Document

KNR: ಕೆ.ಎನ್. ರರಾಜಣ್ಣನಿಗೆ ವಾರ್ನಿಂಗ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ.

 

Janataa24 NEWS DESK

KNR: ಕೆ.ಎನ್. ರರಾಜಣ್ಣನಿಗೆ ವಾರ್ನಿಂಗ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ.

Knr-kn-rajanna

 

 

ಕಾಂಗ್ರೆಸ್‌ನಲ್ಲಿ ಈಗ ಎರಡೇ ಚರ್ಚೆ.

ಒಂದು ಸಿಎಂ ಕುರ್ಚಿ. ಇನ್ನೊಂದು ಕೆಪಿಸಿಸಿ ಪಟ್ಟ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಬಣಗಳ ಮಧ್ಯೆ ಬಹಿರಂಗ ಹೇಳಿಕೆಗಳು ಜೋರಾಗಿದೆ. ಇದ್ರ ಮಧ್ಯೆ ಡಿಕೆಶಿ ವಿರುದ್ಧ ಮಾತನಾಡ್ತಿರೋ ಕೆ.ಎನ್. ರಾಜಣ್ಣಗೆ ಹೈಕಮಾಂಡ್‌ ಎಚ್ಚರಿಕೆ ಸಂದೇಶ ರವಾನೆಯಾಗಿದೆ.

ರಾಜಣ್ಣನಿಗೆ ವಾರ್ನಿಂಗ್‌!

ಸಚಿವ ಕೆ.ಎನ್.ರಾಜಣ್ಣಗೆ ಕಾಂಗ್ರೆಸ್ ಹೈಕಮಾಂಡ್​ ಖಡಕ್​​ ವಾರ್ನಿಂಗ್​​ ಕೊಟ್ಟಿದೆ. ನಾಯಕರ ವಿರುದ್ಧ ಬಹಿರಂಗ ಹೇಳಿಕೆ‌ ನೀಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ. ಈ ಹಿಂದೆ ಈ ಹಿಂದೆ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ ಅಂತ ಖರ್ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಪದೆ ಪದೇ ಸಚಿವ ಕೆ.ಎನ್. ರಾಜಣ್ಣ ಪಕ್ಷದ ಶಿಸ್ತಿನ ವಿರುದ್ಧ ಹೇಳಿಕೆ ನೀಡ್ತಿದ್ದಾರೆ. ಡಿಸಿಎಂ ಡಿಕೆಶಿ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸ್ತಿದ್ದಾರೆ. ಹೀಗಾಗಿ ರಾಜಣ್ಣ ನಡೆಯ ಬಗ್ಗೆ ಡಿಕೆಶಿ ಟೀಂ ತೀವ್ರ ಆಕ್ರೋಶ ಹೊರ ಹಾಕಿತ್ತು. ಅಷ್ಟೇ ಅಲ್ಲದೇ ಮೊನ್ನೆ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ದೂರು ಕೊಟ್ಟಿದ್ರು. ಇದರ ಬೆನ್ನಲ್ಲೇ ರಾಜಣ್ಣಗೆ ಎಐಸಿಸಿ ಅಧ್ಯಕ್ಷರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಬಲವಾದ ಕಣ್ಣಿಟ್ಟಿರುವ ಸಚಿವ ಜಾರಕಿಹೊಳಿ, ಸಚಿವ ಕೆ.ಎನ್ ರಾಜಣ್ಣ, ಪೂರ್ಣಪ್ರಮಾಣದ ಅಧ್ಯಕ್ಷರ ನೇಮಕಕ್ಕೆ 6 ತಿಂಗಳಿಂದ ಪಟ್ಟು ಹಿಡಿದಿದ್ದಾರೆ. ಇದೆಲ್ಲದರ ಮಧ್ಯೆ ಕೆ.ಎನ್. ರಾಜಣ್ಣ ಯಾರ ಮಾತಿಗೂ ಬಗ್ಗುವಂತೆ ಕಾಣ್ತಿರಲಿಲ್ಲ. ಆದರೆ ಈಗ ಹೈಕಮಾಂಡ್ ನಾಯಕರೇ ನೇರವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *