Document

Tumkur: ಪರಿಸರ ಸಂರಕ್ಷಣೆಗೆ ರಸ್ತೆ ಬದಿ ಸಸಿ ನೆಟ್ಟು ಪೋಷಿಸಿಲು ಮುಂದಾದ ಅರಣ್ಯ ಇಲಾಖೆ.

Tumkur: Forestry Department Planted Roadside Saplings For Environmental Protection.

The Forest Department has come forward to plant roadside saplings for environmental protection

ಗುಬ್ಬಿ: ಬಿಸಿಲಿನ ಝಳಕಿಗೆ ಹೈರಾಣಾದ ಜನ ಜಾನುವಾರುಗಳ ರಕ್ಷಣೆಗೆ ಮುಂದಾದ ಸಾಮಾಜಿಕ ಅರಣ್ಯ ಇಲಾಖೆ ರಸ್ತೆ ಬದಿಯಲ್ಲಿ ನೆಟ್ಟ ಸಸಿಗಳಿಗೆ ನೀರು ಹಾಕಿ ಪೋಷಿಸುವ ಕೆಲಸ ಮಾಡುತ್ತಿದೆ. ಪೋಷಣೆ ಕಾರ್ಯಕ್ಕೆ ಸಾರ್ವಜನಿಕರ ಸಹಕಾರವನ್ನು ಅರಣ್ಯ ಇಲಾಖೆ ಬಯಸುತ್ತಿದೆ. ಗ್ರಾಮೀಣ ಭಾಗದಲ್ಲಿನ ರಸ್ತೆಯ ಬದಿಯಲ್ಲಿ ನೆಟ್ಟ ಸಾಂಪ್ರದಾಯಿಕ ಸಸಿಗಳನ್ನು ಎರಡು ವರ್ಷಗಳ ಕಾಲ ಪೋಷಣೆ ಮಾಡಿದ ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಈಗಿನ ತಾಪಮಾನಕ್ಕೆ ಸಸಿ ಉಳಿಸುವ ನಿಟ್ಟಿನಲ್ಲಿ ಐದಾರು ವರ್ಷ ಬೆಳೆದು ನಿಂತ ದೊಡ್ಡ ಗಿಡಕ್ಕೂ ನೀರು ನೀಡಲಾಗುತ್ತಿದೆ.

Qಈಚೆಗೆ ರಸ್ತೆ ಬದಿಯಲ್ಲಿ ಕಾಣಿಸಿಕೊಳ್ಳುವ ಬೆಂಕಿಗೆ ಆಹುತಿಯಾದ ದೊಡ್ಡ ಗಿಡಗಳನ್ನು ಮತ್ತೇ ಬೆಳೆಸುವ ಪ್ರಯತ್ನ ಮಾಡಿ ಇಂದು ಶೇಕಡಾ 75 ರಷ್ಟು ಗಿಡಗಳನ್ನು ಉಳಿಸಿ ಬೆಳೆಸಲಾಗುತ್ತಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೇಘನಾ ತಿಳಿಸಿದರು.ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು, ಉದ್ಯಾನವನಗಳು ಸೇರಿದಂತೆ ಸರ್ಕಾರಿ ಕಚೇರಿ ಆವರಣ ಹಾಗೂ ಸರ್ಕಾರಿ ಜಾಗದಲ್ಲಿ ಸಸಿ ನೆಟ್ಟು ಪೋಷಿಸಲಾಗಿದೆ.

ಆದರೆ ಈ ಸಸಿಗಳನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಸಮುದಾಯ ಸಹಕಾರ ನೀಡಬೇಕು. ತಮ್ಮ ತೋಟದ ಗಿಡಮರಗಳನ್ನು ಪೋಷಿಸುವ ರೀತಿಯಲ್ಲೇ ಊರಿನ ರಸ್ತೆ ಬದಿಯ ಮರಗಳು, ಪಾರ್ಕ್ ಗಳು, ಅರಣ್ಯ ಪ್ರದೇಶಗಳು, ಗುಂಡು ತೋಪುಗಳು ಉಳಿಸಿಕೊಳ್ಳುವ ಕೆಲಸ ಇಲಾಖೆ ಮಾಡುತ್ತದೆ. ಈ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡಿ ಜೊತೆಗೆ ನಿಲ್ಲಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡುತ್ತಿದೆ.ಶೇಕಡಾ 17 ಪ್ರಮಾಣಕ್ಕೆ ಇಳಿದ ಅರಣ್ಯ ಪ್ರದೇಶ ಶೇಕಡಾ 33 ಕ್ಕೆ ಏರಬೇಕಿದೆ.

ಬಿಸಿಲಿನ ತಾಪಮಾನ ದಾಖಲೆಯಲ್ಲಿ ಸಾಗುತ್ತಿದೆ. ಈ ಮೊದಲು ಬೇಸಿಗೆಯಲ್ಲಿ 33 ಅಥವಾ 34 ಡಿಗ್ರಿ ಸೆಲ್ಸಿಯಸ್ ಇರುತ್ತಿದ್ದ ತಾಪಮಾನ ಇಂದು 41ಡಿಗ್ರಿ ಗಡಿ ಮುಟ್ಟಿದೆ. ದಿನ ಕಳೆದಂತೆ ಏರುಮುಖದಲ್ಲಿ ಸಾಗುವ ಬಿಸಿಲು ಮುಂದಿನ ದಿನಮಾನದಲ್ಲಿ ಶೇಕಡಾ 50 ಡಿಗ್ರಿ ಸೆಲ್ಸಿಯಸ್ ಮುಟ್ಟುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಪ್ರತಿ ವ್ಯಕ್ತಿ ಎರಡು ಸಸಿ ನೆಟ್ಟು ಪೋಷಿಸುವ ಕೆಲಸ ಜವಾಬ್ದಾರಿಯಿಂದ ಮಾಡಬೇಕಿದೆ.

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಸ್ಲೋಗನ್ ನಿಜಾರ್ಥ ಈಗ ಜನರ ಮನದಲ್ಲಿ ಮೂಡುತ್ತಿದೆ. ಈ ನಿಟ್ಟಿನಲ್ಲಿ ಹಸಿರು ಕ್ರಾಂತಿ ಮಾಡಲು ಸಾಮಾಜಿಕ ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು ಹಾಗೂ ರೈತಾಪಿ ವರ್ಗ ಮುಂದೆ ಬರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡುತ್ತಿದ್ದಾರೆ.ಗುಬ್ಬಿ ತಾಲ್ಲೂಕಿನ ಯಲಚಿಹಳ್ಳಿ ರಸ್ತೆಯ ಬದಿಯಲ್ಲಿದ್ದ ದೊಡ್ಡ ಸಸಿಗಳು ಬೆಂಕಿಗೆ ಆಹುತಿಯಾಗಿತ್ತು. ಕೂಡಲೇ ನೀರು ಹಾಕಿ ಸಸಿ ಪೋಷಣೆ ನಡೆಸಿ ಬಹುತೇಕ ಸಸಿಗಳನ್ನು ಉಳಿಸಿದ್ದೇವೆ. ರಸ್ತೆ ಬದಿಯಲ್ಲಿ ಮರಗಿಡಗಳ ಬುಡದಲ್ಲಿ ಬೆಂಕಿ ಹಚ್ಚುವ ಕೆಟ್ಟ ಕೆಲಸ ಮಾಡಬಾರದು ಎನ್ನುವುದು ನಮ್ಮ ಮನವಿ.-ಮೇಘನಾ, ಸಾಮಾಜಿಕ ವಲಯ ಅರಣ್ಯಾಧಿಕಾರಿ, ಗುಬ್ಬಿ.

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/tumkur-coconut-buying-centre-some-officers/(opens in a new tab)

Document

Leave a Reply

Your email address will not be published. Required fields are marked *