Document

MT Krishnappa: ಮೈಸೂರು ಮತ್ತು ಬೆಂಗಳೂರು ಭಾಗಕ್ಕೆ ಮಾತ್ರ ಮೀಸಲು ಈ ಬಾರಿಯ ಬಜೆಟ್ –ಶಾಸಕ ಎಂ ಟಿ ಕೃಷ್ಣಪ್ಪ ವ್ಯಂಗ್ಯ.

Janataa24 NEWS DESK 

 

MT Krishnappa: ಮೈಸೂರು ಮತ್ತು ಬೆಂಗಳೂರು ಭಾಗಕ್ಕೆ ಮಾತ್ರ ಮೀಸಲು ಈ ಬಾರಿಯ ಬಜೆಟ್ –ಶಾಸಕ ಎಂ ಟಿ ಕೃಷ್ಣಪ್ಪ ವ್ಯಂಗ್ಯ.

MT Krishnappa: ಮೈಸೂರು ಮತ್ತು ಬೆಂಗಳೂರು ಭಾಗಕ್ಕೆ ಮಾತ್ರ ಮೀಸಲು ಈ ಬಾರಿಯ ಬಜೆಟ್ –ಶಾಸಕ ಎಂ ಟಿ ಕೃಷ್ಣಪ್ಪ ವ್ಯಂಗ್ಯ.
ತುರುವೇಕೆರೆಯ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಶ್ರೀಸಾಮಾನ್ಯರು ಬಳಸುವ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ

ಇದೇ ಸಿದ್ದರಾಮಯ್ಯನವರು ನಮ್ಮ ಪಕ್ಷದ ವರಿಷ್ಠರಾದ ಸನ್ಮಾನ್ಯ ಕುಮಾರಸ್ವಾಮಿಯವರು ಪೆಟ್ರೋಲ್ ಬೆಲೆ ಹೆಚ್ಚಿಗೆ ಮಾಡಿದಾಗ ಬೀದಿಗಿಳಿದು ಪ್ರತಿಭಟನೆ ಮಾಡಲು ಮುಂದಾಗಿದ್ದರು ಆಡಳಿತ ಪಕ್ಷದಲ್ಲಿದ್ದಾಗಲೇ ವಿರೋಧ ಮಾಡಿದ್ದರು ಇವತ್ತು ಪೆಟ್ರೋಲ್ 3.50 ಪೈಸೆ ಹೆಚ್ಚಿಸಿ ಡೀಸೆಲ್ 3.80 ಪೈಸೆ ಏರಿಸಿದ್ದಾರೆ ಅಂದರೆ ಇದುವರೆಗೂ ಇವರ ಈ ಬೆಲೆ ಏರಿಕೆ ಮರ್ಮ ಏನೆಂಬುದು ತಿಳಿಯುತ್ತಿಲ್ಲ ಜೊತೆಗೆ ಹಾಲಿನ ದರವನ್ನು ಒಂದು ಬಾರಿ 5 ರೂ ಹೆಚ್ಚಿಸಿ ಮತ್ತೊಮ್ಮೆ 4 ರೂ. ಹೆಚ್ಚಿಸಿ ಒಟ್ಟು 9 ರೂ ಗಳಿಗೆ ಏರಿಕೆ ಮಾಡಿದ್ದಾರೆ ನಾನು ಈಗಾಗಲೇ ಇದರ ಬಗ್ಗೆ ಸದನದಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿದ್ದೇನೆ

ಮೆಟ್ರೋ ದರವನ್ನು ನೂರರಷ್ಟು ಹೆಚ್ಚಿಸಿದ್ದಾರೆ..ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಸಹ ಮೆಟ್ರೋ ದರ ಹೆಚ್ಚಳವಾಗಿರುವುದರಿಂದ ಮೆಟ್ರೋಗೆ ಬರುವ ಪ್ರಯಾಣಿಕರ ಜನಸಂಖ್ಯೆ ಕಡಿಮೆಯಾಗಿದೆ

