Document

Turuvekere: ದಲಿತ ವಿರೋಧಿ,ಸಿ ಈ ಓ ಪ್ರಭು ಅವರನ್ನು ಕೂಡಲೇ ಜಿಲ್ಲೆಯಿಂದ ವರ್ಗಾವಣೆ ಮಾಡಿ ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು

Janataa24 NEWS DESK

Turuvekere: ದಲಿತ ವಿರೋಧಿ,ಸಿ ಈ ಓ ಪ್ರಭು ಅವರನ್ನು ಕೂಡಲೇ ಜಿಲ್ಲೆಯಿಂದ ವರ್ಗಾವಣೆ ಮಾಡಿ ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು,ದಸಂಸ ಸಂಚಾಲಕ ದಂಡಿನಶಿವರ ಕುಮಾರ್ ಎಚ್ಚರಿಕೆ.

Turuvekere: ದಲಿತ ವಿರೋಧಿ,ಸಿ ಈ ಓ ಪ್ರಭು ಅವರನ್ನು ಕೂಡಲೇ ಜಿಲ್ಲೆಯಿಂದ ವರ್ಗಾವಣೆ ಮಾಡಿ ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಹಿರಿಯ ದಲಿತ ಮುಖಂಡರುಗಳಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು. ಇದೇ ವೇಳೆ ಡಿಎಸ್ಎಸ್ ತಾಲೂಕು ಸಂಚಾಲಕ ದಂಡಿನ ಶಿವರ ಕುಮಾರ್ ಮಾತನಾಡಿ ತುರುವೇಕೆರೆ ತಾಲೂಕಿನ ಪಿ ಆರ್ ಡಿ ಎಂಜಿನಿಯರ್ ಆದ ನರಸಿಂಹಮೂರ್ತಿ ಅವರನ್ನು ಸುಖ ಸುಮ್ಮನೆ ಕರ್ತವ್ಯ ನಿರ್ವಹಣೆ ಮಾಡುತ್ತಿಲ್ಲ ಲೋ ಪ್ರೋಗ್ರೆಸ್ ಮಾಡುತ್ತಿದ್ದಾರೆಂದು ಅವರನ್ನು ಅಮಾನತ್ತಿನಲ್ಲಿ ಇಟ್ಟಿದ್ದು, ಜೊತೆಗೆ ತುರುವೇಕೆರೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಣಾಧಿಕಾರಿಯಾದ ಶಿವರಾಜಯ್ಯ ಅವರನ್ನು ಸಹ ಇಲ್ಲದೆ ಇರುವ ಸಮಸ್ಯೆಗಳನ್ನು ಮತ್ತು ಆರೋಪಗಳನ್ನು ಮಾಡಿ ಸರ್ಕಾರಕ್ಕೆ ಅಮಾನತ್ತಿನ ಪತ್ರ ಬರೆದಿದ್ದು ಇದರ ಜೊತೆಗೆ ಗುಬ್ಬಿ ತಾಲೂಕಿನ ಹಾಗಲವಾಡಿ ಗ್ರಾಮ ಪಂಚಾಯಿತಿ ಪಿಡಿಓ ಶಿವಕುಮಾರ್ ಅವರನ್ನು ಸಹ ನರೇಗಾ ಯೋಜನೆ ಅಡಿ ಹಣ ದುರುಪಯೋಗ ಮಾಡಿದ್ದಾರೆಂದು ಸುಳ್ಳು ಆರೋಪ ಮಾಡಿ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಕೂಡ fir ದಾಖಲು ಮಾಡಿದ್ದಾರೆ, ಇನ್ನು ಪಾವಗಡ ತಾಲೂಕಿನ ಕೊಡಮಡು ಗ್ರಾಮ ಪಂಚಾಯಿತಿ ಪಿಡಿಓ ಅವರನ್ನು ಕೂಡ ಕರ್ತವ್ಯ ಲೋಪ ಎಂಬ ಆರೋಪ ಮಾಡಿ ಮತ್ತು ಕೊರಟಗೆರೆ ತಾಲೂಕಿನ ಕೋಟೆ ಗ್ರಾಮ ಪಂಚಾಯಿತಿ ಪಿಡಿಒ ಸುನಿಲ್ ಅವರನ್ನು ಸಹ ಕರ್ತವ್ಯ ಲೋಪ ಎಂಬ ಆರೋಪ ಮಾಡಿ ಸಿ ಈ ಓ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಸೇವೆ ಮಾಡುತ್ತಿರುವ ಪ್ರತಿಯೊಬ್ಬ ದಲಿತ ಅಧಿಕಾರಿಗಳನ್ನು ಇಲ್ಲಸಲ್ಲದ ಆರೋಪ ಮಾಡಿ ಅಮಾನತ್ತಿನಲ್ಲಿಡುವ ಕೆಲಸ ಮಾಡುತ್ತಿದ್ದು ಒಟ್ಟಾರೆ ದಲಿತ ವಿರೋಧಿ ನೀತಿ ಅನುಸರಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಇದರ ಪರಿಣಾಮ ರಾಜ್ಯಾದ್ಯಂತ ತುಮಕೂರು ಜಿಲ್ಲೆಯ ಸಿಇಓ ಪ್ರಭು ಅವರ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಇನ್ನೊಬ್ಬ ದಲಿತ ಮುಖಂಡರಾದ ಚಿದಾನಂದ್ ಮಾತನಾಡಿ ಎಲ್ಲಾ ಪ್ರಗತಿ ಪರಿಶೀಲನ ಸಭೆಗಳಲ್ಲಿ ಜಿಲ್ಲಾಧ್ಯಂತ ಕಾರ್ಯನಿರ್ವಹಿಸುತ್ತಿರುವ ದಲಿತ ಅಧಿಕಾರಿಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ದಲಿತ ವಿರೋಧಿ ನೀತಿ ಅನುಸರಿಸಿ ವೈಯಕ್ತಿಕ ನಿಂದನೆ ಮಾಡುತ್ತಿದ್ದು ತುಮಕೂರು ಜಿಲ್ಲೆಯ ಸಿಇಓ ಪ್ರಭು ಅವರು ದಲಿತ ವಿರೋಧಿ ನೀತಿ ಅನುಸರಿಸಿ ಅಸ್ಪೃಶ್ಯತೆ ಮನಸ್ಥಿತಿ ಹೊಂದಿದ್ದು ಇಂತಹ ಅಧಿಕಾರಿ ನಮ್ಮ ಜಿಲ್ಲೆಗೆ ಅವಶ್ಯ ಕತೆ ಇಲ್ಲ ಹಾಗಾಗಿ ಈ ಕೂಡಲೇ ಸಿಇಓ ಪ್ರಭು ಅವರ ವಿರುದ್ಧ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಮತ್ತು ದಲಿತರೆ ಆಗಿರುವ ಮಾನ್ಯ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಇವರನ್ನು ಕೂಡಲೇ ಜಿಲ್ಲೆಯಿಂದ ಬೇರಡೆ ವರ್ಗಾವಣೆ ಮಾಡಬೇಕೆಂದು ದಲಿತ ಪ್ರಗತಿಪರ ಸಂಘಟನೆಗಳು ಒತ್ತಾಯ ಮಾಡುತಿದ್ದೇವೆ, ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಮನಸ್ಥಿತಿ ಹೇಗಿದೆ ಎನ್ನುವುದಕ್ಕೆ ಉದಾಹರಣೆ ಜಿಲ್ಲಾ ಪಂಚಾಯಿತಿಯಲ್ಲಿ ನರೇಗಾ ಎಡಿಪಿಸಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಂಜೇಗೌಡ ಎಂಬುವರ ಮೇಲೆ ಸಾರ್ವಜನಿಕರಿಂದ ಹಲವು ಬಾರಿ ಆಯುಕ್ತಕರಿಗೆ ದೂರು ಸಲ್ಲಿಕೆಯಾಗಿ ಆಯುಕ್ತಕರಿಂದ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ವರದಿ ನೀಡಲು ಸಹ ಪತ್ರ ಬರೆದಿದ್ದು ಇದುವರೆಗೆ ಸ್ವಜಾತಿ ಎಂಬ ಕಾರಣಕ್ಕೆ ಇವರ ಮೇಲೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಜೊತೆಗೆ ಜೆಜೆ ಎಂ ಯೋಜನೆಯನ್ನು ಅನುಷ್ಠಾನ ಮಾಡಲು ಇಲ್ಲ ಸಲ್ಲದ ಕಾನೂನುಗಳನ್ನು ಮಾಡಿ ಬಿಲ್ಲುಗಳನ್ನು ಮಾಡುವಲ್ಲಿ ವಿಳಂಬ ಮಾಡಿ ಗುತ್ತಿಗೆದಾರರು ಯಾರು ಸಹ ಕೆಲಸ ಮಾಡಲು ಮುಂದೆ ಬಾರದಂತಹ ಪರಿಸ್ಥಿತಿ ನಿರ್ಮಾಣ ಮಾಡಿ ತುಮಕೂರು ಜಿಲ್ಲೆಯಲ್ಲಿ ಜೆಜೆ ಎಂ ಯೋಜನೆ ವಿಫಲವಾಗಲು ನೇರವಾಗಿ ಇವರೇ ಕಾರಣರಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕಿನ ಹಿರಿಯ ಮತ್ತು ಕಿರಿಯ ದಲಿತ ಮುಖಂಡರುಗಳಾದ ಮುನಿಯರು ರಂಗಸ್ವಾಮಿ, ನಿವೃತ್ತ ಶಿಕ್ಷಕರಾದ ಬೋರಪ್ಪ, ಗುರುದತ್, ಹೀಗೆ ಅನೇಕ ಹಿರಿಯ ದಲಿತ ಮುಖಂಡರು ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.


 

Document

Leave a Reply

Your email address will not be published. Required fields are marked *