UPSC: ಲೋಕಸಭಾ ಚುನಾವಣಾ ಹಿನ್ನೆಲೆ Prelims ಪರೀಕ್ಷೆ ಮುಂದೂಡಿದ UPSC ಆಯೋಗ
Janataa24 NEWS DESK

ನವದೆಹಲಿ: ಲೋಕಸಭೆ ಚುನಾವಣೆ (LokaSabha 2024) ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗದ (UPSC) ಪೂರ್ವಭಾವಿ ಪ್ರಿಲಿಮ್ಸ್ ಪರೀಕ್ಷೆಯನ್ನು (UPSC Prelims) ಮುಂದೂಡಿಕೆ ಮಾಡಲಾಗಿದೆ. 2024ನೇ ಸಾಲಿನ ಪ್ರಿಲಿಮ್ಸ್ ಪರೀಕ್ಷೆಯನ್ನು ಮೇ 26ರ ಬದಲು ಜೂನ್ 16ರಂದು ನಡೆಸಲಾಗುವುದು ಎಂದು ಲೋಕ ಸೇವಾ ಆಯೋಗ ತಿಳಿಸಿದೆ. ಮೇ 26ರಂದು ನಡೆಸಲಾಗುವುದು ಎಂದು ಯುಪಿಎಸ್‌ಸಿ ಯು ಮಾರ್ಚ್ 19ರಂದು ಘೋಷಿಸಿತ್ತು. ಈಗ ಚುನಾವಣೆ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ.
“ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯುಪಿಎಸ್‌ಸಿಯು ಪ್ರಿಲಿಮ್ಸ್ ಪರೀಕ್ಷೆಯನ್ನು ಮುಂದೂಡಲು ತೀರ್ಮಾನಿಸಿದೆ. ಜೂನ್ 16ರಂದು ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ನಡೆಸಲಾಗುತ್ತದೆ. ಭಾರತೀಯ ಅರಣ್ಯ ಸೇವಾ(IFS) ಪರೀಕ್ಷೆಯನ್ನೂ ಜೂನ್ 16ರಂದು ನಡೆಸಲು ತೀರ್ಮಾನಿಸಲಾಗಿದೆ” ಎಂದು ಮಾಹಿತಿ ನೀಡಿದೆ. ಯುಪಿಎಸ್‌ಸಿ ಮುಖ್ಯ ಪರೀಕ್ಷೆಯು ಸೆಪ್ಟೆಂಬರ್ 20ರಿಂದ 5 ದಿನಗಳವರೆಗೆ ನಡೆಯಲಿದೆ. ಪ್ರತಿ ವರ್ಷವೂ ಯುಪಿಎಸ್‌ಯು ಮೂರು ಹಂತಗಳಲ್ಲಿ ನಾಗರಿಕ ಸೇವಾ(Civil Service) ಪರೀಕ್ಷೆ ನಡೆಸುತ್ತದೆ.
https://www.janataa24.com/lokasabha-2024-what-is-the-plan-b-of-fikra-dalpatis-in-bjp-jds-alliance/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv