Document

Pavagada: ಶಿಕ್ಷಣ ಇಲಾಖೆಯ ನಿವೃತ್ತ ಜೆ.ಡಿ. ಡಾ.ವೈ.ಎಸ್. ಹನುಮಂತರಾಯ ನಿಧನ

Pavagada: ಶಿಕ್ಷಣ ಇಲಾಖೆಯ ನಿವೃತ್ತ ಜೆ.ಡಿ. ಡಾ.ವೈ.ಎಸ್. ಹನುಮಂತರಾಯ ನಿಧನ

Pavagada dr YS HANUMANTHARAJU DEATH NEWS

ಪಾವಗಡ, ಏ.10: ಪಟ್ಟಣದ ಸರ್ಕಾರಿ ವೈ.ಇ.ಆರ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ನಂತರ ಧಾರವಾಡ ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕರಾಗಿ ನಿವೃತ್ತಿಯಾಗಿ, ಹಾಲಿ ಪಾವಗಡ ಪಟ್ಟಣದಲ್ಲಿರುವ ಸುಪ್ರಸಿದ್ಧ ಶನಿಮಾತ್ಮ ದೇವಸ್ಥಾನದ ಕಾರ್ಯ ನಿರ್ವಹಣಾಧಿ ಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ವೈ.ಎಸ್. ಹನುಮಂತರಾಯ(YS Hanumanthaya) (62) ಅವರು ಬೆಂಗಳೂರಿನ ಕಾಸ್ಥಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

 

ಕಳೆದ 15 ದಿನಗಳಿಂದ ಅನಾರೋಗ್ಯಕ್ಕೆ ಬಳಲುತ್ತಿದ್ದರು. ಅರ್ಥಶಾಸ ಉಪನ್ಯಾಸಕರಾಗಿ, ಮೈಸೂರು ವಿಭಾಗದ ಹನಗೂಡು, ಪಾವಗಡದ ಪ್ರಥಮ ದರ್ಜೆ ಕಾಲೇಜಿನ(GFGC Pavagada)ಲ್ಲಿ ಪ್ರಾಂಶುಪಾಲರಾಗಿ ವೈ.ಎಸ್. ಹನುಮಂತರಾಯ ಅವರು ಸಾವಿರಾರು ಶಿಷ್ಯರನ್ನು ಹೊಂದಿದ್ದರು.

 

ಇವರ ಸೇವೆ ಪಾವಗಡ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯನ್ನು ಮನಗಂಡ ಅವರು ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ವಿದ್ಯಾರ್ಥಿಗಳ ಸಹಕಾರ ಮತ್ತು ದಾನಿಗಳ ನೆರವಿನೊಂದಿಗೆ ಸುಮಾರು ಆರು ಕೊಠಡಿಗಳನ್ನು ವಿದ್ಯಾರ್ಥಿಗಳಿಂದಲೇ ನಿರ್ಮಿಸಿ ರಾಜ್ಯದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಾ ಯೋಜನೆಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವುದರಲ್ಲದೆ ಉತ್ತಮ ಎನ್‌ಎಸ್‌ಎಸ್‌ ಅಧಿಕಾರಿಯಾಗಿ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದರು.

 

ಪಟ್ಟಣದ ಕೆಇಬಿ ಕಚೇರಿಯ ಹಿಂಭಾಗದಲ್ಲಿ ಇರುವ ಮೃತರ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು, ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂಬುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.

 

ಗಣ್ಯರಿಂದ ಸಂತಾಪ: ಶಾಸಕರಾದ ಎಚ್.ವಿ. ವೆಂಕಟೇಶ್, ಮಾಜಿ ಸಚಿವರಾದ ವೆಂಕಟರಮಣಪ್ಪ, ಮಾಜಿ ಶಾಸಕರಾದ ಕೆ.ಎಂ. ತಿಮ್ಮರಾಯಪ್ಪ, ಎಸ್‌ಎಸ್‌ಕೆ ಸಂಘದ ಅಧ್ಯಕ್ಷರಾದ ಆನಂದ್ ರಾವ್, ರೋಟರಿ ಅಧ್ಯಕ್ಷ ಸತ್ಯ ಲೋಕೇಶ್. ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜಿ .ಎನ್.ಹನುಮಂತರಾಯಪ್ಪ.

ಪಾವಗಡದ ವೈಇ ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಶ್ರೀಧರ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿ ಬಳಗದ ಅಧ್ಯಕ್ಷ ತಿಪ್ಪೇಸ್ವಾಮಿ ರಿಜ್ವಾನ್ ಉಲ್ಲಾ.ಸ್ಟುಡಿಯೋ ಅಮರ್ .ಸೇರಿದಂತೆ ಅನೇಕ ಗಣ್ಯರು ಸಂತಾನವನ್ನು ಸೂಚಿಸಿದ್ದಾರೆ.

 

ವರದಿ: ಇಮ್ರಾನ್ ಉಲ್ಲಾ. ಪಾವಗಡ

https://www.janataa24.com/2nd-puc-results-2nd-puc-result-published-here-is/

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

Subscribe YouTube

https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *