Document

Veerappan: ಲೋಕಸಮರದಲ್ಲಿ ವೀರಪ್ಪನ್ ಪುತ್ರಿ ಭರ್ಜರಿ ಪ್ರಚಾರ– ನನ್ನ ತಂದೆಯೇ ನನಗೆ ಸ್ಪೂರ್ತಿ ಎಂದ ವಿದ್ಯಾರಾಣಿ

Janataa24 NEWS DESK 

 

Veerappan: ಲೋಕಸಮರದಲ್ಲಿ ವೀರಪ್ಪನ್ ಪುತ್ರಿ ಭರ್ಜರಿ ಪ್ರಚಾರ– ನನ್ನ ತಂದೆಯೇ ನನಗೆ ಸ್ಪೂರ್ತಿ ಎಂದ ವಿದ್ಯಾರಾಣಿ

Veerappan,NTK,
Veerappan: ಲೋಕಸಮರದಲ್ಲಿ ವೀರಪ್ಪನ್ ಪುತ್ರಿ ಭರ್ಜರಿ ಪ್ರಚಾರ– ನನ್ನ ತಂದೆಯೇ ನನಗೆ ಸ್ಪೂರ್ತಿ ಎಂದ ವಿದ್ಯಾರಾಣಿ

 

ಚೆನ್ನೈ: ದೇಶದಾದ್ಯಂತ ಇದೀಗ ಲೋಕಸಭಾ ಚುನಾವಣೆ ಕಣ ರಂಗೇರಿದ್ದು ಎಲ್ಲಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಬರದಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಇದೀಗ ಕಾಡುಗಳ ವೀರಪ್ಪನ್ ಮಗಳು ವಿದ್ಯಾರಾಣಿ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

 

ವೀರಪ್ಪನ್ ಪುತ್ರಿ ವಿದ್ಯಾರಾಣಿಯವರು ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ಚುನಾವಣೆ ರಣರಂಗಕ್ಕೆ ಕಾಲಿಟಿದ್ದಾರೆ. ನಾಮ್ ತಮಿಳರ್ ಕಚ್ಚಿ (NTK) ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿರುವ ವಿದ್ಯಾರಾಣಿ ತನ್ನ ತಂದೆಯ ಹೆಸರಲ್ಲಿ ಕಾಂಪೇನ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ವಾಹನಕ್ಕೆ ಕಾಡುಗಳ್ಳ ವೀರಪ್ಪನ್ ಫೋಟೋ ಇರುವ ಬ್ಯಾನರ್ ಹಾಕಿಕೊಂಡು ಕ್ಯಾಂಪೇನ್ ಮಾಡುತ್ತಿದ್ದು ನನ್ನ ತಂದೆಯೇ ನನಗೆ ಸ್ಫೂರ್ತಿ ಎಂದು ಪ್ರಚಾರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

 

 

ವೃತ್ತಿಯಲ್ಲಿ ವಕೀಲೆಯಾಗಿರುವ ವಿದ್ಯಾರಾಣಿಯವರು 2020 ಜುಲೈನಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ನಂತರ ರಾಜ್ಯದ ಯೂತ್ ಬಿಜೆಪಿ ವಿಂಗ್​ಗೆ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದರು. ಆದರೆ ಕಾರಣಾಂತರದಿಂದ ಬಿಜೆಪಿಯನ್ನು ತೊರೆದಿದ್ದ ವಿದ್ಯಾರಾಣಿ ಸದ್ಯ ಎನ್​​ಟಿಕೆ(NTK) ಪಕ್ಷದಿಂದ ಲೋಕ ಸಮರಕ್ಕೆ ಇಳಿದು ಪ್ರಚಾರ ಮಾಡುತ್ತಿದ್ದಾರೆ. ಆದರೆ ಪ್ರಚಾರದಲ್ಲಿ ವೀರಪ್ಪನ್(Veerappan) ಬ್ಯಾನರ್​ ಬಳಸಿರುವುದಕ್ಕೆ ರಾಜ್ಯದ ಕೆಲವರಿಗೆ ಬೇಸರ ತರಿಸಿದೆ.

 

https://www.janataa24.com/bagalakote-free-trip-for-gifted-poor-students-by-jeewabandhu-foundation/

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

Subscribe YouTube

https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *