Document

Pavagada: ನೆರೆಗಾ ಕೂಲಿ ಕಾರ್ಮಿಕರಿಗೂ ರಾಜಕೀಯ ಬಣ್ಣ.!ಅತಂತ್ರ ಸ್ಥಿತಿಯಲ್ಲಿ ಕೂಲಿಕಾರ್ಮಿಕರು

Janataa24 NEWS DESK

Pavagada: ನೆರೆಗಾ ಕೂಲಿ ಕಾರ್ಮಿಕರಿಗೂ ರಾಜಕೀಯ ಬಣ್ಣ.!ಅತಂತ್ರ ಸ್ಥಿತಿಯಲ್ಲಿ ಕೂಲಿಕಾರ್ಮಿಕರು.

Pavagada: ನೆರೆಗಾ ಕೂಲಿ ಕಾರ್ಮಿಕರಿಗೂ ರಾಜಕೀಯ ಬಣ್ಣ.!ಅತಂತ್ರ ಸ್ಥಿತಿಯಲ್ಲಿ ಕೂಲಿಕಾರ್ಮಿಕರು
ಪಾವಗಡ: ನೆರೆಗಾ ಆಡಿಯಲ್ಲಿ ಸೀತಾರಾಮ ಕೆರೆ ಹೂಳೆತ್ತುವ ಕೆಲಸಕ್ಕೆ ರಾಜಕೀಯ ವ್ಯಕ್ತಿಗಳಿಂದ ಅಡ್ಡಿಪಡಿಸುತ್ತಿದ್ದಾರೆ ಎಂಬುದಾಗಿ ತಾಲೂಕು ಪಂಚಾಯಿತಿ ಮುಂದೆ ನೇರೆಗಾ ಕೂಲಿ ಕಾರ್ಮಿಕರು ತಾಲೂಕು ಪಂಚಾಯಿತಿ ಸಭಾಂಗಣದ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದ ಘಟನೆ ಗುರುವಾರ ನಡೆದಿದೆ.

ಪಾವಗಡ ತಾಲೂಕಿನ ಕೊಟಗುಡ್ಡ ಪಂಚಾಯತಿ ವ್ಯಾಪ್ತಿಯ ಕಡಪಲಕೆರೆ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕೆಲಸ ಕಳೆದ ತಿಂಗಳಿಂದ ಮಾಡುತ್ತಿದ್ದೇವೆ.

ಯಾರೋ ಕಿಡಿಗೇಡಿಗಳು ನಾವು ದುಡಿಯುವ ನಮ್ಮ ಅನ್ನಕ್ಕೂ ಸಹ ಮಣ್ಣ ಹಾಕಲು ಯತ್ನಿಸುತ್ತಿದ್ದಾರೆ.

ಸುಮ್ಮನೆ ಯಂತ್ರಗಳಿಂದ ಕಾಮಗಾರಿ ಮಾಡುತ್ತಿದ್ದಾರೆ ಎಂಬುದಾಗಿ ಇಓ. ಪಿ. ಡಿ. ಓ. ಗಳಿಗೆ ದೂರು ಸಲ್ಲಿಸಿ ನಮ್ಮ ದುಡಿಯುತ್ತಿರುವ ಅನ್ನಕ್ಕೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಕೂಲಿಕಾರ್ಮಿಕರು ಆರೋಪಿಸಿದ್ದಾರೆ.

ಯಂತ್ರಗಳಿಂದ ಮಾಡುತ್ತಿದ್ದರೆ ಪ್ರತ್ಯಕ್ಷವಾಗಿ ಹಿಡಿದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಇಲ್ಲ ಸಲದ ಆರೋಪ ಮಾಡಿ ನಮ್ಮ ಕೂಲಿಕಾರ್ಮಿಕರಿಗೆ ತೊಂದರೆ ಮಾಡೋದು ಸರಿಯೇ ಎಂಬುದಾಗಿ ತಿಳಿಸಿದ್ದಾರೆ.

ಹೇಳಿಕೆ: ತಾಲೂಕು ಪಂಚಾಯಿತಿ ಜಾನಕಿ ರಾಮ್ ಮಾತನಾಡಿ ಸ್ಥಳೀಯ ಕೆಲವರು ನೆರೆಗಾ ಕಾಮಗಾರಿ ಯಂತ್ರಗಳಿಂದ ಮಾಡುತ್ತಿರುವ ಫೋಟೋ ಮೂಲಕ ಆರೋಪ ಮಾಡಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ತನಿಖೆ ನಡೆಸಿ ನಿಮಗೆ ಕೆಲಸ ಮಾಡಿರುವ ಕೊಲಿ ಹಣ ಸಂಪೂರ್ಣ ಕೊಡುತ್ತೇವೆ ಎಂದು ಹೇಳಿದರು.

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *