Document

Turuvekere: ರಾಸಾಯನಿಕ ಆಹಾರ,ಕಣ್ಣಿನ ಆರೋಗ್ಯಕ್ಕೆ ಹಾನಿಕಾರ –ಡಾ.ನಾಗರಾಜ್.

JANATAA24 NEWS DESK 

 

Turuvekere: ರಾಸಾಯನಿಕ ಆಹಾರ,ಕಣ್ಣಿನ ಆರೋಗ್ಯಕ್ಕೆ ಹಾನಿಕಾರ –ಡಾ.ನಾಗರಾಜ್.

Turuvekere

ತುರುವೇಕೆರೆ: ರಾಸಾಯನಿಕ ಆಹಾರವೂ ಕಣ್ಣಿನ ಮತ್ತು ದೇಹದ ಆರೋಗ್ಯಕ್ಕೆ ಹಾನಿಕಾರಕ ಎಂದು ಖ್ಯಾತ ವೈದ್ಯರಾದ ಡಾ. ನಾಗರಾಜ್ ರವರು ಆರೋಗ್ಯದ ಬಗ್ಗೆ ಸಲಹೆ ನೀಡಿದರು.

 

ಶನಿವಾರ ತಾಲೂಕಿನ ಬಾಣಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲಯನ್ಸ್ ಕ್ಲಬ್, ಕಲ್ಪತರು ಲಯನ್ಸ್ ಚಾರಿಟೇಬಲ್ ಟ್ರಸ್ಟ್, ತಾಲೂಕು ಆರೋಗ್ಯ ಇಲಾಖೆ ತುರುವೇಕೆರೆ ಮತ್ತು ಜಿಲ್ಲಾ ಅಂಧತ್ವ ನಿವಾರಣ ಕೇಂದ್ರ ತುಮಕೂರು ಮತ್ತು ಲಯನ್ಸ್ ಸೂಪರ್ ಸ್ಪೆಷಾಲಿಟಿ ಹೈ ಹಾಸ್ಪಿಟಲ್ ಬೆಂಗಳೂರು ವತಿಯಿಂದ ದಿ ಶಾರದಮ್ಮ ನಾಗರಾಜು ರವರ ಸ್ಮರಣಾರ್ಥವಾಗಿ ಜಗದೀಶ್ ಪ್ರಾಯೋಜಕತ್ವದಲ್ಲಿ 2026-27 ನೇ ಸಾಲಿನ 2ನೇ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

ಆಧುನಿಕ ಪದ್ಧತಿಯ ಆಹಾರದಿಂದ ಮನುಷ್ಯನ ಆರೋಗ್ಯದ ಜೀವನಶೈಲಿ ಬದಲಾಗಿದೆ, ಬದಲಿಗೆ ಪ್ರಾಚೀನ ಕಾಲದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಮಾತ್ರ ಮುಂದೆ ಮನುಷ್ಯ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು ಸೊಪ್ಪು, ಮೊಳಕೆ ಕಾಳು, ಉತ್ತಮವಾದ ತರಕಾರಿ ಸಾವಯವ ಗೊಬ್ಬರದ ಆಹಾರಗಳನ್ನು ಸೇವಿಸಿ, ದೈನಂದಿನ ವ್ಯಾಯಾಮ, ಉತ್ತಮ ಸಂಗೀತ,ಹಾಗಾಗೇ ಕಣ್ಣು ಮತ್ತು ದೇಹದ ಆರೋಗ್ಯದ ಪರೀಕ್ಷೆಗಳನ್ನು ನಡೆಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.

 

ಬಾಣಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೀವ್ ಮಾತನಾಡಿ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಉತ್ತಮವಾದ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಲಯನ್ಸ್ ಕ್ಲಬ್ ಎಂಬ ಸಂಸ್ಥೆಯು ಸುಧೀರ್ಘ ವರ್ಷಗಳಿಂದ ಸಾಮಾಜಿಕ ಸೇವೆ ನಡೆಸುತ್ತಿದ್ದು ಸಂಸ್ಥೆಯ ಸೇವೆಯನ್ನು ಸ್ಮರಿಸಿದರು.

 

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ|ಸುನಿಲ್ ಬಾಬು ಟಿ.ಸಿ ಮಾತನಾಡಿ ಲಯನ್ಸ್ ಕ್ಲಬ್ ಸಂಸ್ಥೆಯು ಹತ್ತಾರು ವರ್ಷಗಳಿಂದ ಸಾಮಾಜಿಕವಾಗಿ ಹಲವಾರು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ನಿರಂತರವಾಗಿ ಸಕ್ರಿಯಗೊಂಡಿದ್ದು, ಲಯನ್ಸ್ ಕ್ಲಬ್ ನ ಸರ್ವ ಸದಸ್ಯರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸೇವಾ ಕಾರ್ಯ ಮಾಡುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು.

 

ಶಿಬಿರದ ಕಾರ್ಯಕ್ರಮದಲ್ಲಿ ಡಾ. ಷಡಾಕ್ಷರಿ ನೇತ್ರಾಧಿಕಾರಿ ಲ|| ಮಲ್ಲಿಕಾರ್ಜುನ ದುಂಡ ಡಿ. ಸಿ. ರೂರಲ್ ಐ ಸ್ಕ್ರೀನಿಂಗ್. ಲಯನ್ಸ್ ಕ್ಲಬ್ ಕಾರ್ಯದರ್ಶಿ ರವಿ. ಲಯನ್ಸ್ ಕ್ಲಬ್ ನ ಲ|| ರಾಜಣ್ಣ. ಲ|| ರಾಮಕೃಷ್ಣ. ಲ|| ಸಿ.ಜಿ.ನಾಗರಾಜು ಲ|| ಸಚಿನ್ ಮಾಯಸಂದ್ರ ಅಧ್ಯಕ್ಷರು ದೃಷ್ಟಿ ಸಂರಕ್ಷಣಾ ಸಮಿತಿ. ಪ್ರಾಥಮಿಕ ಆರೋಗ್ಯ ಕೇಂದ್ರದ ಯತೀಶ್ ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *