Janataa24 NEWS DESK
Turuvekere: ಶ್ರೀ ಮಂಜುನಾಥ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟದಿಂದ ಕಾರ್ಮಿಕ ದಿನ ಆಚರಣೆ.

ತುರುವೇಕೆರೆ: ಪಟ್ಟಣದ ತಿಪಟೂರು ರಸ್ತೆಯಲ್ಲಿರುವ ಶ್ರೀ ಮಹಾಗಣಪತಿ ಆಸ್ಥಾನ ಮಂಟಪದ ಆವರಣದಲ್ಲಿರುವ ಸಭಾಂಗಣದಲ್ಲಿ ಶ್ರೀ ಮಂಜುನಾಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ, ಶ್ರೀ ಶ್ರಮಜೀವಿ ಕಟ್ಟಡ ಕಾರ್ಮಿಕರ ಹಿತ ರಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ಕಟ್ಟಡ ಮಹಾತ್ಮ ಗಾಂಧಿ ನರೇಗಾ ಇತರೆ ನಿರ್ಮಾಣ ಅಸಂಘಟಿತ ಕಾರ್ಮಿಕರ ಸಂಘ, ದ ವತಿಯಿಂದ ಇಂದು ಕಾರ್ಮಿಕರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು.
ಇದೇ ವೇಳೆ ಶ್ರೀ ಮಂಜುನಾಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಆರ್ ಮಂಜುನಾಥ್ ಮಾತನಾಡಿ, ಕಾರ್ಮಿಕರನ್ನು ಗೌರವಿಸಲು ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮವು ನಿರಾಕರಿಸಲಾಗದ ಪಾತ್ರವನ್ನು ಹೊಂದಿದೆ. ಅನಾದಿ ಕಾಲದಿಂದಲೂ, ಕಾರ್ಮಿಕ ವರ್ಗವು ಹೆಚ್ಚಿನ ಕಾರಣಗಳಿಗಾಗಿ ಹೋರಾಡಿದೆ ಮತ್ತು ತ್ಯಾಗ ಮಾಡಿದೆ, ಹಾಗಾಗಿ ಕಾರ್ಮಿಕರಲ್ಲಿ ಒಗ್ಗಟ್ಟು ಬಹಳ ಮುಖ್ಯ, ಇಲಾಖೆಯಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ವಿಚಾರಗಳನ್ನು ತಿಳಿದುಕೊಳ್ಳಲು ಪ್ರತಿಯೊಬ್ಬ ಕಾರ್ಮಿಕರು ಪಾಲ್ಗೊಳ್ಳಬೇಕು ಎಂದರು.
ಇನ್ನು ಸಂಘಟನಾ ಕಾರ್ಯದರ್ಶಿಯಾದ ಕೆ ಜೆ ಮಂಜುನಾಥ್ ಮಾತನಾಡಿ, ಮೊದಲು ಸ್ವಾತಂತ್ರ್ಯಕ್ಕಾಗಿ ರಾಷ್ಟ್ರವನ್ನ ನಿರ್ಮಿಸಲು ಅನೇಕ ನಾಯಕರು ಕಾರ್ಮಿಕರಿಗೆ ದಾರಿದೀಪವಾಗಿದ್ದಾರೆ ಮತ್ತು ಅವರಲ್ಲಿ ಡಾ ಬಾಬು ಜಗಜೀವನ ರಾಮ್ ಕೂಡ ಒಬ್ಬರು. ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ತುಳಿತಕ್ಕೊಳಗಾದ ವರ್ಗಗಳ ಪ್ರತಿನಿಧಿಯಾಗಿ, ಡಾ. ಬಾಬು ಜಗಜೀವನ ರಾಮ್ ಅವರು ಜೀವನ ವೇತನ, ಯೋಗ್ಯ ಕೆಲಸದ ಪರಿಸ್ಥಿತಿಗಳು ಮತ್ತು ಕ್ರೂರ ಜಮೀನುದಾರರ ಕಪಿಮುಷ್ಠಿಯಿಂದ ರೈತರ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ. ತುಳಿತಕೊಳ್ಳಗಾದವರ ಬದುಕನ್ನು ಹಸನುಗೊಳಿಸುತ್ತಿದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಅವರು ಹೋರಾಡಿದರು
ರಾಷ್ಟ್ರ ನಿರ್ಮಾಣದಲ್ಲಿ ಅಸಂಖ್ಯಾತ ಶ್ರಮಜೀವಿಗಳ ಅಸಂಖ್ಯಾತ ಕೊಡುಗೆಯನ್ನು ನಾವು ಸ್ಮರಿಸುವಾಗ, ನಿರಂತರವಾಗಿ ಹೆಚ್ಚುತ್ತಿರುವ ಶ್ರಮೇವ ಜಯತೆಯ ಮನೋಭಾವದಿಂದ, ನಾವು ಡಾ. ಬಾಬು ಜಗಜೀವನ ರಾಮ್ ಅವರ ಕೊಡುಗೆಗಳನ್ನು ಸ್ಮರಿಸಬೇಕು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರನ್ನು ಒಳಗೊಂಡ ಕಾರ್ಮಿಕ ಕಲ್ಯಾಣ ಸುಧಾರಣೆಗಳಲ್ಲಿ ಮಹತ್ವದ ಬದಲಾವಣೆ ತರಲು ಶ್ರಮಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಿಐಟಿಯು ಸತೀಶ್, ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷರಾದ ಮಾರುತಿ, ರೈತ ಸಂಘದ ಶ್ರೀನಿವಾಸ್, ಮಹಿಳಾ ಕಾರ್ಮಿಕರು ವಿವಿಧಪರ ಸಂಘಟನೆಯ ಮುಖಂಡರು ಸಂಘದ ಪದಾಧಿಕಾರಿಗಳಾದ ಎಸ್ ಕೆ ಉಮೇಶ್, ಶ್ರೀನಿವಾಸ್ ಗೌಡ, ಶಿವಕುಮಾರ್, ಹನುಮಂತರಾಜು, ಲಿಂಗರಾಜು, ಸತೀಶ್ ತೂಬಿನ ಕಟ್ಟೆ, ರಮೇಶ್, ಡಿ ಎಚ್ ಸತೀಶ್, ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.