Document

Gubbi: ದ ಸಂ ಸ ನೂತನ ತಾಲ್ಲೂಕು ಸಂಚಾಲಕರಾಗಿ ಕಡಬ ಶಂಕರ್ ಪುನರ್ ಆಯ್ಕೆ.

JANATAA24 NEWS DESK 

 

 

Gubbi: ದ ಸಂ ಸ ನೂತನ ತಾಲ್ಲೂಕು ಸಂಚಾಲಕರಾಗಿ ಕಡಬ ಶಂಕರ್ ಪುನರ್ ಆಯ್ಕೆ.
Gubbi

ಗುಬ್ಬಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಗುಬ್ಬಿ ತಾಲೂಕು ಸಂಚಲಕರನ್ನಾಗಿ ಕಡಬ ಶಂಕರವರನ್ನು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಪುನರ್ ಆಯ್ಕೆ ಮಾಡಲಾಯಿತು.

 

ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಕೇಬಲ್ ರಘು ಅವರಹಾಗೂ ಹೋಬಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸರ್ವ ಸದಸ್ಯರ ಸಮ್ಮತಿಯ ಮೇರೆಗೆ ಕಡಬ ಶಂಕರ್ ಅವರ ಕಾರ್ಯ ವೈಕರಿಯನ್ನು ಮೆಚ್ಚಿ ಮತ್ತೊಮ್ಮೆ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.

 

ಜಿಲ್ಲಾ ಸಂಘಟನಾ ಸಂಚಾಲಕ ಕೇಬಲ್ ರಘು ಮಾಧ್ಯಮ ದವರೊಂದಿಗೆ ಮಾತನಾಡಿ ಜಿಲ್ಲಾದ್ಯಂತ ಪ್ರತಿ ತಾಲೂಕು ಘಟಕಗಳ ಪುನರ್ ರಚನೆ ಮಾಡಲಾಗುತ್ತಿದೆ ಈ ನಿಟ್ಟಿನಲ್ಲಿ ಇಂದು ಗುಬ್ಬಿ ಪ್ರವಾಸಿ ಮಂದಿರದಲ್ಲಿ ದ ಸಂ ಸ ತಾಲೂಕು ಸಂಚಾಲಕರನ್ನಾಗಿ ಕಡಬ ಶಂಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

 

ದ ಸಂ ಸ ನೂತನ ತಾಲ್ಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ ನಾನು ದಲಿತರ, ಶೋಷಿತರ ಪರ ಧ್ವನಿಯಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ನನ್ನ ಕಾರ್ಯವೈಖರಿಯನ್ನು ಮೆಚ್ಚಿ ಮತ್ತೊಮ್ಮೆ ನನ್ನನ್ನು ಡಿಎಸ್ಎಸ್ ತಾಲೂಕು ಸಂಚಲಕರನ್ನಾಗಿ ಪುನರಾಯ್ಕೆ ಮಾಡಿದ್ದಾರೆ. ಸಂಘವನ್ನು ಹೆಚ್ಚಿನ ತಳಮಟ್ಟದಲ್ಲಿ ಸಂಘಟಿಸಿ ಶೋಷಿತರ ಸಮಸ್ಯೆಗಳಿಗೆ ಧ್ವನಿ ಆಗುತ್ತೇನೆ ಎಂದರು.

 

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜಿ ಎಚ್ ಜಗನ್ನಾಥ್ ಮಾತನಾಡಿ ಹೋಬಳಿ ಮಟ್ಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಳಮಟ್ಟದಲ್ಲಿ ಸಂಘಟನೆಯನ್ನು ಮಾಡಬೇಕು ಆಗ ದೀನ ದಲಿತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಬಹುದು ಎಂದರು.

 

ಈ ಸಂದರ್ಭದಲ್ಲಿ ಬುದ್ಧ ಬಸವ ಅಂಬೇಡ್ಕರ್ ಸಮಿತಿಯ ರಾಜ್ಯಾಧ್ಯಕ್ಷ, ಮಾದಲಪುರ ಲೋಕೇಶ್, ಆದಿ ಜಾಂಬವ ಯುವ ಬ್ರಿಗೇಡ್ ನ ತಾಲ್ಲೂಕು ಅಧ್ಯಕ್ಷ ಗುಬ್ಬಿ ಬಸವರಾಜು, ದಲಿತ ಮುಖಂಡರಾದ ಕುಂದರನಹಳ್ಳಿ ನಟರಾಜು, ಅದಲಗೆರೆ ಈಶ್ವರಯ್ಯ, ಕಲ್ಲೂರು ರವಿಕುಮಾರ್, ದಲಿತ್ ಗಂಗಣ್ಣ, ನಾಗಭೂಷಣ್, ಶ್ರೀಧರ್, ಸೋಮಶೇಖರ್, ಶಿವಸ್ವಾಮಿ, ಕೋಟೆ ಕಲ್ಲೇಶ್, ಯೋಗೇಶ್, ಮಹೇಶ್, ರಾಮು, ಪಾತಾರಾಜು, ಸಲೀಂ ಪಾಷಾ, ಲಕ್ಷ್ಮಯ್ಯ ಸೇರಿದಂತೆ ಇತರರು ಹಾಜರಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *