Janataa24 NEWS DESK
Turuvekere: ಜೂನ್ 14ಕ್ಕೆ ನೂತನ ಲಯನ್ಸ್ ಕ್ಲಬ್ ಭವನ ಲೋಕಾರ್ಪಣೆ– ಪಿ ಎಚ್ ಧನಪಾಲ್.

ತುರುವೇಕೆರೆ: ಕಳೆದ ಮೂವತ್ತೈದು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಲಯನ್ಸ್ ಕ್ಲಬ್ ನ ನೂತನ ಲಯನ್ಸ್ ಭವನ ನಿರ್ಮಾಣಗೊಂಡಿದ್ದು. ಇದೇ ತಿಂಗಳ 14 ರಂದು ಈ ಭವನವನ್ನು ಲೋಕರ್ಪಣೆಗೊಳ್ಳಲಿದೆ ಎಂದು ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಪಿ.ಎಚ್.ಧನಪಾಲ್ ಹೇಳಿದರು.
ಪಟ್ಟಣದ ಲಯನ್ಸ್ ಭವನದ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಳೆದ ಮೂವತ್ತೈದು ವರ್ಷದಿಂದಲೂ ಲಯನ್ಸ್ ಕ್ಲಬ್ ಸಾವಿರಾರು ಸೇವಾ ಚಟುವಟಿಕೆಗಳನ್ನು ಮಾಡಿದೆ. ತಮ್ಮ ಸಂಸ್ಥೆಯ ಎಲ್ಲಾ ಸದಸ್ಯರ ನೆರವು ಮತ್ತು ಇತರೆ ದಾನಿಗಳ ಸಹಕಾರದೊಂದಿಗೆ ಸುಮಾರು 2 ಕೋಟಿ ವೆಚ್ಚದಲ್ಲಿ ಲಯನ್ಸ್ ಭವನವನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸೇವಾ ಚಟುವಟಿಕೆಗಳನ್ನು ಈ ಭವನದಲ್ಲೇ ನಡೆಸಲಾಗುವುದು. ಈ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿರುವ ಹಲವು ದಾನಿಗಳನ್ನು ಿದೇ ಸಂಧರ್ಭದಲ್ಲಿ ಗೌರವಿಸಲಾಗುವುದು ಎಂದರು.
ಲಯನ್ಸ್ ಕ್ಲಬ್ ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಆರ್.ರಂಗನಾಥ್ ಮಾತನಾಡಿ ಈ ಲಯನ್ಸ್ ಭವನ ನಿರ್ಮಾಣದ ಕನಸು ಹೊತ್ತು ಹೆಚ್ಚು ಧನ ಸಹಾಯ ಮಾಡಿರುವ ಲಯನ್ಸ್ ಸಂಸ್ಥೆಯ ಆಧಾರ ಸ್ಥಂಭವಾಗಿರುವ ಡಾ.ಎ.ನಾಗರಾಜ್ ರವರ ಹೆಸರಿನಲ್ಲಿ ಲಯನ್ಸ್ ಹಾಲ್ ನ್ನು ನಿರ್ಮಿಸಲಾಗಿದೆ. ಹಗಲಿರುಳೂ ಶ್ರಮ ಹಾಕಿ ಪ್ರತಿಯೊಬ್ಬರನ್ನೂ ಭವನ ನಿರ್ಮಾಣ ಮಾಡಲು ಕೈ ಜೋಡಿಸುವಂತೆ ಮಾಡಿದ ಡಾ.ಎ.ನಾಗರಾಜ್ ರವರಿಗೆ ನಮ್ಮ ಸಂಸ್ಥೆ ವತಿಯಿಂದ ಗೌರವ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಟಿ.ವಿ.ಮಹೇಶ್ ಮಾತನಾಡಿ ನೂತನ ಭವನವನ್ನು ಕೇಂದ್ರ ಸಚಿವ ವಿ.ಸೋಮಣ್ಣನವರು ಉದ್ಘಾಟಿಸಲಿದ್ದಾರೆ. ಸಮಾರಂಭಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ, ಸಂಸ್ಥಾಪಕ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್, ಮಾಜಿ ಶಾಸಕ ಮಸಾಲಾ ಜಯರಾಮ್, ಬೆಮೆಲ್ ಕಾಂತರಾಜ್, ಜಿಲ್ಲಾ ಲಯನ್ಸ್ ಕ್ಲಬ್ ನ ಪದಾದಿಕಾರಿಗಳಾದ ಎನ್.ಮೋಹನ್‌ಕುಮಾರ್, ಸುರೇಶ್‌ರಾಮು, ನಿಮ್ಹಾನ್ಸ್ ಮಾಜಿ ನಿರ್ದೇಶಕರಾದ ಡಾ.ಡಿ.ನಾಗರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಪಿ.ಎಚ್.ಧನಪಾಲ್ ವಹಿಸುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಟಿಎವಿ ಗುಪ್ತಾ, ಡಾ.ಎ.ನಾಗರಾಜ್, ಗಂಗಾಧರ ದೇವರಮನೆ, ಎಸ್.ಎಂ.ಕುಮಾರಸ್ವಾಮಿ, ಸುನಿಲ್‌ಬಾಬು, ಮಿಹಿರಾಕುಮಾರ್, ಮಲ್ಲಿಕಾರ್ಜುನ್ ದುಂಡ, ಬಾಣಸಂದ್ರರಾಜಣ್ಣ, ಕೈಲಾಶ್, ರಾಮಕೃಷ್ಣ, ರವಿ, ಸಮಾಮಲ್ಲಿಕ್, ಭರತ್, ಸಚಿನ್, ಸಿ.ಜಿ.ನಾಗರಾಜ್, ಸೇರಿದಂತೆ ಹಲವಾರು ಮಂದಿ ಇದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
https://youtu.be/ioBwxkXfLqo?si=i1AACfgQuqhFUQV0
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.