Document

Turuvekere: 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡಿ ಇಓ ಶಿವರಾಜಯ್ಯ ಕರೆ

Janataa24 NEWS DESK

Turuvekere: 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡಿ ಇಓ ಶಿವರಾಜಯ್ಯ ಕರೆ

Janataa Turuvekere

ತುರುವೇಕೆರೆ: 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಶೇ. 100 ಮತದಾನ ಮಾಡುವಂತೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ ಕರೆ ನೀಡಿದರು.

ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ಮತದಾನದ ಜಾಗೃತಿ ಕಾರ್ಯಕ್ರಮಕ್ಕೆ, ಸ್ವೀಪ್ ಸಮಿತಿ ಅಧ್ಯಕ್ಷರಾದ ಶಿವರಾಜಯ್ಯ (Shivarajaiah)ರವರು ಚಾಲನೆ ನೀಡಿ ಮಾತನಾಡಿದ ಅವರು ಸಂವಿಧಾನತ್ಮಕವಾಗಿ ಪ್ರಜೆಗಳಿಗೆ ಸಿಕ್ಕಿರುವ ಮತದಾನದ ಹಕ್ಕನ್ನು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸುವಂತೆ ಜನತೆಗೆ ಮನವಿ ಮಾಡಿದರು.

janataa 24556

ಮುಂದುವರೆದು ಮಾತನಾಡಿದ ಅವರು, ನಾಗರೀಕರೆಲ್ಲರು ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದರು. ಸಾರ್ವಜನಿಕರು ಎಲ್ಲರು ಯಾವುದೇ ಆಸೆ ಅಮಿಷಗಳಿಗೆ ಬಲಿಯಾಗದೇ ನಿರ್ಭಯದಿಂದ ಮತ ಚಲಾಯಿಸಲು ಮನವಿ ಮಾಡಿದರು.

ನಂತರ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಫ್ಲೇ ಕಾರ್ಡ್ ಜಿಂಗಲ್ಸ್ ಮೂಲಕ ಮತದಾನ ಜಾಗೃತಿ ಜಾಥ ಮಾಡಿ, ಮತದಾನದ ಬಗ್ಗೆ ಅರಿವು ಮೂಡಿಸುವ ಘೋಷಣೆಗಳು ಕೂಗಿ ಮತದಾನ ಜಾಗೃತಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.

ಈ ಸಂಧರ್ಭದಲ್ಲಿ ತಾಲ್ಲೂಕು ಪಂಚಾಯತಿ ಅಧಿಕಾರಿ ಜಯರಾಮ್, BEO ಸೋಮಶೇಖರ್ , ಮುಖ್ಯ ಆಡಳಿತಾಧಿಕಾರಿ ಶ್ರೀನಾಥ್ ಬಾಬು,CDPO ಲೋಕೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, NRLM ಹಾಗೂ ಗ್ರಾಪಂ ಸಿಬ್ಬಂದಿಗಳು ಇದ್ದರು.

ವರದಿ: ಮಂಜುನಾಥ್ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

HDK: ಎನ್ ಡಿ ಎ ಜೊತೆಗಿನ ಜೆಡಿಎಸ್ ಮೈತ್ರಿನಲ್ಲಿ ಅಪಸ್ವರ ಕುಮಾರಸ್ವಾಮಿ ಮುನಿಸು.

Document

Leave a Reply

Your email address will not be published. Required fields are marked *