Document

NCB: 38 ಕೋಟಿ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಸುಟ್ಟು ಹಾಕಿದ ಎನ್‌ಸಿಬಿ. 

JANATAA24 NEWS DESK 

NCB: 38 ಕೋಟಿ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಸುಟ್ಟು ಹಾಕಿದ ಎನ್‌ಸಿಬಿ.

 

NCB

ಬೆಂಗಳೂರು: ವಿಶೇಷ ಕಾರ್ಯಾಚರಣೆ ವೇಳೆ ಜಪ್ತಿ ಮಾಡಿದ್ದ ಭಾರೀ ಪ್ರಮಾಣದ ಡ್ರಗ್ಸ್‌ ಅನ್ನು ಮಾದಕ ದ್ರವ್ಯ ನಿಯಂತ್ರಣ ಮಂಡಳಿ (NCB) ನಾಶಪಡಿಸಿದೆ.

 

 

ಮಾದಕ ವಸ್ತುಗಳ ವಿರುದ್ಧ ಕೈಗೊಂಡಿದ್ದ ಕಾರ್ಯಾಚರಣೆ ವೇಳೆ ಎನ್‌ಸಿಬಿ 38 ಕೋಟಿ ಮೌಲ್ಯದ ಮಾದಕ ವಸ್ತುವನ್ನ ಜಪ್ತಿ ಮಾಡಿತ್ತು.  ಹೊಸಕೋಟೆ ಬಳಿಯ ಸೆಂಚುರಿ ರಿಫೈನರಿ ಘಟಕದಲ್ಲಿ 128 ಕೆ.ಜಿ. ಡ್ರಗ್ಸ್ ನಾಶ ಮಾಡಿದೆ.

ಒಟ್ಟು 13 ಪ್ರಕರಣಗಳಲ್ಲಿ ವಿವಿಧ ಮಾದರಿಯ 128.75 ಕೆ.ಜಿ. ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

 

ಗಾಂಜಾ, ಹೈಡ್ರೊಪೋನಿಕ್‌ ಗಾಂಜಾ, ಕೊಕೇನ್‌, ಎಂಡಿಎಂಎ ಕ್ರಿಸ್ಟಲ್‌ಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿತ್ತು. ಅದನ್ನು ನಾಶಪಡಿಸಲಾಯಿತು. ಕಳೆದ ಫೆಬ್ರವರಿಯಲ್ಲೂ ₹11 ಕೋಟಿ ಮೌಲ್ಯದ 1,607 ಕೆ.ಜಿ. ಡ್ರಗ್ಸ್ ನಾಶಪಡಿಸಲಾಗಿತ್ತು. ಈ ವರ್ಷ ಒಟ್ಟು ₹49 ಕೋಟಿ ಮೌಲ್ಯದ ಡ್ರಗ್ಸ್ ನಾಶ ಪಡಿಸಿದಂತಾಗಿದೆ ಎಂದು ಎನ್‌ಸಿಬಿ ಬೆಂಗಳೂರು ಪ್ರಾದೇಶಿಕ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಎನ್‌ಸಿಬಿಯ ಪ್ರಾದೇಶಿಕ ನಿರ್ದೇಶಕ ಸಚಿನ್‌ ಘೋರ್ಪಡೆ, ಸಿಸಿಬಿ ಕ್ರೈಂ–2 ವಿಭಾಗದ ಡಿಸಿಪಿ ರಾಜಾ ಇಮಾಮ್‌ ಖಾಸೀಂ, ಎನ್‌ಸಿಬಿಯ ಸಹಾಯಕ ನಿರ್ದೇಶಕ ಎಂ.ಆರ್.ಅರವಿಂದ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಜರಿದ್ದರು.

 

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

 

 

 

 

 

Document

Leave a Reply

Your email address will not be published. Required fields are marked *