Document

Turuvekere: ರಸ್ತೆ ಅಪಘಾತದಲ್ಲಿ 38 ವರ್ಷದ ಸುರೇಶ್ ಎಂಬ ವ್ಯಕ್ತಿ ಸಾ**.

Janataa24 NEWS DESK 

 

Turuvekere: ರಸ್ತೆ ಅಪಘಾತದಲ್ಲಿ 38 ವರ್ಷದ ಸುರೇಶ್ ಎಂಬ ವ್ಯಕ್ತಿ ಸಾ**.
Turuvekere: ರಸ್ತೆ ಅಪಘಾತದಲ್ಲಿ 38 ವರ್ಷದ ಸುರೇಶ್ ಎಂಬ ವ್ಯಕ್ತಿ ಸಾ**.
ತುರುವೇಕೆರೆ: ತಾಲೂಕಿನ ಬಾಣಸಂದ್ರ ರಸ್ತೆಯಲ್ಲಿರುವ ತಾವರೆಕೆರೆ ಗ್ರಾಮದ ಬಳಿ ತಾವರೆಕೆರೆ ಬಡಾವಣೆ ವಾಸಿಯಾದ ಸುರೇಶ್ 38 ವರ್ಷದ ವ್ಯಕ್ತಿ ಓರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಾವರೆಕೆರೆ ಗ್ರಾಮದಲ್ಲಿರುವ ತಾವರೆಕೆರೆ ಗ್ರಾಮ ಬಡಾವಣೆ ವಾಸಿಯಾದ 38 ವರ್ಷದ ಸುರೇಶ್ ಎಂಬ ವ್ಯಕ್ತಿ ಗಾರೆ ಕೆಲಸ ಮಾಡುತ್ತಿದ್ದು ಪ್ರತಿನಿತ್ಯದಂತೆ ಮಂಗಳವಾರವು ಸಹ ಕೆಲಸಕ್ಕೆ ತೆರಳಿ ಸಂಜೆ ವೇಳೆಗೆ ಮನೆಗೆ ವಾಪಸ್ ಆಗಿದ್ದಾನೆ ಮಂಗಳವಾರ ರಾತ್ರಿ 8 ರ ಸಮಯದಲ್ಲಿ ಮೃತ ಸುರೇಶ್ ಮನೆಯಿಂದ ಹೊರಗೆ ಹೋಗಿದ್ದು ಆ ಸಮಯದಲ್ಲಿ ಮನೆಯಲ್ಲಿ ಯಾರೂ ಸಹ ಇರಲಿಲ್ಲ ಜೊತೆಗೆ ಮೃತ ಸುರೇಶ್ ಅವರ ಪತ್ನಿ ಯಶೋದಮ್ಮ ಎಂಬುವರು ಈಗಾಗಲೇ ಅಂಗವಿಕಲೆ ಕೂಡ ಆಗಿದ್ದು,

ಒಂದು ತಿಂಗಳ ಹಿಂದೆ ಅಷ್ಟೇ ಗರ್ಭಕೋಶದ ಚಿಕಿತ್ಸೆ ಪಡೆದು ತನ್ನ ತವರು ಮನೆಯಲ್ಲಿ 16 ವರ್ಷದ ಮಗಳೊಂದಿಗೆ ಉಳಿದುಕೊಂಡಿದ್ದು ಮನೆಯಲ್ಲಿ ಯಾರು ಇರಲಿಲ್ಲ ಕೂಲಿ ಕೆಲಸಕ್ಕೆ ತೆರಳಿ ಮನೆಯಲ್ಲಿ ಇರುತ್ತಿದ್ದರು ಎಂಬುದು ಸ್ಥಳೀಯರಿಂದ ತಿಳಿದು ಬಂದಿದೆ, ಒಟ್ಟಾರೆ ಮೃತ ಸುರೇಶ್ ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ, ಈ ಅಪಘಾತ ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಿಗ್ಗೆ ಯಾವ ಸಮಯದಲ್ಲಿ ನಡೆದಿದೆ ಎಂಬುದು ಇನ್ನು ತಿಳಿದು ಬಂದಿಲ್ಲ ಒಟ್ಟಾರೆ ಈ ಅಪಘಾತ ಬಹುಶಹ ನಾಲ್ಕು ಚಕ್ರದ ಕಾರಿನಿಂದ ಆಗಿದೆ ಎಂಬುದು ಸ್ಥಳದಲ್ಲಿ ಬಿದ್ದಿರುವ ಕೆಲವೊಂದು ವಸ್ತುಗಳಿಂದ ಮೇಲ್ನೋಟಕ್ಕೆ ಕಾಣುತ್ತಿದೆ ಇನ್ನು ಸ್ಥಳಕ್ಕೆ ತುರುವೇಕೆರೆ ಸಿಪಿಐ ಲೋಹಿತ್ ಕುಮಾರ್ ಸಬ್ ಇನ್ಸ್ಪೆಕ್ಟರ್ ಸಂಗಮೇಶ್ ಮೇಟಿ ಹಾಗೂ ಸಿಬ್ಬಂದಿ ವರ್ಗ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *