<h2>Turuvekere: 5 ಗ್ಯಾರಂಟಿ ಯೋಜನೆಯ ಹಣ ಕಾಂಗ್ರೆಸ್ ಕಾರ್ಯಕರ್ತರಿಗೆ–ಶಾಸಕ ಎಂ ಟಿ ಕೃಷ್ಣಪ್ಪ ನೇರ ಆರೋಪ.

ತುರುವೇಕೆರೆ: ರಾಜ್ಯ ಸರ್ಕಾರದ 5 ಗ್ಯಾರೆಂಟಿಗಳಿಗೆ ಮೀಸಲಿಟ್ಟ 56 ಸಾವಿರ ಕೋಟಿ ಹಣವನ್ನು ರಾಜ್ಯ ಸರ್ಕಾರ ವೆಚ್ಚ ಮಾಡುತ್ತಿದೆ, ಆದರೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳವಾಗಿ ನೀಡಲಾಗುತ್ತಿದೆ ಎಂದು ನೇರವಾಗಿ ಆರೋಪಿಸಿದರು, ಮುಂದುವರೆದು ಮಾತನಾಡಿದ ಅವರು ಬಡವರ ಹಣವನ್ನು ಈ ರೀತಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳ ನೀಡುತ್ತಿರುವುದು ಕಾನೂನು ಬಾಹಿರವಾಗಿದೆ ಈ ಸರ್ಕಾರ ಮನಸೋ ಇಚ್ಛೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಡುತ್ತಿದ್ದಾರೆ, ಹಾಗಾದರೆ ರಿಕ್ರೂಟ್ಮೆಂಟ್ ಯಾಕೆ ಬೇಕು ಸರ್ಕಾರದ ದುಡ್ಡನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಯಾಕೆ ಕೊಡಬೇಕು ನಮ್ಮಗಳ ದುಡ್ಡನ್ನು ಯಾಕೆ ಕಾರ್ಯಕರ್ತರಿಗೆ ಕೊಡಬೇಕು ಈ ರೀತಿ ಮಾಡುತ್ತಿರುವುದು ಈ ಪ್ರಕರಣ ಈ ಡಿ ಮತ್ತು ಸಿ ಬಿ ಐ ಗೆ ಅಟ್ರಾಕ್ಟ್ ಆಗುತ್ತದೆ, ಈ ಸಿದ್ದರಾಮಯ್ಯನ ಸರ್ಕಾರವನ್ನು ನಾನು ಖಂಡಿಸುತ್ತೇನೆ ಮತ್ತು ಕೆ ಡಿ ಪಿ ಮತ್ತು ವಿಧಾನಸೌಧದಲ್ಲಿ ಈ ವಿಚಾರವನ್ನು ಪ್ರಸ್ಥಾಪಿಸುತ್ತೇನೆ, ನಾನೇ ಸ್ನೇಹಮಯ ಕೃಷ್ಣ ಅವರಿಗೆ ಹೇಳುತ್ತೇನೆ ಸಿಬಿಐ ಮತ್ತು ಈಡಿ ಗೆ ಹಾಕಪ್ಪ ಎಂದು, ನಮ್ಮ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತನಾದ ಹಾಗೂ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷನಾಗಿರುವ ಪ್ರಸನ್ನ ಅನ್ನುವವರಿಗೆ ಗ್ಯಾರಂಟಿ ಯೋಜನೆಯ ಹಣವನ್ನು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದುವರೆದ ಮಾತನಾಡಿ ರಾಜ್ಯದಲ್ಲಿ ಮೈಕ್ರೋಫೈನಸ್ ಗಳ ಹಾವಳಿಯಿಂದ ಅನೇಕ ಕುಟುಂಬಗಳು ತಮ್ಮ ತಮ್ಮ ಗ್ರಾಮವನ್ನೇ ತ್ಯಜಿಸಿ ಅನೇಕರು ಸಾವಿಗೆ ಶರಣಾಗಿದ್ದು ಈ ಸಂಬಂಧ ನಮ್ಮ ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಜೊತೆಗೆ ಮೈಕ್ರೋ ಫೈನಾನ್ಸ್ ಗಳು ಸಾಲ ವಸೂಲಾತಿ ನೆಪದಲ್ಲಿ ನಮ್ಮ ತಾಲೂಕಿನಲ್ಲಿ ಏನಾದರೂ ರೈತಾಪಿ ವರ್ಗ ಮತ್ತು ಗ್ರಾಮಾಂತರ ಭಾಗದ ಜನತೆಗೆ ತೊಂದರೆ ಕೊಟ್ಟರೆ ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಈ ಕೂಡಲೇ ಪೊಲೀಸ್ ಇಲಾಖೆಗೆ ಗ್ರಾಮಾಂತರ ಭಾಗದ ನಮ್ಮ ಜನತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೆ ಆ ಕೂಡಲೇ ಪ್ರಕರಣವನ್ನು ದಾಖಲಿಸಿಕೊಂಡು ಸಂಬಂಧಪಟ್ಟ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನಾನು ಪೊಲೀಸ್ ಇಲಾಖೆಗೆ ಸೂಚಿಸುತ್ತೇನೆ ಎಂದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.