Janataa24 NEWS DESK
Turuvekere: ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತ ಜಾಥಾ, ನಿರ್ಭೀತಿಯಾಗಿ ಮತವನ್ನು ಚಲಾಯಿಸಿ , ತಾಲೂಕು ಕಾರ್ಯ ನಿರ್ವಹಕ ಅಧಿಕಾರಿ ಶಿವರಾಜಯ್ಯ ಮನವಿ.

ತುರುವೇಕೆರೆ: 2024ರ ಲೋಕಸಭಾ ಚುನಾವಣೆ(Lokasabha Election) ಯು ಏಪ್ರಿಲ್ 26ರ ಶುಕ್ರವಾರರಂದು ನಡೆಯಲಿದ್ದು, ಸಾರ್ವಜನಿಕರು ಯಾವುದೇ ಗೊಂದಲಗಳಿಲ್ಲದೆ ನಿರ್ಭಯವಾಗಿ ತಮ್ಮ ಮತವನ್ನು ಚಲಾಯಿಸಬೇಕೆಂದು ತುರುವೇಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಶಿವರಾಜಯ್ಯ ಮನವಿ ಮಾಡಿದರು.
ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ, ವತಿಯಿಂದ ವಿಶೇಷ “ಮತದಾನ ಜಾಗೃತಿ ಜಾಥಾ” (ಪಂಜಿನ ಮೆರವಣಿಗೆ ಮೂಲಕ) ದಂಡಿನ ಶಿವರ ಸರ್ಕಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ ಅವರು ಮಾತನಾಡಿ, ತಾಲೂಕಿನಲ್ಲಿ ಶೇಕಡ 100%ರಷ್ಟು ಮತದಾನ ಮಾಡಿಸುವ ಸಲುವಾಗಿ ಮತದಾರರಿಗೆ ತಮ್ಮ ಮತದ ಹಕ್ಕಿನ ಪ್ರಾಮುಖ್ಯತೆಯನ್ನು ತಿಳಿಸಬೇಕೆಂಬ ಉದ್ಧೇಶದಿಂದ, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮತದಾನದ ಅರಿವನ್ನು ಮೂಡಿಸಲು ಹಲವಾರು ಇಲಾಖೆಗಳ ಸಹಯೋಗದೊಂದಿಗೆ ಸಾರ್ವಜನಿಕವಾಗಿ ಪ್ರಚಾರಪಡಿಸುತ್ತಾ, ಒಂದೊಳ್ಳೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಸಂಬಂಧ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ, ನಿರ್ಭಯವಾಗಿ ಮತ್ತು ನಿರ್ಭೀತವಾಗಿ ತಮ್ಮ ಮತವನ್ನು ಚಲಾಯಿಸಿ ಎಂದರು. ಮತದಾನವು ಪವಿತ್ರವಾಗಿದ್ದು, ತಮ್ಮ ಹಕ್ಕು ಮತ್ತು ತಮ್ಮ ಮತವನ್ನು ಮಾರಿಕೊಳ್ಳಬೇಡಿ, ತಮಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶ ಸಿಗುವಂತಹ ಸಮಯ ಇದಾಗಿದೆ. ಏಪ್ರಿಲ್ 26ರಂದು ಮತದಾನವನ್ನು ಮಾಡುವ ಮೂಲಕ ಎಲ್ಲ ವಯಸ್ಕರು ತಪ್ಪದೆ ಮತದಾನ ಮಾಡಿ ತಾಲೂಕಿನಲ್ಲಿ ನೂರರಷ್ಟು ಮತದಾನಕ್ಕೆ ಸಹಕರಿಸಬೇಕೆಂದು ತಿಳಿಸಿದರು. ಈ ವೇಳೆ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರಿಂದ ಲೋಕಸಭಾ ಚುನಾವಣಾ ಬಗ್ಗೆ ಮತದಾರರಿಗೆ ಅರಿವು ಮೂಡಿಸುವ ಘೋಷಾ ವಾಕ್ಯಗಳೊಂದಿಗೆ, ದಂಡಿನಶಿವರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೊತೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಪಂಜಿನ ವೃತ್ತ ನಿರ್ಮಿಸಿ ನಂತರ ಪಂಜನ್ನು ಹಿಡಿದು ಸಂಚರಿಸಲಾಯಿತು. ಜಾಥಾ ಕಾರ್ಯಕ್ರಮದಲ್ಲಿ ತಾಲೂಕು ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ದಂಡಿನಶಿವರ ಗ್ರಾಮ ಪಂಚಾಯಿತಿ ಪಿ.ಡಿ.ಒ ಹಾಗೂ ಸಿಬ್ಬಂದಿಗಳು ಮತ್ತು ತಾಲೂಕಿನ ಹಲವಾರು ಗ್ರಾಮ ಪಂಚಾಯಿತಿ ಪಿ. ಡಿ. ಒ ಗಳು, ಕಾರ್ಯದರ್ಶಿಗಳು, ಎಸ್. ಡಿ. ಎ, ಬಿಲ್ ಕಲೆಕ್ಟರ್ಸ್, ಡಿ.ಇ. ಒ ಗಳು ಹಾಗೂ ನರೇಗಾ ಯೋಜನೆಯ ಇಂಜಿನಿಯರ್ಸ್, ಬಿ. ಎಫ್. ಟಿ, ಗ್ರಾಮ ಕಾಯಕ ಮಿತ್ರರು ಸೇರಿದಂತೆ ಪೋಲಿಸ್ ಇಲಾಖೆ ಸಿಬ್ಬಂದಿಗಳು,ಗ್ರಾಮಸ್ಥರು, ಮುಂತಾದವರು ಭಾಗವಹಿಸಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/tumkur-pavagada-ramkrishna-ashram-ceo-prabhu/