Document

Tirupati: ತಿರುಪತಿಯಲ್ಲಿ ಅಗ್ನಿ ಅವಘಡ- ಶೇಶಾಚಲ ಅರಣ್ಯದಲ್ಲಿ ಕಾಡ್ಗಿಚ್ಚು.

Janataa24 News DESK

Tirupati: ತಿರುಪತಿಯಲ್ಲಿ ಅಗ್ನಿ ಅವಘಡ

ತಿರುಮಲ: ಪ್ರಸಿದ್ಧ ಪುಣ್ಯಕ್ಷೇತ್ರ ತಿರುಮಲದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ತಿರುಮಲದಿಂದ ಪಾಪ ವಿನಾಶನಕ್ಕೆ ತೆರಳುವ ಮಾರ್ಗದ ಪಾರ್ವತಿ ಮಂಟಪದಿಂದ ಸ್ವಲ್ಪ ದೂರದಲ್ಲಿರುವ ಶೇಷಾಚಲ ಅರಣ್ಯ ಪ್ರದೇಶ(Sheshachalam Biosphere)ದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. 

Turupathi 20240420 152756 0000 1

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ(Fire) ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಟಿಟಿಡಿ(TTD) ಹಾಗೂ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಪೊಲೀಸರು ಕೂಡ ಅಗ್ನಿಶಾಮಕ ಯಂತ್ರಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಲು ಆರಂಭಿಸಿದರು.

ಪ್ರಸ್ತುತ ಬಿರು ಬೇಸಿಗೆಯಲ್ಲಿ ತೀವ್ರವಾದ ಶಾಖದ ಅಲೆಯ ಪರಿಣಾಮವಾಗಿ ಬೆಂಕಿಯು ಸಂಭವಿಸಿರಬಹುದು, ಪ್ರಸ್ತುತ ಬೆಂಕಿ ನಂದಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಅಗ್ನಿಶಾಮಕ ದಳದವರು ಬೆಂಕಿ ಮತ್ತಷ್ಟು ಹರಡದಂತೆ ಕಾರ್ಯಾಚರಣೆ ನಡೆಸುತ್ತಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ, ಹಾಗೂ ಬೆಂಕಿಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬೇಸಿಗೆ ಹಿನ್ನೆಲೆಯಲ್ಲಿ ಟಿಟಿಡಿ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಬೆಂಕಿ ಹರಡದಂತೆ ತಡೆಯಲು ಮಣ್ಣಿನ ರಸ್ತೆಗಳು ಮತ್ತು ಮಧ್ಯದಲ್ಲಿರುವ ಒಣಗಿದ ಮರಗಳನ್ನು ಸಹ ತೆಗೆದುಹಾಕಲಾಯಿತು ಎಂದು ತಿಳಿಸಿದರು.

https://www.janataa24.com/neha-incident-neha-fayaz-statement-of-parents-in/

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

Document

Leave a Reply

Your email address will not be published. Required fields are marked *