Janataa24 NEWS DESK
Turuvekere: ದಾಖಲೆ ಇರುವ ವ್ಯಕ್ತಿಗೆ ನಿವೇಶನದ ಖಾತೆ ಇಲ್ಲ, ಬೇರೊಬ್ಬರಿಗೆ ನಕಲಿ ದಾಖಲೆ ಸೃಷ್ಟಿಸಿ ಖಾತೆ.

ತುರುವೇಕೆರೆ: ಪಟ್ಟಣದ ಮೀನಾಕ್ಷಿಪುರ ಬಡಾವಣೆಯಲ್ಲಿ 1991 ರಲ್ಲಿ ಆಶ್ರಯ ಯೋಜನೆಯಡಿ ನೀಡಿದ ನಿವೇಶನಕ್ಕೆ ಖಾತೆ ಮಾಡದೆ ಬೇರೊಬ್ಬ ವ್ಯಕ್ತಿಗೆ ನಕಲಿ ದಾಖಲೆ ಪಡೆದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಖಾತೆ ಮಾಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಬ್ಜಲ್ ಅವರು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ನೇರ ಆರೋಪ ಮಾಡಿದ್ದಾರೆ.

ಇದೆ ವೇಳೆ ಮಾತನಾಡಿದ ಅವರು 1991ರಲ್ಲಿ ಆಶ್ರಯ ಯೋಜನೆ ಅಡಿ ಖಾಲಿ ನಿವೇಶನ ಹಂಚಿಕೆ ಮಾಡಿದ್ದು ಕ್ರಮ ಸಂಖ್ಯೆ, 1 ರಿಂದ 141ರವರೆಗೆ ಹಂಚಿಕೆಯಾಗಿರುವ ನಿವೇಶನದಲ್ಲಿ ನನ್ನ ತಾಯಿ ಷಾಹಿದ ಹೆಸರಿನಲ್ಲಿ ಇರುವ ನಿವೇಶನವನ್ನು ಖಾತೆ ಮಾಡಲು ಬೇಕಾದ ದಾಖಲೆಗಳನ್ನು ನೀಡಿದರು ಸಹ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಖಾತೆ ಮಾಡಿಕೊಡದೆ ನಮ್ಮನ್ನು ದಿನನಿತ್ಯ ಅಲೆದಾಡಿಸುತ್ತಿರುತ್ತಾರೆ.
ಜೊತೆಗೆ ದೇವಾ ನಾಯಕನಹಳ್ಳಿ ವಾಸಿಯಾದ ಮೋಹಿದೀನ್ ಅಲಿ ಎಂಬುವರಿಗೆ 45 ನೇ ನಂಬರಿನ ಖಾಲಿ ನಿವೇಶನವನ್ನು ನನ್ನ ತಾಯಿಯ ಹೆಸರಿನಲ್ಲಿರುವ ಖಾಲಿ ನಿವೇಶನದ ಚೆಕ್ಕುಬಂದಿಯನ್ನು ಹಾಕಿ ಖಾತೆ ಮಾಡಲು ಬೇಕಾದ ಮೂಲ ದಾಖಲೆಗಳನ್ನು ಪಡೆಯದೆ ಕೇವಲ ಪಡಿತರ ಚೀಟಿಯ ನಕಲು ಪ್ರತಿಯನ್ನು ಪಡೆದು ಖಾತೆ ಮಾಡಿಕೊಟ್ಟಿರುವುದು ನಮ್ಮ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿ ನಮಗೆ ಯಾವುದೇ ಮಾಹಿತಿಯನ್ನು ನೀಡದೆ, ನಮಗೂ ಖಾತೆ ಮಾಡಿಕೊಡದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಕ್ರಮ ವ್ಯಸಗುತ್ತಿದ್ದಾರೆ ಎಂದು ಮಾಧ್ಯಮದ ಮುಂದೆ ಅಬ್ಜಲ್ ಅವರು ಪಟ್ಟಣ ಪಂಚಾಯಿತಿ ವಿರುದ್ಧ ನೇರ ಆರೋಪ ಮಾಡಿದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.