Document

KeralaFlood: ಕೇರಳ ಪ್ರಕೃತಿ ವಿಕೋಪ, ಜನ ಸೇವೆಗೆ ಹೊರಟ ಮೈಸೂರು ವೈದ್ಯರ ತಂಡ.

Janataa24 NEWS DESK

KeralaFlood: ಕೇರಳ ಪ್ರಕೃತಿ ವಿಕೋಪ, ಜನ ಸೇವೆಗೆ ಹೊರಟ ಮೈಸೂರು ವೈದ್ಯರ ತಂಡ.
KeralaFlood: ಕೇರಳ ಪ್ರಕೃತಿ ವಿಕೋಪ, ಜನ ಸೇವೆಗೆ ಹೊರಟ ಮೈಸೂರು ವೈದ್ಯರ ತಂಡ.

ಕೇರಳದ ವೈನಾಡಿನಲ್ಲಿ ಅತಿ ಹೆಚ್ಚು ಮಳೆಯಿಂದ ಪ್ರಕೃತಿ ವಿಕೋಪ ದಿಂದ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಜನರನ್ನು ರಕ್ಷಿಸಲು ಮತ್ತು ಜನರ ಆರೋಗ್ಯ ತಪಾಸಣೆ ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ವತಿಯಿಂದ ತಜ್ಞ ವೈದ್ಯರು ಮತ್ತು ತಂಡವನ್ನು ಔಷಧಿಗಳೊಂದಿಗೆ ನಿಯೋಜನೆ ಮಾಡಲಾಗಿದೆ.

 

 

ಈ ತಂಡವನ್ನೂ ಕರ್ನಾಟಕ ಮತ್ತು ಕೇರಳ ಗಡಿ ಭಾಗವಾದ ಬಾವಲಿ ಚೆಕ್ ಪೋಸ್ಟ್ ನಲ್ಲಿ ಹುಣಸೂರು ಉಪ ವಿಭಾಗಾಧಿಕಾರಿ ಡಾ .ಎನ್.ಸಿ. ವೆಂಕಟರಾಜು , ತಹಶೀಲ್ದಾರ್ ಶ್ರೀನಿವಾಸ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್ ರವರು ತಜ್ಞ ವೈದ್ಯರಾದ ಡಾ.ಶ್ರೀನಿವಾಸ್, ಡಾ. ನಾಗೇಶ್ ರಾವ್, ಡಾ.ಶೇಷಾದ್ರಿ, ಹಿರಿಯ ಔಷಧ ವಿತರಣಾಧಿಕಾರಿ ಉಮೇಶ್ ತಂಡವನ್ನೂ ಕೇರಳ ವೈನಾಡಿಗೆ ಕಳುಹಿಸಿಕೊಟ್ಟರು.

 

 

ಈ ಸಂದರ್ಭದಲ್ಲಿ ಹುಣಸೂರು ಉಪ ವಿಭಾಗಾಧಿಕಾರಿ ಡಾ ಎನ್.ಸಿ. ವೆಂಕಟರಾಜು ರವರು ಮಾತನಾಡಿ ನಮ್ಮ ಜಿಲ್ಲಾ ಆಡಳಿತ ವತಿಯಿಂದ ನುರಿತ ತಜ್ಞರನ್ನು ನಿಯೋಜನೆ ಮಾಡಿ ಕೇರಳ ವೈನಾಡಿಗೆ ಕಳಿಸಿ ಕೊಡುತ್ತಿದ್ದೇವೆ ಹಾಗೂ ನಮ್ಮ ಜಿಲ್ಲೆಯಲ್ಲೂ ಸಹ ಅಗತ್ಯ ಔಷಧಿಗಳೊಂದಿಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

 

 

ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ನುರಿತ ತಜ್ಞ ವೈದ್ಯರನ್ನು ಕೇರಳದ ವೈನಾಡಿಗೆ ಜಿಲ್ಲಾಡಳಿತ ವತಿಯಿಂದ ಕಳಿಸುತ್ತಿದ್ದೇವೆ. ಜೊತೆಗೆ ನಮ್ಮ ತಾಲೂಕಿನ ದೊಡ್ಡ ಬೈರನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ತುರ್ತು ವಾಹನವನ್ನು, ನಿಯೋಜನೆ ಮಾಡಿಕೊಂಡಿದ್ದೇವೆ ಜೊತೆಗೆ ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಐದು ತುರ್ತು ವಾಹನ ಮತ್ತು 10 ಬೆಡ್ ಗಳ ನ್ನೂ ಸಿದ್ದಪಡಿಸಿ ಕೊಂಡಿದ್ದೇವೆ. ಹಾಗೂ ಮುಂಜಾಗ್ರತೆ ಕ್ರಮವಾಗಿ ಅಗತ್ಯ ಔಷಧಿಗಳನ್ನು ಸಹ ಇಟ್ಟುಕೊಳಲಾಗಿದೆ ಎಂದು ತಿಳಿಸಿದರು.

ಸಂದರ್ಭದಲ್ಲಿ ಡಾ.ವರ್ಷ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗಳಾದ ನಾಗೇಂದ್ರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಇನ್ನಿತರರು ಹಾಜರಿದ್ದರು.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

Document

Leave a Reply

Your email address will not be published. Required fields are marked *