Document

NH66: ಕಾರವಾರದಲ್ಲಿ ಕಾಳಿ ನದಿ ಸೇತುವೆ ಕುಸಿತ – ಲಾರಿ ಪಲ್ಟಿ

 

Janataa24 NEWS DESK 

 

NH66: Kali river bridge collapse at Karwar – Lorry overturns.

NH66: ಕಾರವಾರದಲ್ಲಿ ಕಾಳಿ ನದಿ ಸೇತುವೆ ಕುಸಿತ - ಲಾರಿ ಪಲ್ಟಿ

 

ಕಾರವಾರ: ಕಾಳಿ ನದಿ (Kali River) ಸೇತುವೆಗೆ ಅಡ್ಡಲಾಗಿ 40 ವರ್ಷದ ಹಿಂದೆ ಕಟ್ಟಿದ್ದ ಸೇತುವೆ (Bridge) ಕುಸಿದು ಬಿದ್ದ ಪರಿಣಾಮ ತಮಿಳುನಾಡು ಮೂಲದ ಲಾರಿಯೊಂದು ನದಿಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ನಗರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

 

ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸೇತುವೆ ಕುಸಿದಿದ್ದು, ಘಟನೆಯಲ್ಲಿ ಲಾರಿ ಚಾಲಕ ಬಾಲಮುರುಗನ್ ಅವರನ್ನು ರಕ್ಷಣೆ ಮಾಡಲಾಗಿದೆ. ಗೋವಾದಿಂದ ಹುಬ್ಬಳ್ಳಿಗೆ ತೆರಳುತಿದ್ದ ಖಾಲಿ ಲಾರಿ ಕಾಳಿನದಿಯ ಸೇತುವೆಮೇಲೆ ವೇಗವಾಗಿ ಹೋಗುತ್ತಿದ್ದ ವೇಳೆ ಸೇತುವೆ ಕುಸಿದಿದೆ. ಈ ವೇಳೆ ಚಾಲಕ ಲಾರಿಯ ಕ್ಯಾಬಿನ್ ಮೇಲೆ ನಿಂತು ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಕರಾವಳಿ ಕಾವಲುಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಅವರ ರಕ್ಷಣೆ ಮಾಡಲಾಗಿದೆ.

ಕಾಳಿ ನದಿಯ ಸೇತುವೆಯ ಮೇಲ್ಛಾವಣೆ ಮೂರು ಕಡೆ ಕುಸಿದಿದೆ.

ಸೇತುವೆಯ ಮೇಲಿನ ಸಂಚಾರ ಸಂಪೂರ್ಣ ಬಂದ್ ಆಗಿದ್ದು  ವಾಹನ ಸವಾರರಿಗೆ ಅಂಕೋಲ ಮಾರ್ಗವಾಗಿ ತೆರಳುವಂತೆ ಅಧಿಕಾರಿಗಳು ಸೂಚಿಸಿರುತ್ತಾರೆ .

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

Document

Leave a Reply

Your email address will not be published. Required fields are marked *