Document

ವಿದ್ಯಾಭ್ಯಾಸ ಜೊತೆಯಲ್ಲಿ ನೈತಿಕತೆ ಬೋದಿಸುವುದೆ ಶಾಲೆಯ ಮುಖ್ಯ ಗುರಿ -ಡಾ. ಈ. ವೆಂಕಟರಾಮಯ್ಯ.

Janataa24 NEWS DESK

IMG 20240103 WA0011

ವಿದ್ಯಾಭ್ಯಾಸ ಜೊತೆಯಲ್ಲಿ ನೈತಿಕತೆ ಬೋದಿಸುವುದೆ ಶ್ರೀಶಾಲಾ ಸನ್ ಶೈನ್ ಇಂಟರ್ ನ್ಯಾಷನಲ್ ಶಾಲೆಯ ಮುಖ್ಯ ಗುರಿ ಡಾ. ಈ. ವೆಂಕಟರಾಮಯ್ಯ.

IMG 20240103 WA0010



ಪಾವಗಡ: ವಿದ್ಯಾಬ್ಯಾಸದ ಜೊತೆಯಲ್ಲಿ ಸರ್ವತೊಮುಖ ಅಭಿವೃದ್ದಿಯಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕಾಗಿದೆ ಎಂದು ಶ್ರೀಶಾಲಾ ಸನ್ ಶೈನ್ ಇಂಟರ್ ನ್ಯಾಷನಲ್ ಶಾಲೆಯ ಸಲಹಾ ಸಮಿತಿ ಸದಸ್ಯರಾದ ಡಾ. ಜಿ. ವೆಂಕಟರಾಮಯ್ಯ ತಿಳಿಸಿದರು.

IMG 20240103 WA0008


ಶನಿವಾರ ಚಳ್ಳಕೆರೆ ರಸ್ತೆಯ ಮಾರ್ಗದಲ್ಲಿರುವ ಶ್ರೀಶಾಲಾ ಸನ್ ಶೈನ್ ಇಂಟರ್ ನ್ಯಾಷನಲ್ ಶಾಲೆ 8 ನೇ ವರ್ಷದ ಶಾಲಾ ವಾರ್ಷಿಕೊತ್ಸವದ ಸಮಾರಂಭದಲ್ಲಿ ವಿವಿಧ ಸ್ಫರ್ಧೆಗಳಲ್ಲಿ ವೀಜೇತರಾದ ಪೋಷಕರಿಗೂ ಮತ್ತು ಮಕ್ಕಳಿಗೂ ಬಹುಮಾನಗಳನ್ನು ವಿತರಿಸಿ, ಸಮಾರಂಭಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 8 ಷರ್ಷಗಳಿಂದ ಪೋಷಕರು ಪ್ರೋತ್ಸಾಹ ನೀಡುತ್ತಾ ಬಂದಿದ್ದು ಇಂಗ್ಲೀಷ್ ಭಾಷೆಯಲ್ಲಿ ಮಕ್ಕಳು ಪ್ರಾವೀಣ್ಯತೆಯನ್ನು ಪಡೆಯಬೇಕಾಗಿದೆ, ಕೇವಲ ಅಂಕಗಳನ್ನು ಪಡೆಯುವುದು ಮುಖ್ಯವಲ್ಲಾ, ಉತ್ತಮ ವಿದ್ಯಾಭ್ಯಾಸ, ಜೊತೆಗೆ ನೈತಿಕತೆ ಬೋದಿಸುವುದೆ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಶಾಲೆಯ ನಿರ್ದೆಶಕರಾದ ಲಕ್ಷಿö್ಮÃ ವೆಂಕಟರಾಮಯ್ಯ ಮಾತನಾಡಿ,
ಪೋಷಕರು ತಮ್ಮ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಬೇಕು, ಅಂಕಗಳನ್ನು ಕಡಿಮೆ ಪಡೆದುಕೊಂಡಾಗ ಅವರನ್ನು ಹೀಯಾಳಿಸಬಾರದು, ಬೈಯ್ಯಬಾರದು ಓದಿನ ಬಗ್ಗೆ ಹುರಿದುಂಬಿಸಬೇಕು,ಅವರ ಮಾತುಗಳನನು ಆಲಿಸಬೇಕು ನಿತ್ಯ ಶಾಲೆಯಲ್ಲಿ ಕಲಿಸಿದ ಪಾಠ ಪ್ರವಚನಗಳನ್ನು ಮೆಲಕುಹಾಕಿಸಬೇಕು, ಕೇವಲ ವಿದ್ಯೆ ಎಂದರೆ ಓದು-ಬರಹ ಮಾತ್ರ ಅಲ್ಲಾ ಅವರಿಗೆ ನೈತಿಕತೆಯನ್ನು ಕಲಿಸಬೇಕು, ಶಿಕ್ಷಕರು ಮತ್ತು ಪೋಷಕರು ಸಮನಾಗಿ ಕಂಡಾಗ ಮಕ್ಕಳು ಶೈಕ್ಷಣ ಕವಾಗಿ ಅಭಿವೃದ್ದಿ ಹೊಂದುತ್ತಾರೆ ಎಂದು ತಿಳಿಸಿದರು.
ಎಸ್.ಎಸ್.ಕೆ. ಸಂಘದ ಮಾಜಿ ಅಧ್ಯಕ್ಷರಾದ ಕೆ.ವಿ. ಶ್ರೀನಿವಾಸ್ ಮಾತನಾಡಿ, ಶ್ರೀಶಾಲಾ ಇಂಟರ್ ನ್ಯಾಷನಲ್ ಶಾಲೆಯ ಎಲ್ಲಾ ರೀತಿಯಲ್ಲಿ
ರಾಜ್ಯದಲ್ಲಿ ಮೊದಲನೆ ಸ್ಥಾನ ಪಡೆದುಕೊಳ್ಳಲಿ ಎಂದು ಶುಭ ಹಾರೈಸಿದರು.

image editor output image1468660499 1704281279466


ಶಾಲೆಯ ಅಡಳಿತಾಧಿಕಾರಿ ನಾಗೇಂದ್ರ ಮಾತನಾಡಿ, ಈ ಬಾರಿ ಸಿ.ಬಿ.ಎಸ್.ಸಿ. ಪರೀಕ್ಷಾ ಕೇಂದ್ರವನ್ನು ಪಾವಗಡಕ್ಕೆ ಮೂಂಜುರು ಮಾಡಿದ್ದು ಸಂತಸ ವಿಷಯ ಎಂದು ತಿಳಿಸಿದರು.
ಗ್ರಾಮಾಂತರ ಸಿ.ಪಿ.ಐ. ಗೀರೀಶ್ ಮತ್ತು ಶಿಕ್ಷಣ ತಜ್ಞ ವಿದ್ಯಾಸಾಗರ್, ಶಾಲೆಯ ಪ್ರಾಂಶುಪಾಲರಾದ ಮಂಜುಳಾನಾಗಭೂಷಣ್ ಮಾತನಾಡಿದರು.

IMG 20240103 WA0012


ಶಾಲೆಯ ಸಲಹಾ ಸಮಿತಿ ಸದಸ್ಯರು ಮತ್ತು ನಿವೃತ್ತ ಜಿಲ್ಲಾಧಿಕಾರಿಗಳಾದ ಎಚ್. ರಾಮಾಂಜಿನೇಯಲು, ಪುರಸಭಾ ಸದಸ್ಯರಾದ ಗೊರ್ತಿನಾಗರಾಜ್, ಮುಖಂಡರಾದ ಬೀಮನಕುಂಟೆ ಸತ್ಯಪ್ಪ, ಉಪನ್ಯಾಸಕ ರವಿಕಾಂತ್, ಶ್ರೀನಿವಾಸರೆಡ್ಡಿ, ದೊಡ್ಡಹಳ್ಳಿ ಅಶೋಕ್, ಬಿ.ಜೆ.ಪಿ. ರವಿ. ಮಾಧವರೆಡ್ಡಿ, ಗೋಲ್ಡ್ ನಟರಾಜು,ಮುಖ್ಯ ಶಿಕ್ಷಕರಾದ ಪವನ್ ಕುಮಾರ್‌ರೆಡ್ಡಿ, ನಾಗೇನಹಳ್ಳಿಪ್ರಭಾಕರ್, ತರಕಾರಿಕಿಟ್ಟಪ್ಪ, ಮತ್ತಿತರರು ಹಾಜರಿದ್ದರು.

IMG 20240103 WA0009

ವರದಿ

ಪಾವಗಡ: ಇಮ್ರಾನ್ ಉಲ್ಲಾ

Document

Leave a Reply

Your email address will not be published. Required fields are marked *