Janataa24 NEWS DESK
Pavagada: ವೈದ್ಯನ ನಿರ್ಲಕ್ಷ್ಯದಿಂದ 7 ವರ್ಷದ ಬಾಲಕ ಸಾವು– ಪಟ್ಟಣದ ಆಸ್ಪತ್ರೆ ಬಳಿ ಕುಟುಂಬಸ್ಥರ ಪ್ರತಿಭಟನೆ.

ಪಾವಗಡ: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಪಟ್ಟಣದ ಬಾಬೈನ ಗುಡಿ ಬೀದಿಯ ಹರಿಕುಮಾರ್ ಎನ್ನುವವರ ಪುತ್ರ ಕರುಣಾಕರ್ ಎನ್ನುವ ಏಳು ವರ್ಷದ ಬಾಲಕನಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಪಟ್ಟಣದ ಸುಧಾ ಕ್ಲಿನಿಕ್ ಬಳಿ ಬಾಲಕನ ಕುಟುಂಬಸ್ಥರು ಮೃತಪಟ್ಟ ಬಾಲಕನ ಶವವಿಟ್ಟು ಪ್ರತಿಭಟನೆಯನ್ನು ಬುಧವಾರ ಮಧ್ಯಾನ 2 ಗಂಟೆಯ ಸಂದರ್ಭದಲ್ಲಿ ನಡೆಸಿದ್ದಾರೆ
ಈ ಸಂದರ್ಭದಲ್ಲಿ ಮೃತ ಬಾಲಕನ ತಂದೆ ಹರಿಕುಮಾರ್ ಮಾತನಾಡಿ ಸೋಮವಾರದಿಂದ ನಾವು ಪಟ್ಟಣದ ಸುಧಾ ಕ್ಲಿನಿಕ್ ಬಳಿಯ ಡಾ.ಸುಧಾಕರ್ ರೆಡ್ಡಿ ಅವರ ಬಳಿ ಮಗುವಿಗೆ ಚಿಕಿತ್ಸೆ ಕೊಡಿಸುತ್ತಿದ್ದು ಡೆಂಗಿ ಜ್ವರ ಎಂದು ಹೇಳಿದರು ಮಗುವಿನ ದೇಹ ತಣ್ಣಗಾದ ಕೊನೆ ಕ್ಷಣದಲ್ಲಿ ಬೆಂಗಳೂರಿಗೆ ಹೋಗಿ ಎಂದು ತರ ತುದಿಯಿಂದ ಹೇಳಿ ಆಸ್ಪತ್ರೆಯನ್ನ ಬಾಗಿಲಿಗೆ ಹಾಕಿಕೊಂಡು ಮನೆಗೆ ಹೋಗಿದ್ದಾರೆ ಎಂದು ಆರೋಪಿಸುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ
ಕೆಲ ಕಾಲ ಮೃತ ಬಾಲಕನ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗದಲ್ಲಿ ಶಿವ ಇಟ್ಟು ಪ್ರತಿಭಟಿಸಿದ್ದು ಘಟನೆ ಪಾವಗಡ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಜರುಗಿದೆ.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.