಾಮಾನ್ಯರ ಜೀವನಕ್ಕೆ ತತಕ್ಷಣದ ಸಹಾಯವನ್ನು ನೀಡಲು ಸ್ವಾಮೀಜಿಯವರ ತಂಡ ಈ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ ತೂತುಕುಡಿ ಹಾಗೂ ತಿರುವಣ್ಣವೆಲ್ಲಿ ಪ್ರದೇಶಗಳ ಜನರು ಪೂಜ್ಯ ಸ್ವಾಮೀಜಿಯವರಲ್ಲಿ ಅತ್ಯಂತ ಕಳಿಕಳಿಯಾಗಿ ಸಹಾಯ ನೀಡುವಂತೆ ಸ್ವಾಮೀಜಿ ಇರುವ ಕಡೆಗೆ ಬಂದು ಮನವಿ ಸಲ್ಲಿಸುತ್ತಿರುವುದು ಪೂಜ್ಯ ಸಾಮಿ ಜಪಾನಂದ ಜಿ ಅವರ ಕಾರ್ಯ ವೈಖರಿಗೆ ಒಂದು ಸಾಕಾರ ರೂಪವಾಗಿದೆ. ಆಶ್ರಮದ ಹಾಗೂ ಇತರ ಸಂಘ ಸಂಸ್ಥೆಗಳ ಪ್ರಕಾರ ಮತ್ತೆ 5000ಕ್ಕೂ ಮಿಗಿಲಾದ ಕುಟುಂಬಗಳಿಗೆ ಪರಿಹಾರ ಕಾರ್ಯವನ್ನು ನಡೆಸಲು ಸ್ವಾಮಿ ವಿವೇಕಾನಂದ ತಂಡ ತಯಾರಾಗಿದೆ ಎನ್ನಬಹುದು ಆಶ್ರಮದ ಸಮಸ್ತ ಭಕ್ತರ ಹಾಗೂ ಬೇರೆ ಬೇರೆ ಮಹಾನಗರಗಳ ಹಿತೈಷಿಗಳ ಶುಭಾಶಯಗಳು ಪೂಜ್ಯ ಸ್ವಾಮಿ ಜಪಾನಂದ ವರು ಇಂತಹ ಮಹತ್ಕಾರ್ಯಗಳನ್ನು ಮುಂದೆಯೂ ನಡೆಸುವಂತ ಅಗಲಿ ಎಂದು ಆ ದಯಾಮಯನಾದ ಭಗವಂತನಲ್ಲಿ ಎಲ್ಲರ ಹೃತ್ಪೂರ್ವಕವಾದ ವಿನಮ್ರ ಪ್ರಾರ್ಥನೆ.

ವರದಿ

ಪಾವಗಡ: ಇಮ್ರಾನ್ ಉಲ್ಲಾ

Document

Leave a Reply

Your email address will not be published. Required fields are marked *