Tumkur: ಕಲ್ಲೇಶ್ವರ ರಥಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು

Tumkur: ಕಲ್ಲೇಶ್ವರ ರಥಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು.

the miscreants set fire to kalleshwars chariot janataa247939337736924222414
Tumkur: ಕಲ್ಲೇಶ್ವರ ರಥಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು

ಗುಬ್ಬಿ: ತಾಲೂಕಿನಲ್ಲಿ ನಿಟ್ಟೂರು ಹೊಬಳಿಯ ಪುರ ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲೇಶ್ವರಸ್ವಾಮಿ ರಥಕ್ಕೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ.

ಸರಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ದೇವಾಲಯಕ್ಕೆ ಭಕ್ತಾದಿಗಳು ಕಾಣಿಕೆ ರೂಪವಾಗಿ ಲಕ್ಷಾಂತರ ಮೌಲ್ಯದ ರಥವನ್ನು ನಿರ್ಮಿಸಿ ಕೊಟ್ಟಿದ್ದರು.
ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವಕ್ಕೆ ಆಗಮಿಸುತ್ತಿದ್ದರು.
ಇದೇ ತಿಂಗಳ ಮಾ.23 ರಂದು ನಡೆಯಬೇಕಿದ್ದ ರಥೋತ್ಸವವು ಇಂದು ಸಂಪೂರ್ಣ ಬೆಂಕಿಯ ಕೆನ್ನಾಲಿಗೆ ಗುರಿಯಾಗಿದೆ.

ಕನ್ನಡ ಮಾತನಾಡಲು ಬರೆಯಲು ಬಾರದ ಬಿಹಾರಿ ಮೂಲದ ವ್ಯಕ್ತಿ ಒಬ್ಬನು ರಥಕ್ಕೆ ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದ್ದು ಗುಬ್ಬಿ ಪೊಲೀಸರು ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮಸ್ಥರು ಮಾತನಾಡಿ ಸರ್ಕಾರವು ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನೂತನ ರಥಕ್ಕೆ ಅನುದಾನ ನೀಡಬೇಕೆಂದು ತಿಳಿಸಿದರು.

ನಿಟ್ಟೂರು ಉಪತಹಸಿಲ್ದಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನೂರಾರು ಗ್ರಾಮಸ್ಥರು ಹಾಜರಿದ್ದರು.

ವರದಿ: ಶ್ರೀಕಾಂತ್ ಗುಬ್ಬಿ,

https://youtube.com/@janataa24?si=XsFcych2GMH0O6Gv

ಕೆಳಗಿನ #ಲಿಂಕ್ ಬಳಸಿ #ಜನತಾ24   #ವಾಟ್ಸಾಪ್_ಗ್ರೂಪ್ ಸೇರಿರಿ 

https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

https://www.janataa24.com/pavagada-bjp-has-chosen-mangalwad-ranganna-as-its-ne/

Leave a Reply

Your email address will not be published. Required fields are marked *