Janataa24 NEWS DESK
Turuvekere: ಜಾತಿ ವಿಷ ಬೀಜವನ್ನ ಬಿತ್ತಬೇಡಿ ಟ್ಯಾಕ್ಸ್ ರಾಮಯ್ಯನವರೇ–ನಿಖಿಲ್ ಕುಮಾರಸ್ವಾಮಿ.

ತುರುವೇಕೆರೆ : ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ, ಮೈತ್ರಿ ಕೂಟ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಇವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು, ಮೊದಲಿಗೆ ನೂರಾರು ಕಾರ್ಯಕರ್ತರಿಂದ ಮೈತ್ರಿಕೂಟದ ಪ್ರಮುಖ ನಾಯಕರು ತೆರೆದ ವಾಹನದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಧಿಕ್ಕಾರ ಕೂಗುತ್ತಾ ಪಟ್ಟಣದ ದಬ್ಬೇಘಟ್ಟ ರಸ್ತೆಯಿಂದ ಅಂಬೇಡ್ಕರ್ ರಸ್ತೆ ಗೆ ಆಗಮಿಸಿ ಬಿರ್ಲಾ ಕಾರ್ನರ್ ಮಾರ್ಗವಾಗಿ ಬಾಣಸಂದ್ರ ಸರ್ಕಲ್ ತಲುಪಿ ವೇದಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ ರಾಜ್ಯದಲ್ಲಿ ಜಾತಿ ವಿಷ ಬೀಜವನ್ನ ಬಿತ್ತಬೇಡಿ.
ನಾವೆಲ್ಲಾ ಕಾವೇರಿ ತಾಯಿಯ ಮಕ್ಕಳು, ನಾವೆಲ್ಲಾ ಒಂದೇ ಎಂದು ಹೇಳುತ್ತಾ ಕಾಂಗ್ರೆಸ್ ನಲ್ಲಿ 136 ಶಾಸಕರು ಇದ್ದರು ಆತಂಕ ಕಾಡುತ್ತಿದೆ ಇನ್ನೂ 3-4 ವರ್ಷಗಳಲ್ಲಿ ರಾಜ್ಯದಲ್ಲಿ ಆರ್ಥಿಕ ಸುನಾಮಿ ಹೇಳಲಿದೆ ಭ್ರಷ್ಟ ಸರ್ಕಾರದ ವಿರುದ್ಧ ತುರುವೇಕೆರೆಯಿಂದ ಪ್ರಾರಂಭವಾದ ಎನ್ ಡಿ ಎ ಹೋರಾಟ ನಿರಂತರವಾಗಿ ರಾಜ್ಯ ವ್ಯಾಪ್ತಿ ನಡೆಯಲಿದೆ ನಿಮ್ಮ ಕುರ್ಚಿ ಉಳಿಸಿಕೊಳ್ಳೋಕೆ ಜಾತಿ ರಾಜಕೀಯ ಮಾಡಬೇಡಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿ,
ಈ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಿನಿಂದಲೂ ಕರ್ನಾಟಕವನ್ನು ಸಾಲದ ಹೊರೆಯಲ್ಲಿ ಮುಳುಗುವಂತೆ ಮಾಡಿದೆ ಕೇವಲ ಎರಡೇ ವರ್ಷದಲ್ಲಿ ಐದು ಗ್ಯಾರಂಟಿಗಳ ಹೆಸರಿನಲ್ಲಿ ಎರಡು ಲಕ್ಷ ಕೋಟಿ ಸಾಲ ಮಾಡಿದ್ದಾರೆ 16 ಬಜೆಟ್ ಮಂಡಿಸುತ್ತೇನೆ ಎಂದು ಬೆನ್ನು ತೊಡೆ ತಟ್ಟಿಕೊಂಡು ಬೀಗುತ್ತಿದ್ದ ಸಿದ್ದರಾಮಯ್ಯನವರೇ ಬೂಟಾಟಿಕೀಯ ಡೈಲಾಗ್ ಗಳಿಂದ ರಾಜ್ಯದ ಜನತೆಗೆ ಹೊಟ್ಟೆ ತುಂಬಲ್ಲ ನೀವೇ ಬೇಕಾ 2 ಲಕ್ಷ ಕೋಟಿ ಸಾಲ ಮಾಡಿ 4 ಲಕ್ಷ ಕೋಟಿ ಬಜೆಟ್ ನಲ್ಲಿ ಮಂಡಿಸುವುದಕ್ಕೆ ನೀವೇ ಬೇಕಾ ಎಂದರು, ನಂತರ ಸಭೆಯನ್ನ ಉದ್ದೇಶಿಸಿ ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ, ಜಾತಿ ಗಣತಿ ಮಾಡುವ ಅಧಿಕಾರ ಸಂವಿಧಾನದಡಿ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಆರ್ಥಿಕ, ಸಾಮಾಜಿಕ ಶೈಕ್ಷಣಿಕವಾಗಿ ಸಮೀಕ್ಷೆ ಮಾಡಲು ಮಾತ್ರ ರಾಜ್ಯ ಸರ್ಕಾರಕ್ಕೆ ಅವಕಾಶವಿರುವುದು ಆದರೆ ಜಾತಿ ಎಂಬ ವಿಷ ಬೀಜವನ್ನ ಬಿತ್ತಬೇಡಿ.
ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಕೇವಲ ಎರಡು ವರ್ಷದಲ್ಲಿ ಭ್ರಷ್ಟಾಚಾರ, ದುರಾಡಳಿತ ವೈಫಲ್ಯಗಳೇ ಹೆಚ್ಚಾಗಿ ಕಾಣುತ್ತಿದೆ. ಗಾಳಿ ಒಂದನ್ನ ಹೊರತುಪಡಿಸಿ ಎಲ್ಲದಕ್ಕೂ ಬೆಲೆ ಏರಿಕೆ ಮಾಡಿದ್ದಾರೆ ರೈತರಿಗೆ ಸಿಗಬೇಕಾದ ಹಾಲಿನ ಪ್ರೋತ್ಸಾಹ ಧನವನ್ನ 600 ಕೋಟಿಗೂ ಹೆಚ್ಚು ಹಣವನ್ನ ಇನ್ನು ಬಿಡುಗಡೆ ಮಾಡಿಲ್ಲ. ಕೊಬ್ಬರಿಗೆ ಕ್ವಿಂಟಾಲ್ ಗೆ 18 ಸಾವಿರ ಹಣ ನಿಗದಿಯಾಗಲು ಕುಮಾರಣ್ಣ ಅವರು ಪ್ರಧಾನಿ ಮೋದಿ ಜೀ, ಅಮಿತ್ ಶಾ , ಕೇಂದ್ರ ಕೃಷಿ ಸಚಿವರನ್ನ ಭೇಟಿ ಮಾಡಿ ಕೊಬ್ಬರಿಗೆ ನಿಗದಿತ ದರ ಹೆಚ್ಚಳ ಮಾಡಿಸಿದ್ದಾರೆ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಂತ ಇವತ್ತು ರಾಜ್ಯದ ಜನ ಹೇಳ್ತಿದ್ದಾರೆ. ಐದು ಗ್ಯಾರಂಟಿಗಳನ್ನ ಸಮರ್ಪಕವಾಗಿ ಕೊಡುವುದಕ್ಕೆ ಆಗ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನ 25 ಸಾವಿರ ವೊಟ್ ನಲ್ಲಿ ಸೋತಿದ್ದಾರೆ ಅಂತ ಹೇಳಿದ್ರು. ಚುನಾವಣೆ ವೇಳೆ ಏನು ಮಾಡಿದ್ರು, ಎಷ್ಟು ಹುನ್ನಾರ ಮಾಡಿದ್ರು ಅಂತ ನಾಡಿನ ಜನಕ್ಕೆ ಗೊತ್ತಿದೆ ಎಂದರು, ಇದೆ ವೇಳೆ ಮಾಜಿ ಶಾಸಕ ಮಸಾಲ ಜಯರಾಮ್ ಮಾತನಾಡಿ
ಚುನಾವಣಾ ಗೆಲುವಿಗಾಗಿ ಜನರನ್ನ ಯಾಮಾರಿಸಿಕೊಂಡು ಹೋಗ್ತಿದ್ದೀರಾ. ಇದು ಎಷ್ಟು ದಿನ ನಡೆಯುತ್ತೆ. ಜಿಲ್ಲಾ ಪಂಚಾಯತ್, ತಾಲ್ಲೂಕ್ ಪಂಚಾಯತ್ ಚುನಾವಣೆಯನ್ನ ಇನ್ನು ಯಾಕೆ ಘೋಷಣೆ ಮಾಡಿಲ್ಲ. ನೀವು ಕೊಟ್ಟಿರುವ ಯೋಜನೆಗೆ ವಿಶ್ವಾಸವಿಲ್ಲ ಅದಕ್ಕೆ ಇಲ್ಲಿಯ ವರೆಗೂ ಯಾಕೆ ಘೋಷಣೆ ಮಾಡಿಲ್ಲ. ನಿಮಗೆ ಧೈರ್ಯವಿದ್ದರೆ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಇಡೀ ರಾಜ್ಯದ ಜನ ಕಾಯ್ತಿದ್ದಾರೆ ಚುನಾವಣೆ ನಡೆಸಿ ಎಂದು ಒತ್ತಾಯಿಸಿ ರಾಜ್ಯ ಸರ್ಕಾರ ಜಾತಿ ಗಣತಿ ಮಾಡಿ ಜಾತಿ ವಿಷ ಬಿಜ ಬಿತ್ತುತ್ತಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಕೂಟದ ಪ್ರಮುಖ ಮುಖಂಡರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.