Document

Turuvekere: ದ್ವಿತೀಯ PUCಯ ಫಲಿತಾಂಶದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರದ್ದೇ ಮೇಲುಗೈ.

Janataa24 NEWS DESK

Turuvekere: ಬಾರಿ ತುರುವೇಕೆರೆ ತಾಲೂಕಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಮೇಲುಗೈ.ಪಿ ಯು ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇಕಡ 100% , ತಾಲೂಕಿಗೆ ಪ್ರಥಮ ಸ್ಥಾನ ನೀಡಿದ ಎಸ್ ಬಿ ಜಿ ಕಾಲೇಜಿನ ವಿದ್ಯಾರ್ಥಿನಿಯರು.

Turuvekere, SBG,GIRLS,

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಟಿ ಬಿ ಕ್ರಾಸ್ ನಲ್ಲಿರುವ ,ಶ್ರೀ ಆದಿಚುಂಚನಗಿರಿ ಶಾಖ ಮಠದ ಎಸ್ ,ಬಿ ,ಜಿ , ಪಿ ಯು , ಕಾಲೇಜಿನ ವಿದ್ಯಾರ್ಥಿನಿಯರು ಈ ಬಾರಿ 2023-24 ನೆ ಸಾಲಿನ ದ್ವಿತೀಯ ಪಿಯುಸಿ(2nd PUC) ಪರೀಕ್ಷೆಯಲ್ಲಿ ಶೇಕಡ 100%, ಫಲಿತಾಂಶ ನೀಡಿ ತಾಲೂಕಿಗೆ ಪ್ರಥಮ ಸ್ಥಾನ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಶೇಕಡ 100% ಫಲಿತಾಂಶ ನೀಡಿದ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.ಇನ್ನು ಈ ಕಾಲೇಜಿನಲ್ಲಿ ಈ ಬಾರಿ ಕಾಲೇಜಿನ ಟಾಪರ್ಸ್ ಆಗಿ, ವಾಣಿಜ್ಯ ವಿಭಾಗದಿಂದ ಶ್ರೀರಕ್ಷಾ (587) ಅಂಕ, ವಿಜ್ಞಾನ ವಿಭಾಗದಿಂದ ಕುಶಾಲ (577) ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನದಲ್ಲಿದ್ದು, ಇನ್ನೋರ್ವ ವಿದ್ಯಾರ್ಥಿನಿ, ವಿಜ್ಞಾನ ವಿಭಾಗದ ಮಾನಸ ಜಿ (574) ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.ಇನ್ನೂ ಕನ್ನಡ ಭಾಷೆ ಮಾಧ್ಯಮದಲ್ಲಿ ಐದು ವಿದ್ಯಾರ್ಥಿಗಳು 100 ಕ್ಕೆ100, ಅಂಕ.ಮೂರು ವಿದ್ಯಾರ್ಥಿಗಳು ಜಿಯೋಗ್ರಫಿಯಲ್ಲಿ 100 ಕ್ಕೆ100 ಅಂಕ.ಒಬ್ಬರು ವಿದ್ಯಾರ್ಥಿ ಎಕನಾಮಿಕ್ಸ್ನಲ್ಲಿ 100 ಕ್ಕೆ100 ಅಂಕ ಪಡೆದು, ಒಟ್ಟಾರೆ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 88 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಿದ್ದು 88 ವಿದ್ಯಾರ್ಥಿಗಳು ವಿವಿಧ ಶ್ರೇಣಿಗಳಲ್ಲಿ ಉತ್ತೀರ್ಣರಾಗಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.

ಇದೇ ವೇಳೆ ಫಲಿತಾಂಶವನ್ನು ಕುರಿತು ಮಾತನಾಡಿದ ಶಾಖ ಮಠದ ಮೇಲ್ವಿಚಾರಕರಾದ ಪೂಜ್ಯ ರಾಜಶೇಖರನಾಥ ಸ್ವಾಮೀಜಿ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಸಿ ಟಿ ರಾಜು, ಮಾತನಾಡಿ, ನಮ್ಮ ಕಾಲೇಜಿನಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ ಶೇಕಡ 100% ಬಂದಿದ್ದು, ನಮಗೂ ಸಂತಸದ ವಿಷಯ, ಶ್ರೀ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿಯಾದ ಪ್ರಸನ್ನನಾಥ ಸ್ವಾಮೀಜಿಯವರ ಮಾರ್ಗದರ್ಶನದಂತೆ ಪಾಠ ಪ್ರವಚನಗಳು ನಡೆದುಕೊಂಡು ಬಂದಿದ್ದು, ವಿದ್ಯಾರ್ಥಿಗಳು(Students) ಸಹ ಬಹಳ ಶ್ರದ್ಧೆಯಿಂದ ಪಾಠ ಪ್ರವಚನಗಳನ್ನು ಆಲಿಸಿ, ನಮ್ಮ ತಾಲೂಕಿಗೆ ಈ ಫಲಿತಾಂಶ ತಂದುಕೊಟ್ಟಿರುವುದು, ನಮಗೂ, ನಮ್ಮ ಸಂಸ್ಥೆಗೂ ಮತ್ತು ನಮ್ಮ ಕಾಲೇಜಿನ ಎಲ್ಲಾ ಶಿಕ್ಷಕ ವರ್ಗದವರಿಗೂ ಬಹಳ ಖುಷಿ ತಂದಿದೆ ಎಂದರು.ಇದೇ ವೇಳೆ ಎಸ್ ಬಿಜಿ ವಿದ್ಯಾಲಯದ ಪ್ರಾಂಶುಪಾಲರಾದ ಗಿರೀಶ್, ಕನ್ನಡ ಉಪನ್ಯಾಸಕರಾದ ಗೋವಿಂದಯ್ಯ, ದೈಹಿಕ ನಿರ್ದೇಶಕ ಉದಯ್, ಶಂಕರ್, ಹಾಗೂ ಉಪನ್ಯಾಸಕರುಗಳಾದ ನಿತಿನ್, ಮೋಹನ್, ದಿಲೀಪ್, ಉಪನ್ಯಾಸಕಿಯರಾದ ಪೂಜಾ, ಸಹನ ,ನಯನ, ಇವರು ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

https://www.janataa24.com/turuvekere-nirbhaya-vote-fearlessly-e-o-sivaraj/

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

Document

Leave a Reply

Your email address will not be published. Required fields are marked *