Janataa24 NEWS DESK

ಪಾವಗಡ: ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಫೆಬ್ರವರಿ 19ಕ್ಕೆ ತಾಲ್ಲೂಕು ಕಚೇರಿ ಮುಂದೆ ಬೃಹತ್ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷ ಪೂಜಾರಪ್ಪ ತಿಳಿಸಿದ್ದಾರೆ.
ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಾರ್ಮಿಕರ ಸಂಘ ಮತ್ತು ವಿವಿಧ ಸಂಘಟನೆಗಳಿಂದ ಮುಷ್ಕರ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೂಜಾರಪ್ಪ ತಿಳಿಸಿದರು.

ತುಂಗಭದ್ರಾ ದಿಂದ ತಾಲ್ಲೂಕಿಗೆ ಕುಡಿಯಲು ಸುಮಾರು 2,250 ಕೋಟಿ ರೂ. ಕಾಮಗಾರಿ ಮಂಜೂರಾಗಿದ್ದು ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ವಿಳಂಬದ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಬೇಜವಾಬ್ದಾರಿತನದ ಉತ್ತರ ನೀಡುತ್ತಿದ್ದಾರೆ ಭದ್ರ ಮೇಲ್ದಂಡೆ ಯೋಜನೆಯ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿ ತಾಲೂಕಿನ ಜನತೆಗೆ ಕುಡಿಯಲು ನೀರು ಕೊಡಲು ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಹಾಗೆಯೇ ತಾಲೂಕಿನ ಕೆಲವು ಕೆರೆಗಳಿಗೆ ನೀರನ್ನು ಹರಿಸುವ ಎತ್ತಿನಹೊಳೆ ಕಾಮಗಾರಿಯ ಸಹ ವಿಳಂಬವಾಗುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ. ಹಾಗೂ ಯಾವುದೇ ಕೆರೆಯು ಇದುವರೆಗೂ ಅಭಿವೃದ್ಧಿಯಾಗಿಲ್ಲ ಕೆರೆಗಳೆಲ್ಲ ಜಾಲಿ ತುಂಬಿ ತುಳುಕುತ್ತಿದೆ ಮತ್ತು ಹತ್ತು ವರ್ಷ ಹಿಂದೆ ಯಾವ ಕೆರೆ ಅಭಿವೃದ್ಧಿ ಆಗಿದೆ ಮತ್ತು ಎಷ್ಟು ಹಣ ಖರ್ಚಾಗಿದೆ ಎಂಬುದರ ಬಗ್ಗೆ ತನಿಖೆಯಾಗಲಿ ಎಂದು ರೈತ ಸಂಘ ಪೂಜಾರಪ್ಪ ಅಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಬಡ ಜನರು ಗ್ರಾಮ ಪಂಚಾಯತಿ ಮಟ್ಟದಲ್ಲಿ ಯಾವುದೇ ಒಂದು ಈ ಖಾತೆ ಮತ್ತು ಖಾತೆ ಮಾಡಿಸಲು ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ಹದಿನೈದರಿಂದ ಮೂವತ್ತು ಸಾವಿರ ರೂ ಲಂಚ ಕೇಳುತ್ತಿದ್ದಾರೆ ಅದನ್ನು ಅಧಿಕಾರಿಗಳು ತಡೆದು ಬಡ ಜನಗಳಿಗೆ ಯಾವುದೇ ಲಂಚ ಕೇಳದೆ ಖಾತೆಗಳನ್ನು ಮಾಡಬೇಕೆಂದು ಒತ್ತಾಯ ಮಾಡಿದರು.
ಪಟ್ಟಣದಲ್ಲಿ ದೊಡ್ಡ ದೊಡ್ಡ ವಾಹನಗಳು ಸಂಚರಿಸಲು ತೊಂದರೆ ಆಗುತ್ತಿದ್ದು ಬೈಪಾಸ್ ರಸ್ತೆ ಮಾಡಲು ಹಾಗೂ ಇತ್ತೀಚಿನ ದಿನಗಳಲ್ಲಿ ಹಂದಿ,ಕರಡಿ,ಚಿರತೆ, ಸೇರಿದಂತೆ ಕಾಡು ಪ್ರಾಣಿಗಳು ಹೊಲಗಳು ಮತ್ತು ಊರುಗಳಿಗೆ ನಗುತ್ತಿದ್ದು ಇವುಗಳನ್ನು ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಗಳಿಗೆ ಸಾಗಿಸಬೇಕಾಗಿ ಅರಣ್ಯ ಅಧಿಕಾರಿಗಳಿಗೆ ಈ ಮೂಲಕ ತಿಳಿದಿಪಡಿಸಿದರು.
ಪಾವಗಡದಲ್ಲಿ ರೇಷನ್ ಕಾರ್ಡ್ ಇಲ್ಲದೇ ಇರುವಂತಹ ಬಡಜನರಿಗೆ ರೇಷನ್ ಕಾರ್ಡ್ ಸೇರ್ಪಡೆ ಮತ್ತು ಹೊಸ ರೇಷನ್ ಕಾರ್ಡ್ ತೆಗೆಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಅಧಿಕಾರಿ ವರ್ಗದವರಿಗೆ ಮನವಿ ಮಾಡಿದರು .

ತಾಲೂಕಿನಾದ್ಯಂತ ಇವೆಲ್ಲವನ್ನೂ ಒಳಗೊಂಡಂತೆ ಇನ್ನೂ ಮುಂತಾದ ಸಮಸ್ಯೆಗಳ ಬಗ್ಗೆ ಫೆಬ್ರವರಿ 19ರಂದು ಬೃಹತ್ ಮುಷ್ಕರ ಮಾಡಲಾಗುತ್ತೆ ಎಂದು ಈ ಮೂಲಕ ತಿಳಿಸಿದರು .
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಲ್ಲಿಗಾನಹಳ್ಳಿ ಮಂಜುನಾಥ್ ಪ್ರಧಾನ ಕಾರ್ಯದರ್ಶಿ ನರಸನ್ನ, ಸಂಘದ ಕಾರ್ಯದರ್ಶಿ ಚಿತ್ತಯ್ಯ, ಯುವ ಘಟಕದ ಅಧ್ಯಕ್ಷರು ಕೆ ಎಚ್ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಿವು, ಗುಂಡ್ಲಹಳ್ಳಿ ರಾಮಂಜಿ ಸೇರಿದಂತೆ ಸಂಘದ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ
ಪಾವಗಡ: ಇಮ್ರಾನ್ ಉಲ್ಲಾ.