Document

Tumakuru: ಸಿಎಂ ಸಿದ್ದರಾಮಯ್ಯ ಅಲ್ಲ ಟ್ಯಾಕ್ಸ್ ರಾಮಯ್ಯ– ಶಾಸಕ ಎಂ ಟಿ ಕೆ ಕಿಡಿ

Janataa24 NEWS DESK 

 

Tumakuru: ಸಿಎಂ ಸಿದ್ದರಾಮಯ್ಯ ಅಲ್ಲ ಟ್ಯಾಕ್ಸ್ ರಾಮಯ್ಯ– ಶಾಸಕ ಎಂ ಟಿ ಕೆ ಕಿಡಿ.
Tumakuru: ಸಿಎಂ ಸಿದ್ದರಾಮಯ್ಯ ಅಲ್ಲ ಟ್ಯಾಕ್ಸ್ ರಾಮಯ್ಯ– ಶಾಸಕ ಎಂ ಟಿ ಕೆ ಕಿಡಿ

 

ಗುಬ್ಬಿ : ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ತೆರಿಗೆ ಹೊರೆಯನ್ನು ಹೆಚ್ಚಿಸಿ ಜನರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದೆ ಎಂದು ಶಾಸಕ ಎಂ ಟಿ ಕೃಷ್ಣಪ್ಪ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

 

ತಾಲ್ಲೂಕಿನ ಸಿ ಎಸ್ ಪುರ ಗ್ರಾಮದಲ್ಲಿ ನೂತನ ಡಾ ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು.

 

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಆರ್ಥಿಕವಾಗಿ ದಿವಾಳಿಯಾಗಿದ್ದು ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲದೆ ಸಾರ್ವಜನಿಕರಿಗೆ ತೆರಿಗೆಯನ್ನು ಹೆಚ್ಚಿಸಿ ಖಜಾನೆಯನ್ನು ತುಂಬಿಸಿಕೊಳ್ಳಲು ಅವಣಿಸುತ್ತಿದ್ದಾರೆ. ಇದು ರಾಜ್ಯದ ಜನತೆಗೆ ತಿಳಿದಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದು ರಾಜ್ಯವು ಆರ್ಥಿಕವಾಗಿ ಹಾಗೂ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ ಇದಕ್ಕೆ ನೇರ ಹೊಣೆ ರಾಜ್ಯ ಸರ್ಕಾರವೇ ಎಂದು ಗುಡುಗಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೆ ಮುಟ್ಟಿದ್ದು ಇದನ್ನು ಖಂಡಿಸಿ ಏಪ್ರಿಲ್ 21 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಜೆಡಿಎಸ್ ಹೋಬಳಿ ಅಧ್ಯಕ್ಷ ಜಗದೀಶ್, ಯುವ ಘಟಕದ ಅಧ್ಯಕ್ಷ ನವೀನ್ ಕುಮಾರ್, ನಂಜೇಗೌಡ, ವೀರಣ್ಣನಗುಡಿ ರಾಮು, ಜೆಡಿಎಸ್ ಎಸ್ ಸಿ ಎಸ್ ಟಿ ಘಟಕದ ಅಧ್ಯಕ್ಷ ಗಿರೀಶ್ ಸೇರಿದಂತೆ ಜೆಡಿಎಸ್ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

 

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *