Document

Pavagada: ಬೀದಿ ನಾಯಿಗಳ ಹಾವಳಿಯಿಂದ 25 ಕುರಿಗಳು ದುರ್ಮರಣ.

Janataa24 NEWS DESK

Pavagada: 25 sheep’s Died After Being Bitten By Stray Dog’s.

25 sheep died after being bitten by stray dogs

ಪಾವಗಡ: ತಾಲೂಕಿನ ಗುಂಡನಹಳ್ಳಿ ಗ್ರಾಮದ ಬಸಯ್ಯ ಎಂಬವರಿಗೆ ಸೇರಿದ 15 ಕುರಿಮರಿಗಳು ಮಾರಾಟಕ್ಕೆ ಸಿದ್ಧವಾಗಿದ್ದ 10 ಕುರಿಗಳು.ಬಸಯ್ಯ ಎಂಬ ರೈತ ತನ್ನ ಕುಟುಂಬ ನಿರ್ವಹಣೆಗಾಗಿ ಕುರಿ ಮರಿಗಳನ್ನು ತಂದು ಸಾಕಿ ಅದರಿಂದ ಮಾರಾಟ ಮಾಡಿ ಅದರಿಂದ ಬಂದಂತಹ ಹಣದಿಂದ ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಂಡು ಜೀವನ ಮಾಡುತ್ತಿದ್ದಂತಹ ರೈತನಿಗೆ ಇಂದು ಬೆಳ್ಳಂಬೆಳಗ್ಗೆ ಬೀದಿ ನಾಯಿಗಳು ಏಕಾಏಕಿ ಕುರಿ ಮರಿಗಳ ಮೇಲೆ ದಾಳಿ ಮಾಡಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸುಮಾರು ಎರಡುವರೆ ಲಕ್ಷ ವೆಚ್ಚದ ಕುರಿಮರಿಗಳು ಎಂಬುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮರಣ ಹೊಂದಿದ ಕುರಿ ಮರಿಗಳನ್ನು ಪೋಸ್ಟ್ ಮಾರ್ಟಮ್(Post Mortem) ವರದಿ ಸಲ್ಲಿಸಿದ್ದಾರೆ.ಇದರಿಂದ ರೈತ ಬಸಯ್ಯನಿಗೆ ಬಹಳಷ್ಟು ನಷ್ಟ ಉಂಟಾಗಿದ್ದು.ಇತ್ತೀಚೆಗೆ ಬರ ಆವರಿಸಿ ತಾಲೂಕಿನ ಉಷ್ಣಾಂಶ 40ರಿಂದ 41 ಒಂದು ಕಡೆ ಏರುತ್ತಿದ್ದು. ತಾಲೂಕಿನಲ್ಲಿ ಎಂದೆಂದೂ ಕಾಣದ ಬಿಸಿಲಿನ ತಾಪಮಾನ ಒಂದು ಕಡೆ ಜಾನುವಾರಗಳಿಗೆ ಮೇವು ಕೊರತೆ. ಹೀಗೆ ಅನೇಕ ಸಮಸ್ಯೆಗಳು ತಾಂಡವ ಆಡುತ್ತಿವೆ.ಸರ್ಕಾರದಿಂದ ಬಸಯ್ಯಗೆ ಆಗಿರುವಂತಹ ನಷ್ಟಕ್ಕೆ ಪರಿಹಾರ ಕೊಡಬೇಕೆಂಬುದಾಗಿ ಮಾಧ್ಯಮ ಮೂಲಕ ಒತ್ತಾಯಿಸಿದ್ದಾರೆ.

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/tumkur-coconut-buying-centre-some-officers/

Document

Leave a Reply

Your email address will not be published. Required fields are marked *