ಲಿಕ್ಕರ್ ಗೆ ಮೂರು ಬಾರಿ ದರವನ್ನು ಹೆಚ್ಚಿಗೆ ಮಾಡಿದ್ದಾರೆ ಗ್ಯಾರಂಟಿಗೆ ಹಣವನ್ನು ಅವರ ಮನೆಯಿಂದ ತಂದು ಹಾಕುತ್ತಿಲ್ಲ ಗಂಡಂದಿರ ತಲೆ ಒಡೆದು ಹೆಂಡತಿಗೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ಇದಲ್ಲದೆ ರೈತರಿಂದ ಸಾರ್ವಜನಿಕರಿಂದ ಟ್ಯಾಕ್ಸ್ ರೂಪದಲ್ಲಿ ಹಣ ತೆಗೆದುಕೊಳ್ಳುತ್ತಿದ್ದಾರೆ

ಸರ್ಕಾರದಿಂದ ಅಭಿವೃದ್ಧಿಗೆಂದು ನಯಾ ಪೈಸ ಕೊಡುತ್ತಿಲ್ಲ

ಹಾಲಿನ ದರವನ್ನು ಹೆಚ್ಚಿಗೆ ಮಾಡಿ ರೈತರಿಗೆ ನೀಡುತ್ತಿಲ್ಲ ಗ್ರಾಹಕರ ಜೆಬಿಗೆ ಕತ್ತರಿ ಹಾಕುತ್ತಿದ್ದಾರೆ ರೈತರಿಗೆ ಹಾಲಿನ ಬೆಂಬಲ ಬೆಲೆಯನ್ನು ಮೂರು ತಿಂಗಳಿಂದ ನೀಡಿಲ್ಲ

ಇದೊಂದು ಅನಿಷ್ಠ ಕೆಟ್ಟ ಸರ್ಕಾರ

 

ಇಂಥ ಮುಖ್ಯಮಂತ್ರಿಗಳನ್ನು ನಾನು ಸಿದ್ದರಾಮಯ್ಯ ಎಂದು ಕರೆಯುವುದಿಲ್ಲ

ಟ್ಯಾಕ್ಸ್ ರಾಮಯ್ಯ ಎಂದು ಹೇಳುತ್ತೇನೆ ಎಂದು ವ್ಯಂಗ್ಯ ಮಾಡಿದರು ಈ ಸರ್ಕಾರದ ಸಾಧನೆ ಟ್ಯಾಕ್ಸ್ ವಸೂಲಿ ಅಷ್ಟೇ ಅಭಿವೃದ್ಧಿಗೆ ಹಣ ನೀಡಿಲ್ಲ ನಾನು ನಮ್ಮ ತಾಲೂಕಿಗೆ ಕಾನೂನು ಪದವಿ ಕಾಲೇಜ್ ಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೆ ಹಾಗೂ ಸಿ ಎಸ್ ಪುರಕ್ಕೆ ಪಾಲಿಟೆಕ್ನಿಕ್ ಕಾಲೇಜ್ ಕೇಳಿದ್ದೆ GIC ಕಾಲೇಜ್ ಕೇಳಿದ್ದೆ

ಈ ಸರ್ಕಾರ ಈ ನನ್ನ ಮನವಿಗೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ

ಸಿದ್ದರಾಮಯ್ಯನವರು ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಿಮಗೆ ಅನುದಾನ ನೀಡುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಬಂದು ಪಕ್ಷಾಂತರ ಮಾಡಿಕೊಂಡು ಸೇರಿಕೊ ಎಂದು ಕರೆಯುತ್ತಾರೆ ಕಾಂಗ್ರೆಸ್ಸಿಗೆ ಬಂದರೆ ಅಷ್ಟೇ ಅನುದಾನ ಕೊಡುವುದಾದರೆ

