Turuvekere: ತಾಲೂಕಿನಲ್ಲಿ ರಸ್ತೆ ಅಪಘಾತ: ಮಾನವೀಯತೆ ಮೆರೆದ ಟಿ ಬಿ ಕ್ರಾಸ್ ವಾಸಿ ಮಮ್ತಾಜ್ ಮತ್ತು ಮಗ ಸಾಬೀರ್ ಹುಸೇನ್
ತುರುವೇಕೆರೆ: ಮಂಜುನಾಥ್
ತುರುವೇಕೆರೆ ತಾಲೂಕಿನ ಹೊಣಕೆರೆ ಗೊಲ್ಲರಹಟ್ಟಿ ಬಳಿ ರಸ್ತೆ ದುರಂತ. ಬೆಸ್ಕಾಂ ಗುತ್ತಿಗೆದಾರ ಜಗದೀಶ್ ಅವರ ಆದೇಶದಂತೆ ಮಾಯಸಂದ್ರ ಹೋಬಳಿ, ಕೋಡಿ ನಾಗಸಂದ್ರ ಟಿಬಿ ಕ್ರಾಸ್ ನಲ್ಲಿ ಕೆಲಸ ಮಾಡುತ್ತಿದ್ದು, ನಂತರ ನೊಣವಿನಕೆರೆ ಅಲ್ಲಿ ಕೆಲಸ ಮುಗಿಸಿ ಸಾಮಗ್ರಿ ಮತ್ತು ಕಾರ್ಮಿಕರನ್ನು ಒತ್ತೊಯ್ಯುತ್ತಿದ್ದ ವಾಹನ 407 ಕ್ಯಾಂಟರ್ ವಾಹನ ಹೊಣಕೆರೆ ಗೊಲ್ಲರಹಟ್ಟಿಯ ಬಳಿ ಎಕ್ಸೆಲ್ ಕಟ್ ಆಗಿ ಶನಿವಾರ ಸಂಜೆ ಅಪಘಾತವಾಗಿದೆ.

ಇನ್ನೂ ಈ ವಾಹನದಲ್ಲಿ ಕೆಲಸ ಮುಗಿಸಿ ವಾಪಸ್ ಸಾಗುವ ಸಮಯದಲ್ಲಿ ವಾಹನದ ಆಕ್ಕ್ಸೆಲ್ ಕಟ್ ಆಗಿ ಹೊಣಕೆರೆ ಗೊಲ್ಲರಹಟ್ಟಿ ಬಳಿ ವಾಹನ ಎರಡು ಪಲ್ಟಿ ಆಗಿದ್ದು, ಅದರಲ್ಲಿದ್ದ 15 ಜನ ಕಾರ್ಮಿಕರಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಇನ್ನೊಬ್ಬ ಕಾರ್ಮಿಕನಿಗೆ ಕೈ ಮುರಿದಿದ್ದು, ಉಳಿದ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಪ್ರಾಣಾಪಾಯದಿಂದ ಪಾರಾಗಿದ್ದ ಕಾರ್ಮಿಕರನ್ನು ಸ್ಥಳೀಯ ಟಿಬಿ ಕ್ರಾಸ್ ವಾಸಿ ಮಮ್ತಾಜ್ ಮತ್ತು ಮಗ ಸಾಬೀರ್ ಹುಸೇನ್, ಸೇರಿ ಗಾಯಾಳುಗಳ ಚಿಕಿತ್ಸೆಗೆ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದು. ಚಿಕಿತ್ಸೆ ಮುಗಿದ ನಂತರ ತಮ್ಮದೇ ಆದ ಸ್ವಂತ ಖರ್ಚಿನಲ್ಲಿ ವಾಹನಗಳನ್ನು ಮಾಡಿ, ಬೆಳ್ಳೂರ್ ಕ್ರಾಸಿನ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇನ್ನು ದುರಂತವೆಂದರೆ ಅಪಘಾತ ನಡೆದ ಸ್ಥಳದಿಂದ. ಎಷ್ಟೇ ಸಾರ್ವಜನಿಕರು ದೂರವಾಣಿ ಮೂಲಕ ಕರೆ ಮಾಡಿದರು ಯಾವುದೇ ಆಂಬುಲೆನ್ ಸೇವೆ ಲಭ್ಯವಾಗಿಲ್ಲ. ಇದಕ್ಕೆ ತಾಲೂಕಿನ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಶಾಸಕರು ನೇರ ಹೊಣೆಯಾಗಿರುತ್ತಾರೆ. ಇನ್ನು ಈ ಸಂಬಂಧ ಸುಮಾರು ಗಂಟೆಗಳ ನಂತರ ಸಿ ಎಸ್ ಪುರದಿಂದ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಗೆ ಬಂದಂತಹ ಆಂಬುಲೆನ್ಸ್. ಕೇವಲ ಸಣ್ಣಪುಟ್ಟ ಗಾಯಗಳಾಗಿದ್ದ ಮೂರು ಜನ ಗಾಯಾಳುಗಳನ್ನು ಕರೆ ದೊಯ್ದಿದೆ. ಇದರ ಮಧ್ಯೆ ಸ್ಥಳಕ್ಕೆ ತಾಲೂಕಿನ ಆರಕ್ಷಕ ಠಾಣೆ ಸಬ್ ಇನ್ಸ್ಪೆಕ್ಟರ್ ಕೇಶವಮೂರ್ತಿ ಮತ್ತು 112 ಆರಕ್ಷಕ ಸಿಬ್ಬಂದಿಗಳು ದುರಂತ ಆದ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.

ಜೊತೆಗೆ ಗುತ್ತಿಗೆದಾರ ಜಗದೀಶ್ ಮತ್ತು ಟೆಂಡರ್ ಮೂಲಕ ಈ ಕಾಮಗಾರಿ ಪಡೆದಿದ್ದ ಯಾವುದೇ ಮಾಲೀಕ ಸಹ ಇತ್ತ ಕಡೆ ಗಮನ ಹರಿಸಿಲ್ಲ. ಹಾಗಾದರೆ ಕಾರ್ಮಿಕರ ಜೀವದ ಜೊತೆ ಇವರುಗಳು ಆಟವಾಡುತ್ತಿದ್ದಾರ ಎನ್ನುವುದೇ ಪ್ರಶ್ನಾರ್ಥಕ ವಾಗಿ ಉಳಿದಿದೆ. ಈ ಅಪಘಾತ ಸಂಭವಿಸಿದ್ದು, ಇನ್ನು ಈ ಅವಘಡದಲ್ಲಿ ಗಾಯಗೊಂಡ ಕಾರ್ಮಿಕರುಗಳು ಹೆಚ್ ಡಿ ಕೋಟೆ ತಾಲೂಕು ಅಂತ ಸಂತ ಹೋಬಳಿ ನೂರಳ್ಳಿ. ಬಿ ಜೊತೆಗೆ ಮೃತಪಟ್ಟ ಕಾರ್ಮಿಕ ಆಯರ ಗೆರೆ ಗುಂಡಣ್ಣ ಎಂದು ತಿಳಿದು ಬಂದಿದೆ.