Document

UPSC 2023 RESULTS: ಯುಪಿಎಸ್ ಸಿ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವಗೆ ಪ್ರಥಮ ಸ್ಥಾನ.

Janataa24 NEWS DESK

UPSC 2023 RESULTS: ಯುಪಿಎಸ್ ಸಿ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವಗೆ ಪ್ರಥಮ ಸ್ಥಾನ

ನವದೆಹಲಿ: ನಾಗರಿಕ ಸೇವಾ ಪರೀಕ್ಷೆ -2023 ರ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 1,016 ಅಭ್ಯರ್ಥಿಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಐಎಎಸ್‌ ವಿಭಾಗದಲ್ಲಿ ಉತ್ತರ ಪ್ರದೇಶ ಮೂಲದ ಆದಿತ್ಯ ಶ್ರೀವಾಸ್ತವ್‌ ದೇಶಕ್ಕೆ ಮೊದಲ 1 ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಐಎಎಸ್ 180, ಐಎಫ್‌ಎಸ್ 37, ಐಪಿಎಸ್ ವಿಭಾಗದಲ್ಲಿ 200 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರೂಪ್ ಎ 613, ಗ್ರೂಪ್ ಬಿ 113 ಮಂದಿ ಆಯ್ಕೆಯಾಗಿದ್ದಾರೆ.

ಈ ವರ್ಷ ಆದಿತ್ಯ ಶ್ರೀವಾಸ್ತವ(Aditya Shrivastava) ಪ್ರಥಮ ಸ್ಥಾನ ಪಡೆದರೆ, ಅನಿಮೇಶ್ ಪ್ರಧಾನ್ ದ್ವಿತೀಯ, ಡೋಣೂರು ಅನನ್ಯಾ ರೆಡ್ಡಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಫಲಿತಾಂಶಕ್ಕೆ https://upsc.gov.in/ ಗೆ ಭೇಟಿ ನೀಡಬಹುದು.

ಇದರಲ್ಲಿ ಸಾಮಾನ್ಯ ವರ್ಗದಿಂದ 347, ಆರ್ಥಿಕವಾಗಿ ದುರ್ಬಲ ವರ್ಗದಿಂದ 115, ಹಿಂದುಳಿದ ವರ್ಗದಿಂದ 303, ಪರಿಶಿಷ್ಟ ಜಾತಿ 165, ಪರಿಶಿಷ್ಟ ಪಂಗಡ 86 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ

https://www.janataa24.com/pavagada-2-lakh-undocumented-rupees-seized/

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

Document

Leave a Reply

Your email address will not be published. Required fields are marked *