JANATAA24 NEWS DESK
Gubbi: ಜಾಗತಿಕತೆಗೆ ತಕ್ಕಂತೆ ಹಳ್ಳಿಯಲ್ಲಿ ಜಾಗತಿಕ ಶಿಕ್ಷಣ–ಡಾ.ನಾಗಭೂಷಣ್.

ಗುಬ್ಬಿ: ಸ್ವಾಂತಂತ್ರ್ಯ ಬಂದ ನಂತರ ಬಡ ದೇಶವಾಗಿದ್ದ ನಮ್ಮ ದೇಶಕ್ಕೆ ಶಿಕ್ಷಣ ಅಗತ್ಯ ಅರಿತು ಆರು ವರ್ಷದ ನಂತರ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಮಾಡಲಾಗಿ ಈಗ ಜಾಗತೀಕ ಜಗತ್ತಿಗೆ ತಕ್ಕಂತೆ ಹಳ್ಳಿಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಇಂದು ಎಲ್ ಕೆಜಿ ಹಾಗೂ ಯುಕೆಜಿ ಆರಂಭಿಸಿ ಶಾಲಾ ದಾಖಲಾತಿ ಹೆಚ್ಚಳ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸುಗ್ಗನ ಪಾಳ್ಯ ಶಾಲೆಯನ್ನು ಮಾದರಿ ಮಾಡಲು ದತ್ತು ಪಡೆದು ಇಲ್ಲಿನ ಮಕ್ಕಳಿಗೆ ಇಂಗ್ಲೀಷ್ ಭಾಷೆ ಕಲಿಸಲಾಗುತ್ತಿದೆ ಎಂದು ಚಾಲುಕ್ಯ ಆಸ್ಪತ್ರೆ ಸಿಇಓ ಡಾ.ನಾಗಭೂಷಣ್ ತಿಳಿಸಿದರು.
ತಾಲ್ಲೂಕಿನ ಕಸಬ ಹೋಬಳಿ ಸುಗ್ಗನಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ, ಅಕ್ಷರಾಭ್ಯಾಸ, ಕ್ರೀಡಾ ಸಾಮಾಗ್ರಿ ಹಾಗೂ ಪೀಠೋಪಕರಣ ವಿತರಣೆ ಮತ್ತು ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಉಳಿಸುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ನೀಡಲು ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲು ಸಿದ್ಧವಿದೆ. ಈ ನಿಟ್ಟಿನಲ್ಲಿ ಹಳ್ಳಿ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ. ಎಲ್ ಕೆಜಿ ಮತ್ತು ಯುಕೆಜಿ ಶಿಕ್ಷಣ ಉನ್ನತ ಶಿಕ್ಷಣಕ್ಕೆ ದಾರಿಯಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ಭಾಷೆ ಅವಶ್ಯವಿದೆ. ಈ ಹಿಂದೆ ಶಿಶುವಿಹಾರ ಮೂಲಕ ಅಂಗನವಾಡಿ ಆರಂಭವಾಗಿತ್ತು. ಆಂಗ್ಲ ಮಾಧ್ಯಮ ಬಗ್ಗೆ ಅರಿತ ಸರ್ಕಾರ ಕಾನ್ವೆಂಟ್ ಮಾದರಿ ಶಿಕ್ಷಣ ಹಳ್ಳಿಯಲ್ಲಿ ಒದಗಿಸಿ ಸಮಸ್ಯೆ ಮೂಲ ಹುಡುಕಿ ಪರಿಹಾರ ಕಂಡು ಹಿಡಿಯಲು ಸ್ಥಳೀಯ ಸಮುದಾಯದ ಸಹಕಾರ ಅಗತ್ಯವಿದೆ. ನನ್ನ ತಂದೆ ಓದಿದ ಸುಗ್ಗನ ಪಾಳ್ಯ ಶಾಲೆಯನ್ನು ದತ್ತು ಪಡೆದು ಅಭಿವೃದ್ದಿ ಮಾಡುತ್ತಿದ್ದೇವೆ. ಹೀಗೆ ತಾಲ್ಲೂಕಿನ ಎಲ್ಲಾ ಶಾಲೆಗೆ ಅಲ್ಲಿನ ಹಿರಿಯರು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಗೊಲ್ಲಹಳ್ಳಿ ಮಠದ ಶ್ರೀ ವಿದ್ಯಾವಿಭವ ಶಂಕರ ಸ್ವಾಮೀಜಿ ಆಗಮಿಸಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಮೂಲಕ ಶಾಲೆಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಆಯ್ಕೆಯಾದ ಒಂಬತ್ತು ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ನಾಗರಾಜು ಉಪಾಧ್ಯಕ್ಷೆ ನೇತ್ರ, ಸದಸ್ಯ ದೇವಾನಂದ್, ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ, ಲಕ್ಷ್ಮಣ್, ಶಿಕ್ಷಕರಾದ ರುದ್ರೇಶ್, ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು .
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/operation-sindor-pok-9-terrorist/