Janataa24 NEWS DESK
Internal Reservation: ಜಾತಿ ಸಮೀಕ್ಷೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿದಾಗ ಮೂಲ ಜಾತಿಯ ಹೆಸರನ್ನು ನಮೂದಿಸಿ, ಮೂರ್ತಿ ಸಿಎಸ್ ಮನವಿ.

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಭೀಮೋತ್ಸವ ಆಚರಣೆ ಸಮಿತಿ ಸಂಸ್ಥಾಪಕರಾದ ಮೂರ್ತಿ ಸಿಎಸ್ ಇವರ ನೇತೃತ್ವದಲ್ಲಿ ಒಳ ಮೀಸಲಾತಿಗಾಗಿ ಜಾತಿ ಸಮೀಕ್ಷೆ ಗಾಗಿ ಅಧಿಕಾರಿಗಳು ಮನೆ ಮನೆ ಮನೆಗೆ ಬಂದಾಗ ನಿಮ್ಮ ಮೂಲ ಜಾತಿಯ ಹೆಸರನ್ನು ನಮೂದಿಸಿ ಎಂದು ಮಾದಿಗ ಮತ್ತು ಹೊಲೆಯ ಸಮುದಾಯ ದಿಂದ ಜಂಟಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮೂರ್ತಿ ಸಿ ಎಸ್ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಒಳ ಮೀಸಲಾತಿ ವರ್ಗೀಕರಣ ಜಾರಿಗೊಳಿಸುವ ವಿಚಾರದಲ್ಲಿ ಈಗಾಗಲೇ ರಾಜ್ಯ ಸರ್ಕಾರದಲ್ಲಿ ಸದಾಶಿವ ಆಯೋಗ ವರದಿ. ಕಾಂತರಾಜ್ ಆಯೋಗ ವರದಿ. ಮತ್ತು ಮಾಧುಸ್ವಾಮಿ ಕಮಿಟಿ ಇದ್ದು. ಆದರೆ ಕರ್ನಾಟಕ ರಾಜ್ಯದಲ್ಲಿ ತಮ್ಮ ಜಾತಿಯ ಹೆಸರನ್ನು ಹೇಳಿಕೊಳ್ಳದ AK. AA. AD.SC ಹರಿಜನ. ಎಂದು ಪ್ರಮಾಣ ಪತ್ರಗಳನ್ನು ಪಡೆದಿರುವ ಗೊಂದಲವಿರುವ ಕಾರಣ.ಇದೆ ತಿಂಗಳು :06ರಿಂದ 26 ರವರೆಗೆ ಜಾತಿ ಸಮೀಕ್ಷೆ ಮಾಡಲಿದ್ದು. ರಾಜ್ಯದಲ್ಲಿ ಮನೆ ಮನೆಗೆ ಭೇಟಿ ನೀಡಿ ಜಾತಿ ಸಮೀಕ್ಷೆಯನ್ನು ಮಾಡಿ ನಿಖರವಾದ ಮಾಹಿತಿಯನ್ನು ಸಂಗ್ರಹಿಸಬೇಕೆಂದು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ,
ಆದರಿಂದ ನಮ್ಮ ತುರುವೇಕೆರೆ ತಾಲೂಕಿನ ಸಮುದಾಯದ ಬಂಧುಗಳು ಪ್ರತಿಯೊಂದು ಗ್ರಾಮಗಳಲ್ಲಿ ನಮ್ಮ ಗ್ರಾಮಗಳಿಗೆ ಸಮೀಕ್ಷೆ ಮಾಡಲು ಅಧಿಕಾರಿಗಳು ಬಂದಾಗ ಪರಿಶಿಷ್ಟ ಜಾತಿಯಲ್ಲಿ ಆದಿ ಕರ್ನಾಟಕವಿದ್ದರೆ ಮಾದಿಗ ಎಂದು ಆದಿ ದ್ರಾವಿಡ ಇದ್ದರೆ ಹೊಲೆಯ ಎಂದು ಆಯಾ ಮೂಲ ಜಾತಿಯ ಹೆಸರನ್ನು ನೊಂದಾಯಿಸಬೇಕು ಮತ್ತು ನಮ್ಮ ಮಾದಿಗ ಮತ್ತು ಹೊಲೆಯ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಈ ಪತ್ರಿಕಾಗೋಷ್ಠಿಯ ಮೂಲಕ ಬಿಮೋತ್ಸವ ಆಚರಣೆ ಸಮಿತಿ ಸಂಸ್ಥಾಪಕ ಮೂರ್ತಿ ಸಿಎಸ್ ಕರೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಿನ ದಲಿತ ಮುಖಂಡರುಗಳಾದ ಕೃಷ್ಣ ಮಾದಿಗ, ಡೊಂಕಿಹಳ್ಳಿ ರಾಮಣ್ಣ, ದಂಡಿನ ಶಿವರಕುಮಾರ್, ಮಲ್ಲೂರ್ ತಿಮ್ಮೇಶ್, ತೊರೆಮಾವಿನಹಳ್ಳಿ ಚಂದ್ರು, ಶ್ರೀನಿವಾಸ್ ಬೀಚನಹಳ್ಳಿ, ಕೃಷ್ಣ ಹೊನ್ನೇನಹಳ್ಳಿ, ಜಗದೀಶ್ ಕುಣಿಕೆನಳ್ಳಿ, ನರಸಿಂಹಯ್ಯ ಹೆಗ್ಗೆರೆ, ಪುಟ್ಟರಾಜು ಕಾಚಿಹಳ್ಳಿ, ರಾಯಣ್ಣ, ಪ್ರಸನ್ನ ಕುಣಿಕೇನಹಳ್ಳಿ, ಶಂಕರಪ್ಪ ಕುಣಿಕೇನಹಳ್ಳಿ, ಕೃಷ್ಣಮೂರ್ತಿ ಸಾಸಲು, ಶಶಿ ಗುಡ್ಡೆನಹಳ್ಳಿ ಮುನಿಯೂರು ರಂಗಸ್ವಾಮಿ, ಇನ್ನು ಅನೇಕರು ಭಾಗವಹಿಸಿದ್ದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.