Turuvekere: ದಲ್ಲಾಳಿಗಳಿಂದ ರೈತರನ್ನು ರಕ್ಷಣೆ ಮಾಡಿ.
ತುರುವೇಕೆರೆ: ತಾಲೂಕಿನಾದ್ಯಂತ ಈ ವರ್ಷ ಉತ್ತಮ ಮಳೆ ಆಗುತ್ತಿದ್ದು ತಾಲೂಕು ರೈತರಿಗೆ ಈ ಮುಂಗಾರಿನಲ್ಲಿ ಬೆಳೆಯುವ ಆಹಾರ ಧಾನ್ಯಗಳು, ಎಣ್ಣೆ ಕಾಳುಗಳು, 2024- 25 ನೇ ಸಾಲಿನ ಮುಂಗಾರು ಕಳೆದ ವರ್ಷಕ್ಕಿಂತ ಅಧಿಕವಾಗಿ ಬರುವ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ.


ಆದರೆ ಬಂದ ಬೆಳೆಗೆ ಮಾರಾಟ ಮಾಡಲು ೂಕ್ತ ಬೆಂಬಲ ಬೆಲೆ ಸಿಗದೆ ಕಾನೂನು ಬದ್ಧ ಎಂಎಸ್ಪಿ ಇಲ್ಲದೆ ರೈತ ಸಾಲಗಾರನಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ ಎನ್ನಲಾಗುತ್ತಿದೆ, ಹಾಗಾಗಿ ಮುಕ್ತ ಮಾರುಕಟ್ಟೆಯಲ್ಲಿ ರೈತರಿಂದ ದಾಸ್ತಾನು ಖರೀದಿಸುವ ದಲ್ಲಾಳಿ, ವರ್ತಕರು, ರೈತರ ಬೆಳೆಯನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ ರೈತರಿಗೆ ಎಲ್ಲಿ ಸುಲಿಗೆ ಮಾಡುತ್ತಾರೆ ಎಂಬ ನಿಗೂಢ ಭಯ ಶುರುವಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.
ಹಾಗಾಗಿ ಈ ಬಾರಿ ರೈತರು ಬೆಳೆದ ವಿವಿಧ ಆಹಾರ ಧಾನ್ಯಗಳನ್ನು ಬೆಳೆದಂತಹ ರೈತರಿಂದ ಭೂ ಮಾಲೀಕನ ಬಯೋಮೆಟ್ರಿಕ್ (ಬೆರಳಚ್ಚು) ರೈತರ ಜಮೀನಿನಲ್ಲಿ ದೃಢೀಕರಿಸಿ, ಸದರಿ ಸರ್ವೆ ನಂಬರ್ ಗಳಲ್ಲಿ ಜಿಪಿಎಸ್ ನಲ್ಲಿ ರೈತನ ಭಾವಚಿತ್ರ ಬರುವ ಹಾಗೆ ರೈತರಿಗೆ ಅನುಕೂಲವಾಗುವಂತೆ ಮಾಡಬೇಕು ಎಂಬುದು ರೈತ ಮುಖಂಡರ ಮನವಿ ಕೂಡ ಆಗಿದೆ.
ಇದರ ಬಗ್ಗೆ ಈಗಾಗಲೇ ರೈತ ಮುಖಂಡರಿಂದ ತಾಲೂಕು ಆಡಳಿತಕ್ಕೆ ದೂರು ಸಹ ನೀಡಿದ್ದು, ಅದರ ಪ್ರತಿ ನಮ್ಮ ಮಾಧ್ಯಮಕ್ಕೆ ದೊರೆತಿದೆ, ಒಂದಂತೂ ಸತ್ಯವಾಗಿ ಎದ್ದು ಕಾಣುತ್ತಿದೆ, ಮುಂದಿನ ದಿನಗಳಲ್ಲಿ ರೈತರಿಗೆ ತಾವು ಬೆಳೆದ ಆಹಾರ ಧಾನ್ಯಗಳ ಖರೀದಿಯಲ್ಲಿ ದಲ್ಲಾಳಿಗಳ ಹಾವಳಿ ಮತ್ತು ವರ್ತಕರು ಅತಿ ಕಡಿಮೆ ಬೆಲೆಗೆ ಖರೀದಿಸುವ ಮಾಹಿತಿ ಏನಾದರೂ ಸಿಕ್ಕಿದರೆ, ಮುಂದಿನ ದಿನಗಳಲ್ಲಿ ತಾಲೂಕು ಆಡಳಿತದ ವಿರುದ್ಧ ಮತ್ತು ಸರ್ಕಾರದ ವಿರುದ್ಧ, ರೈತರ ಗ್ರಾಮ ಸಭೆ ಕರೆದು, ರೈತರ ಉಳಿವಿಗಾಗಿ ದೊಡ್ಡಮಟ್ಟದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎನ್ನಬಹುದು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en