Janataa24 NEWS DESK
TUMUL: ಸತತ ಮೂರನೇ ಬಾರಿಗೆ ತುಮಲ್ ನಿರ್ದೇಶಕರಾಗಿ ಸಿ ವಿ ಮಹಾಲಿಂಗಯ್ಯ ಆಯ್ಕೆ.

ತುರುವೇಕೆರೆ: ತುಮುಲ್ ನಿರ್ದೇಶಕರಾಗಿ ಮೂರನೇ ಬಾರಿಗೆ ಆಯ್ಕೆಯಾದ ಸಿಬಿ ಮಾಲಿಂಗಯ್ಯ ತುರುವೇಕೆರೆ ತಾಲೂಕಿನ ಚಂಡೂರು ಗ್ರಾಮದ ಸಿವಿ ಮಹಾಲಿಂಗಯ್ಯ ರವರು ತುಮಕೂರು ಜಿಲ್ಲಾ ಹಾಲು ಒಕ್ಕೂಟಕ್ಕೆ ನಡೆದ ಚುನಾವಣೆಯಲ್ಲಿ 85 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದು ಈ ಹಿನ್ನೆಲೆಯಲ್ಲಿ ತುರುವೇಕೆರೆ ಪಟ್ಟಣದ ಅಧಿದೇವತೆ ಉಡುಸಲಮ್ಮ ದೇವಿ ದೇವಾಲಯಕ್ಕೆ ಆಗಮಿಸಿದ ಮಹಾಲಿಂಗಯ್ಯ ದೇವರ ದರ್ಶನ ಮತ್ತು ಆಶೀರ್ವಾದ ಪಡೆದು ಮಾತನಾಡಿದ ಅವರು ನಾನು ಮೂರನೇ ಬಾರಿ ಜಿಲ್ಲಾ ನಿರ್ದೇಶಕನಾಗಿ ಆಯ್ಕೆಯಾಗಿದ್ದು ತುರುವೇಕೆರೆ ತಾಲೂಕಿನ ಹಾಲು ಸಹಕಾರ ಸಂಘಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಸಂಘಗಳ ಸದಸ್ಯರು ಯಶಸ್ವಿಯಾಗಿದ್ದು ನನ್ನ ಗೆಲುವಿಗೆ ಕಾರಣರಾದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ಹೇಳಿ ಇಡೀ ರಾಜ್ಯದಲ್ಲಿಯೇ ತುಮಕೂರು ಹಾಲು ಒಕ್ಕೂಟ ಪ್ರಥಮ ಸ್ಥಾನವನ್ನು ಪಡೆದಿದ್ದು ನನ್ನ ಅಧ್ಯಕ್ಷ ಅವಧಿಯಲ್ಲಿ ಹಾಲಿನ ದರವನ್ನು ಪರೀಕ್ಷಣೆ ಮಾಡಿ ರೈತರಿಗೆ ಹೆಚ್ಚಿನ ಸಹಾಯಧನ ಸಿಗುವಂತೆ ಆಗಿದೆ ನನ್ನ ಚುನಾವಣೆಯಿಂದ ಸೋಲಿಸಲು ಬಹಳ ಪ್ರಯತ್ನ ಮಾಡಿದರು ಸಹ ಸಫಲರಾಗಲಿಲ್ಲ ತುರುವೇಕೆರೆ ತಾಲೂಕಿಗೆ ಕ್ಷೀರಾಕ್ಷೇತ್ರದಲ್ಲಿ ಕ್ರಾಂತಿ ಮಾಡಲು ನನಗೆ ಮತ್ತೆ ಅವಕಾಶ ನೀಡಿದ್ದಕ್ಕೆ ತಮಗೆಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
ಇದೇ ವೇಳೆ ಸಿ ವಿ ಮಹಾಲಿಂಗಯ್ಯನವರ ಬೆಂಬಲಿಗರು ಶುಭಾಶಯಗಳನ್ನು ತಿಳಿಸಿ ಸಿಹಿ ಹಂಚಿ ಜೈಕಾರ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು ಮತ್ತು ಉಡಿಸಲಮ್ಮ ದೇವಾಲಯದಿಂದ ತೆರೆದ ವಾಹನದ ಮೂಲಕ ನೂತನ ಜಿಲ್ಲಾ ನಿರ್ದೇಶಕರಾದ ಸಿವಿ ಮಹಾಲಿಂಗಯ್ಯ ಅವರು ಸಾವಿರಾರು ಜನರೊಂದಿಗೆ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಯಜಮಾನ್ ಮಹೇಶ್, ರುದ್ರೇಶ್, ಮುಖಂಡರುಗಳಾದ ರವಿ ಮಲ್ಲಘಟ್ಟ,, ಕೆಜೆ ಗೋವಿಂದರಾಜು, ನರೇಂದ್ರ ತೊರಮಾವಿನಹಳ್ಳಿ, ಶಶಿಕುಮಾರ್ ರಾಯಸಂದ್ರ, ಆರ್‌ಪಿ ಕುಮಾರ ರಾಯಸಂದ್ರ, ಚೌಡೇನಹಳ್ಳಿ ಪಂಚಾಕ್ಷರಿ, ಪ್ರಸಾದ್ ಹರಿಕಾರನಹಳ್ಳಿ, ಗೋವಿಂದರಾಜು ಮಾಚೇನಹಳ್ಳಿ, ಸಿದ್ದಪ್ಪಾಜಿ ಹರಿಕಾರನಹಳ್ಳಿ ಸೇರಿದಂತೆ ಅನೇಕ ಬೆಂಬಲಿಗರು ಹಾಜರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.