ಅನುದಾನ ಕಾಂಗ್ರೆಸ್ ಶಾಸಕರಿಗೆ ಮಾತ್ರ ಸೀಮಿತವಾಗಿದೆಯೇ ಎಂಬುದು ನನ್ನ ಪ್ರಶ್ನೆ ನಮ್ಮ ಮೈತ್ರಿ ಪಕ್ಷದಲ್ಲಿ ಕಾರ್ಯಕರ್ತರು ಅಭಿಮಾನಿಗಳು ಕಟ್ಟಿದ್ದ ಟ್ಯಾಕ್ಸ್ ಅನ್ನು ಯಾಕೆ ಸರ್ಕಾರ ಬಳಸುತ್ತಿದೆ ಕಾಂಗ್ರೆಸ್ ಎಂಎಲ್ಎಗಳಿಗೆ ಯಾಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ನಮ್ಮ ಜಿಎಸ್​ಟಿ ಹಣವನ್ನು ನಮಗೆ ನೀಡಿ ಎಂದರು,

ಇಲ್ಲವಾದರೆ ಮುಂದಿನ ದಿನಗಳಲ್ಲಿ ಕೆಟ್ಟ ಸರ್ಕಾರದ ವಿರುದ್ಧ ವ್ಯವಸ್ಥಿತವಾಗಿ ಸಮಗ್ರ ಹೋರಾಟವನ್ನು ರೂಪಿಸುತ್ತೇನೆ

ಈ ಸರ್ಕಾರ ರೈತರ ತಲೆ ಒಡೆಯುತ್ತಿದೆ ಜನ ಸಾಮಾನ್ಯ ಜನರ ತಲೆ ಹೊಡಿಯುತ್ತಿದೆ, ಈ ಬಾರಿ ಬಜೆಟ್ ಮೈಸೂರು ಮತ್ತು ಬೆಂಗಳೂರು ಭಾಗಕ್ಕೆ ಅಷ್ಟೇ ಮೀಸಲಿದ್ದು ಈ ಬಜೆಟ್ಟನ್ನು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಇನ್ನು ತಾಲೂಕಿನ ಸಾರ್ವಜನಿಕ ವಲಯದಲ್ಲಿ ಮುಂದಿನ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಹೀಗಿರುವ ಶಾಸಕರ ಪುತ್ರರೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆ ಇದೆ ವೇಳೆ ಪತ್ರಕರ್ತರೊಬ್ಬರು ಶಾಸಕ ಎಂ ಟಿ ಕೃಷ್ಣಪ್ಪರನ್ನು ಪ್ರಶ್ನೆ ಮಾಡಿ ಮುಂದಿನ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ನಿಮ್ಮ ನಡೆ ಏನು ಎಂದು ಕೇಳಿದಾಗ ಮುಂದಿನ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದಿಂದ ನಾನೇ ಅಭ್ಯರ್ಥಿ ಎಂಬ ಮಾತು ಹೇಳಿದರು.

ಸಂದರ್ಭದಲ್ಲಿ ಮುಖಂಡರುಗಳಾದ ವೆಂಕಟಪುರ ಯೋಗೇಶ್ ಜಿಬಿ ಗೌಡ್ರು, ಹೊಸಹಳ್ಳಿ ದೇವರಾಜು , ಮುನಿಯೂರ್ ರಂಗಸ್ವಾಮಿ, ನಟರಾಜು, ಹೆಗ್ಗೆರೆ ರಂಜು, ರಾಮಚಂದ್ರ, ಎಡಿಗಿಹಳ್ಳಿ ವಿಶ್ವನಾಥ್, ಪ್ರಕಾಶ್ ಗೊಟ್ಟಿಗೆರೆ, ತ್ಯಾಗರಾಜು, ಶಿವಾನಂದ್, ದೇವರಾಜ್ ಭುವನಹಳ್ಳಿ, ಇನ್ನು ಹಲವರು ಇದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *