Document

Turuvekere: ADGP ಚಂದ್ರಶೇಖರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ  ಎಂ ಟಿ ಕೃಷ್ಣಪ್ಪ ನೇರ ಆರೋಪ.

Janataa24 NEWS DESK 

 

Turuvekere: ADGP ಚಂದ್ರಶೇಖರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ  ಎಂ ಟಿ ಕೃಷ್ಣಪ್ಪ ನೇರ ಆರೋಪ.
Turuvekere: ADGP ಚಂದ್ರಶೇಖರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ  ಎಂ ಟಿ ಕೃಷ್ಣಪ್ಪ ನೇರ ಆರೋಪ.

 

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಎಂ ಟಿ ಕೃಷ್ಣಪ್ಪ ಪತ್ರಿಕಾ ಮಾಧ್ಯಮ ಗೋಷ್ಠಿ ನಡೆಸಿದರು ಇದೆ ವೇಳೆ ಮಾತನಾಡಿದ ಅವರು ಎಡಿಜಿಪಿ ಚಂದ್ರಶೇಖರ್ ಒಬ್ಬ ಕೇಂದ್ರ ಸಚಿವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ ಒಬ್ಬ ಕ್ಯಾಬಿನೆಟ್ ಮಂತ್ರಿಯನ್ನು ಹಂದಿಗೆ ಹೋಲಿಸಿ ಮಾತನಾಡಿರುವುದನ್ನು ನಾನು ಖಂಡಿಸುತ್ತೇನೆ.

 

ಒಬ್ಬ ಪಂಚಾಯಿತಿ ಸದಸ್ಯರು ಕೂಡ ಈ ರೀತಿ ಮಾತನಾಡಲ್ಲ ಒಬ್ಬ ಬ್ರಷ್ಟ ಅಧಿಕಾರಿ ಚಂದ್ರಶೇಖರ್ ಈತ ರಾಜಕಾಲವೆಯನ್ನೇ ಒತ್ತಿ 33 ಅಂತಸ್ತಿನ ಅಪಾರ್ಟ್ಮೆಂಟ್ ಒಂದನ್ನು ನಿರ್ಮಿಸುತ್ತಿರುವ ಇಂತಹ ಭ್ರಷ್ಟ ಅಧಿಕಾರಿ ಒಂದು ಎಕರೆ ವಿಲ್ಲಾದಲ್ಲಿ ವಾಸ ಮಾಡುತ್ತಿದ್ದು ಈತನಿಗೆ ತಿಂಗಳಿಗೆ ವಿಲ್ಲಾವನ್ನು ಮೈನ್ಟೈನ್ ಮಾಡಲು 5 ಲಕ್ಷ ಆಗುತ್ತೆ,ಈತನಿಗೆ ಸಂಬಳ ಎಷ್ಟಿದೆ, ಇಂತಹ ಭ್ರಷ್ಟ ಅಧಿಕಾರಿಯನ್ನ ಲೋಕಾಯುಕ್ತ ಎಡಿಜಿಪಿ ಮಾಡಿರುವುದು ಈ ಸರ್ಕಾರದ ಭ್ರಷ್ಟತನಕ್ಕೆ ಕೈಗನ್ನಡಿಯಾಗಿದೆ ಜೊತೆಗೆ ಬೇಲಿಯೇ ಎದ್ದು ಹೊಲಮೇಯ್ದ ಆಗಿದೆ ಎಂದರು.

 

ಮುಂದುವರೆದು ಮಾತನಾಡಿದ ಅವರು ಇಂತಹ ಭ್ರಷ್ಟ ಅಧಿಕಾರಿ ಪರವಾಗಿ ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿರುವುದು ಅತ್ಯಂತ ಖಂಡನೀಯ ಈ ರೀತಿ ಮಾತನಾಡುತ್ತಿರುವುದಕ್ಕೆ ಸರಿಯಾಗಿ ಸಿದ್ದರಾಮಯ್ಯ ಕಾನೂನು ತಿಳಿದುಕೊಂಡಿಲ್ಲ ಅದಕ್ಕೆ ಭ್ರಷ್ಟ ಅಧಿಕಾರಿಯೇ ಸಾಕ್ಷಿ, ಜೊತೆಗೆ ಸಿದ್ದರಾಮಯ್ಯ ಎಂಥ ಭ್ರಷ್ಟ ಮುಖ್ಯಮಂತ್ರಿ ಎಂದರೆ ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತ ಎಂಬುದನ್ನೇ ರದ್ದು ಮಾಡಿ ಎಸಿಬಿ ಎಂಬುದನ್ನ ಅವರ ಸ್ವಂತಕ್ಕೆ ಮಾಡಿಕೊಂಡಿದ್ದು, ಸುಮಾರು 1650 ಎಕರೆ ಡಿ ನೋಟಿಫಿಕೇಶನ್ ಮಾಡಿದ್ದಾರೆ ಎಷ್ಟು ಸಾವಿರ ಕೋಟಿ ಲೂಟಿ ಹೊಡೆದಿರಬಹುದು ಎಂಬುದು ಊಹೆ ಮಾಡಲು ಸಾಧ್ಯವಿಲ್ಲ ಒಟ್ಟಾರೆ ಹೇಳಬೇಕೆಂದರೆ ಈ ಸರ್ಕಾರ ಬಂದಾಗಿನಿಂದಲೂ ರಾಜ್ಯ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *